ವ್ಯಾಕ್ಸಿನ್​ ಸರ್ಟಿಫಿಕೇಟ್​ ಇಲ್ಲ ಅಂದ್ರೆ ಕೊಪ್ಪಳ DC ಕಚೇರಿಗೆ ನೋ ಎಂಟ್ರಿ..!

ವ್ಯಾಕ್ಸಿನ್​ ಸರ್ಟಿಫಿಕೇಟ್​ ಇಲ್ಲ ಅಂದ್ರೆ ಕೊಪ್ಪಳ DC ಕಚೇರಿಗೆ ನೋ ಎಂಟ್ರಿ..!

ಕೊಪ್ಪಳ: ಚಾಮರಾಜನರ, ಮಂಡ್ಯ ಜಿಲ್ಲೆಗಳಲ್ಲಿ ಇತ್ತೀಚೆಗೆ ತೀವ್ರ ಟೀಕೆಗೆ ಗುರಿಯಾಗಿದ್ದ ಕಡ್ಡಾಯ ಕೊರೊನಾ ಲಸಿಕಾ ಅಭಿಯಾನ ಇದೀಗ ಕೊಪ್ಪಳದಲ್ಲೂ ಆರಂಭವಾಗಿದ್ದು, ಲಸಿಕೆ ಪಡೆದ ಪ್ರಮಾಣ ಪತ್ರ ಇದ್ದರಷ್ಟೇ ಜಿಲ್ಲಾಡಳಿತ ಭವನಕ್ಕೆ ಪ್ರವೇಶ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

blank

ಹೌದು ಕೊಪ್ಪಳದ ಜಿಲ್ಲಾಡಳಿತ ಭವನಕ್ಕೆ ಇನ್ಮುಂದೆ ಕಾಲಿಡಬೇಕಾದ್ರೆ ಲಸಿಕಾ ಪ್ರಮಾಣ ಪತ್ರ ಕಡ್ಡಾಯ. ಜಿಲ್ಲಾಡಳಿತ ಭವನಕ್ಕೆ ಬರುವ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರಿಗೆ ಕೋವಿಡ್-19 ಲಸಿಕೆ ಕಡ್ಡಾಯಗೊಳಿಸಿದ್ದು, ಲಸಿಕೆ ಪ್ರಮಾಣ ಪತ್ರವನ್ನು ತೋರಿಸಿದರೆ ಮಾತ್ರ ಒಳಗಡೆ ಪ್ರವೇಶ ನೀಡುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಖಡಕ್ ಆದೇಶ ನೀಡಿದ್ದಾರೆ.

blank

ಇದನ್ನೂ ಓದಿ: ‘ನೋ ವ್ಯಾಕ್ಸಿನೇಷನ್‌, ನೋ ರೇಷನ್, ನೋ ಪೆನ್ಷನ್: ಯುಟರ್ನ್​ ಹೊಡೆದ ಚಾ.ನಗರ ಜಿಲ್ಲಾಧಿಕಾರಿ

blank

ಜಿಲ್ಲಾಧಿಕಾರಿಗಳ ಆದೇಶದ ಬೆನ್ನಲ್ಲೇ ಬೆಳಗ್ಗಿನಿಂದಲೇ ತಪಾಸಣೆ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ, ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳದಿರುವ ಸಾರ್ವಜನಿಕರು, ಸಿಬ್ಬಂದಿಗೆ ಜಿಲ್ಲಾಡಳಿತ ಭವನ ಪ್ರವೇಶ ಮಾಡದಂತೆ ನಿಷೇಧ ಹೇರುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾಡಳಿತದ ಆವರಣದಲ್ಲಿ‌ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಲಸಿಕೆ ಹೆಚ್ಚಳಕ್ಕೆ ಖಡಕ್ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅನಿವಾರ್ಯವಾಗಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಸಾರ್ವಜನಿಕರು ತಪಾಸಣೆ ಮಾಡುತ್ತಿರುವ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.

blank

ಜಿಲ್ಲಾಡಳಿತ ಭವನದ ಮುಂಭಾಗದ ಗೇಟ್‌ನಲ್ಲಿ ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಮಾಸ್ಕ್ ಧರಿಸದೇ ಕೋವಿಡ್, ನಿಯಮಗಳನ್ನು ಪಾಲಿಸದೇ ಇದ್ದರೆ ದಂಡ ವಿಧಿಸುವಂತೆ ಡಿಸಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಚಾ.ನಗರ ಬೆನ್ನಲ್ಲೇ ಮಳವಳ್ಳಿ ತಹಶೀಲ್ದಾರರಿಂದ ನೋ ವ್ಯಾಕ್ಸಿನ್​, ನೋ ರೇಷನ್​ ಆದೇಶ

Source: newsfirstlive.com Source link