ಕಿನಾರೆಯಲ್ಲಿ ನಿಂತು ‘ಬ್ಯೂಟಿ ಟಿಪ್ಸ್’​ ಕೊಟ್ಟ ಮೋಹಕ ತಾರೆ ರಮ್ಯಾ

ಕಿನಾರೆಯಲ್ಲಿ ನಿಂತು ‘ಬ್ಯೂಟಿ ಟಿಪ್ಸ್’​ ಕೊಟ್ಟ ಮೋಹಕ ತಾರೆ ರಮ್ಯಾ

ಸಿನಿಮಾ ಮತ್ತು ರಾಜಕೀಯದ ಸಹವಾಸವೇ ಬೇಡ ಅಂತಾ ಡಿಸೈಡ್​ ಆಗಿ ದೂರದ ಮುಂಬೈನಗರಿಯ ಸಮುದ್ರ ತೀರದ ದಡದಲ್ಲಿ ಮನೆ ಮಾಡ್ಕೊಂಡು, ಯಾರಿಗೂ ಕಾಣದೆ ತಮಗೆ ಬೇಕಾದಾಗ ಎಲ್ಲರನ್ನೂ ದೂರದಿಂದಲೇ ನೋಡುತ್ತಾ ಕಾಲ ಕಳೆಯುತ್ತಿರೋರು ಮೋಹಕ ತಾರೆ ರಮ್ಯಾ.

ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರೋ ರಮ್ಯಾ ಆಗಾಗ ಏನಾದರೂ ಒಂದು ಇಂಟ​ರೆಸ್ಟಿಂಗ್​ ಸಮಾಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಅದರಂತೆ ಈ ಬಾರಿಯೂ ರಮ್ಯಾ ತಮ್ಮ ಹಳೆಯ ಬ್ಯೂಟಿ ಟಿಪ್ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ರಮ್ಯಾ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಕೆಲ ಉತ್ತಮ ಟಿಪ್ಸ್​ಗಳನ್ನು ಹೇಳಿದ್ದಾರೆ.

Source: newsfirstlive.com Source link