‘ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಕ್ರಿಕೆಟ್​​ ಟೀಮ್​​ನಂತೆ ಕೆಲಸ ಮಾಡಿದ ಬಿಜೆಪಿ’- ಶಾಸಕ ರಾಜೂಗೌಡ ಹೀಗಂದಿದ್ಯಾಕೆ?

‘ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಕ್ರಿಕೆಟ್​​ ಟೀಮ್​​ನಂತೆ ಕೆಲಸ ಮಾಡಿದ ಬಿಜೆಪಿ’- ಶಾಸಕ ರಾಜೂಗೌಡ ಹೀಗಂದಿದ್ಯಾಕೆ?

ಬೆಂಗಳೂರು: ಕ್ರಿಕೆಟ್​​​ ಟೀಮ್​​ನಂತೆ ಕೆಲಸ ಮಾಡಿದ್ದರ ಫಲವಾಗಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಬಿಜೆಪಿ ಶಾಸಕ ರಾಜೂಗೌಡ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ರಾಜೂಗೌಡ, ಇಂದಿನ ಮೂರು ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಲ್ಬುರ್ಗಿಯಲ್ಲೂ ಬಿಜೆಪಿಯವರೇ ಮೇಯರ್ ಆಗ್ತಾರೆ. ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದೇವೆ. ಕ್ರಿಕೆಟ್​ನಂತೆ ABC ತಂಡದಂತೆ ಕೆಲಸ ಮಾಡಿದ್ದೇವೆ. ಹೀಗಾಗಿ ಇಂದು ಬಿಜೆಪಿ ಗೆಲುವು ಸಾಧಿಸಿದೆ ಎಂದರು.

ಹೈದರಾಬಾದ್​ ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನ ನೀಡಿದ್ದರೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಿದ್ದೆವು. ಬಿಜೆಪಿಗೆ ಹೈದರಾಬಾದ್​ ಕರ್ನಾಟಕದ ಜನ ಹೆಚ್ಚು ಉತ್ಸಾಹದಿಂದ ಮತ ಹಾಕುತ್ತಿದ್ದರು ಎಂದು ಹೇಳುವ ಮೂಲಕ ರಾಜೂಗೌಡ ತಮಗೆ ಸಚಿವ ಸ್ಥಾನ ನೀಡದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ಸನ್ನು ಜನ ತಿರಸ್ಕಾರ ಮಾಡಿದ್ದಾರೆ. ಅಧಿಕಾರ ಇಲ್ಲದೇ ಇರುವಾಗಲೇ ಕಾಂಗ್ರೆಸ್ ನಾಯಕರು ಇಷ್ಟು ಕಿತ್ತಾಡುತ್ತಿದ್ದಾರೆ. ಇನ್ನು ಚುನಾವಣೆ ಯಾವಾಗ ಅನ್ನೋದೇ ಗೊತ್ತಿಲ್ಲ. ಆಗಲೇ ಕಾಂಗ್ರೆಸ್​ನವರು ನಾನೇ ಮುಂದಿನ ಸಿಎಂ ಎಂದು ಜಗಳವಾಡುತ್ತಿದ್ದಾರೆ. ಹೀಗಾಗಿಯೇ ಜನ ಕಾಂಗ್ರೆಸ್​ಗೆ ಮತ ಹಾಕದೆ ದೂರ ಇಟ್ಟಿದ್ದಾರೆ ಎಂದರು.

ಇದನ್ನೂ ಓದಿ: ನಿರೀಕ್ಷೆ ತಕ್ಕಂತೆ ಚುನಾವಣಾ ಫಲಿತಾಂಶ ಬಂದಿಲ್ಲ, ತೀರ್ಪು ಒಪ್ಪಿಕೊಳ್ತೇವೆ -ಸಿದ್ದರಾಮಯ್ಯ

Source: newsfirstlive.com Source link