ಪಾಕ್​ನ ನರಿಬುದ್ಧಿ ಬೆತ್ತಲು ಮಾಡಿದ ಇರಾನ್; ತಾಲಿಬಾನಿಗಳಿಗೆ ಸಹಾಯ ಮಾಡಿದ್ದಕ್ಕೆ ಇಲ್ಲಿದೆ ಸಾಕ್ಷಿ

ಪಾಕ್​ನ ನರಿಬುದ್ಧಿ ಬೆತ್ತಲು ಮಾಡಿದ ಇರಾನ್; ತಾಲಿಬಾನಿಗಳಿಗೆ ಸಹಾಯ ಮಾಡಿದ್ದಕ್ಕೆ ಇಲ್ಲಿದೆ ಸಾಕ್ಷಿ

ಸಂಪೂರ್ಣ ಅಫ್ಘಾನಿಸ್ತಾನವೇ ತಾಲಿಬಾನಿಗಳ ಕೈವಶವಾದರೂ ಪಂಜ್​ಶಿರ್ ಪ್ರಾಂತ್ಯವೊಂದು ಮಾತ್ರ ಅಫ್ಘಾನ್ ಆರ್ಮಿಯ ಕೈನಲ್ಲಿತ್ತು. ಸ್ಥಳೀಯ ನಾಯಕ ಪಂಜ್​ಶಿರ್ ಪ್ರಾಂತ್ಯವನ್ನ ಬಿಟ್ಟುಕೊಡುವ ಮಾತೇ ಇಲ್ಲ ಎಂದಿದ್ದರು. ಅಲ್ಲದೇ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್​ಗೆ ಕೂಡ ಪಂಜ್​ಶಿರ್ ಪ್ರಾಂತ್ಯದಲ್ಲಿ ಆಶ್ರಯ ನೀಡಲಾಗಿತ್ತು.

ಇದನ್ನೂ ಓದಿ: ಪಂಜ್​ಶೀರ್​ ತಾಲಿಬಾನಿಗಳ ಪಾಲಾಗಲು ಸಹಾಯ ಮಾಡಿದ್ದು ಪಾಕ್ -ವರದಿ

ಇದೀಗ ನಿನ್ನೆ ಪಂಜ್​ಶಿರ್​ನಲ್ಲಿ ನಡೆದ ತಾಲಿಬಾನಿಗಳು ಮತ್ತು ಅಫ್ಘಾನ್ ಸೇನೆಯ ನಡುವಿನ ಕದನದಲ್ಲಿ ತಾಲಿಬಾನ್ ಪಂಜ್​ಶಿರ್​ನ್ನು ವಶಪಡಿಸಿಕೊಂಡಿದೆ. ಆದ್ರೆ ತಾಲಿಬಾನ್ ಅಫ್ಘಾನಿಸ್ತಾನವನ್ನ ವಶಪಡಿಸಿಕೊಳ್ಳಲು ಪಾಕಿಸ್ತಾನ ಸಹಾಯ ಮಾಡಿದೆ ಎನ್ನಲಾಗಿದೆ.
ಇದಕ್ಕೆ ಪೂರಕವೆಂಬಂತೆ ಇರಾನ್ ಮೂಲದ ಮಾಧ್ಯಮಗಳು ವಿಡಿಯೋವೊಂದನ್ನ ಬಿಡುಗಡೆ ಮಾಡಿವೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಯುದ್ಧವಿಮಾನವೊಂದು ಪಂಜ್​ಶಿರ್ ಪ್ರಾಂತ್ಯದ ಮೇಲೆ ಹಾರಾಟ ನಡೆಸಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ‘ಯುದ್ಧ ಮುಗಿದಿದೆ’ ಎಂದ ತಾಲಿಬಾನ್ -ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಯಾವೆಲ್ಲಾ ದೇಶಗಳಿಗೆ ಆಹ್ವಾನ..?

ತಾಲಿಬಾನಿಗಳಿಗೆ ಪಂಜ್​ಶಿರ್​ನಲ್ಲಿರುವ ಅಫ್ಘಾನ್ ಸೇನೆಯನ್ನು ಎದುರಿಸುವುದು ಸುಲಭದ ಕೆಲಸವಾಗಿರ್ಲಿಲ್ಲ, ಇದಕ್ಕಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಯುದ್ಧವಿಮಾನಗಳ ನೆರವು ಬೇಕಾಗಿತ್ತು. ಈ ವೇಳೆ ಪಾಕಿಸ್ತಾನ ತಾಲಿಬಾನಿಗಳಿಗೆ ಶಸ್ತ್ರಾ​ಸ್ತ್ರಗಳನ್ನು ಪೂರೈಸಿದೆ. ಈ ಮೂಲಕ ಅಫ್ಘಾನ್ ಸೇನೆಯ ವಿರುದ್ಧದ ಕದನ ಗೆಲ್ಲಲು ತಾಲಿಬಾನಿಗಳಿಗೆ ಸಾಧ್ಯವಾಗಿದೆ ಎನ್ನಲಾಗಿದೆ.

Source: newsfirstlive.com Source link