ಮೋದಿ ಇರೋದಕ್ಕೆ ಪೆಟ್ರೋಲ್ ಬೆಲೆ ಇಷ್ಟಿದೆ.. ಇಲ್ಲದಿದ್ರೆ ₹200 ರೂ ಆಗ್ತಿತ್ತು..-ಮುರುಗೇಶ್ ನಿರಾಣಿ

ಮೋದಿ ಇರೋದಕ್ಕೆ ಪೆಟ್ರೋಲ್ ಬೆಲೆ ಇಷ್ಟಿದೆ.. ಇಲ್ಲದಿದ್ರೆ ₹200 ರೂ ಆಗ್ತಿತ್ತು..-ಮುರುಗೇಶ್ ನಿರಾಣಿ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ್ ನಿರಾಣಿ.. ಮೋದಿ ಇರೋದಕ್ಕೆ ಪೆಟ್ರೋಲ್ ರೇಟ್ ಇಷ್ಟು ಆಗಿದೆ.. ಬೇರೆ ಸರ್ಕಾರ ಇದ್ದಿದ್ದರೆ ಇಷ್ಟೊತ್ತಿಗೆ ಪೆಟ್ರೋಲ್ ರೇಟ್ 200 ರೂಪಾಯಿ‌ ಆಗ್ತಿತ್ತು ಎಂದಿದ್ದಾರೆ. ಅಲ್ಲದೇ ಪಾಲಿಕೆ ಚುನಾವಣೆಯ ಫಲಿತಾಂಶವನ್ನು ನೋಡಿ.. ಜನರಿಗೆ ಯಾವುದೇ ಬೇಸರ‌ ಇದ್ದರೆ ನಮಗೆ ವೋಟ್ ಹಾಕ್ತಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮೋದಿ ‘GDP’ ಏರುತ್ತಿದೆ ಅಂತಿದ್ರು, GDP ಅಂದ್ರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಅಂತ ಅರ್ಥವಾಯ್ತು- ರಾಹುಲ್ ಗಾಂಧಿ

ಮುಂದುವರೆದು, ಪಾಲಿಕೆ ಚುನಾವಣೆಯು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ.. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಫಲಿತಾಂಶ ಕ್ಲಿಯರ್ ಆಗಿದೆ.. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಳೆದ ಬಾರಿಗಿಂತ ಅತಿ ಹೆಚ್ಚು ಸ್ಥಾನದ ಗೆಲುವು ನಮ್ಮದಾಗಿದೆ. ಸರ್ಕಾರದ ಸಾಧನೆ ಮೆಚ್ಚಿ ಬಿಜೆಪಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಗೆಲ್ಲದಿರುವ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಮುಂಬರುವ ಎರಡೂ ವಿಧಾನಸಭೆ ಬೈ ಎಲೆಕ್ಷನ್ ಕೂಡ ನಾವೇ ಗೆಲ್ಲುತ್ತೇವೆ ಎಂದಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ‌ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯ ನಡೆಯಲಿದೆ ಎಂದು ಅಮಿತ್ ಶಾ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿ.. ವರಿಷ್ಠರು ಏನ್ ಹೇಳ್ತಾರೋ ಅದನ್ನು ನಾವು ಒಪ್ಪಿಕೊಳ್ಳಬೇಕು. ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಕೂಡ ಉತ್ತಮ ನಾಯಕರು. ಯಡಿಯೂರಪ್ಪ ಮಾರ್ಗದರ್ಶನ ಹಾಗೂ ಬಸವರಾಜ ಬೊಮ್ಮಾಯಿ‌ ನಾಯಕತ್ವ ಬೇಕಾಗಿದೆ. ಪಾಲಿಕೆಯಲ್ಲಿ‌ ಯಡಿಯೂರಪ್ಪ ಅವರು ಪ್ರಚಾರ ಮಾಡಿಲ್ಲ. ಬಸವರಾಜ ಬೊಮ್ಮಾಯಿ‌ ಕೂಡ ಪ್ರಚಾರದಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ.

Source: newsfirstlive.com Source link