ನನ್ನ ರಕ್ತದ ಕೊನೆಯ ಹನಿ ಇರೋವರೆಗೂ ತಾಲಿಬಾನಿಗಳ ವಿರುದ್ಧ ಹೋರಾಟ ನಿಲ್ಲಲ್ಲ- ಮಸೂದ್ ಪ್ರತಿಜ್ಞೆ

ನನ್ನ ರಕ್ತದ ಕೊನೆಯ ಹನಿ ಇರೋವರೆಗೂ ತಾಲಿಬಾನಿಗಳ ವಿರುದ್ಧ ಹೋರಾಟ ನಿಲ್ಲಲ್ಲ- ಮಸೂದ್ ಪ್ರತಿಜ್ಞೆ

ತಾಲಿಬಾನಿಗಳು ಅಫ್ಘಾನಿಸ್ತಾನದ ಪಂಜ್​ಶಿರ್ ಪ್ರಾಂತ್ಯವನ್ನೂ ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ ಸ್ವಘೋಷಿತ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ನಾಪತ್ತೆಯಾಗಿದ್ದಾರೆ. ಮತ್ತೋರ್ವ ನಾಯಕ ಫಾಹಿಮ್​ರನ್ನ ಹತ್ಯೆಗೈಯ್ಯಲಾಗಿದೆ. ಇನ್ನು ಪಂಜ್​ಶಿರ್​ಗೆ ಆನೆಬಲ ತುಂಬಿದ್ದ ಅಹ್ಮದ್ ಮಸೂದ್ ತಾನು ಇನ್ನೂ ಪಂಜ್​ಶಿರ್​ನಲ್ಲೇ ಇರುವುದಾಗಿ ಹಾಗೂ ಕೊನೆಯ ರಕ್ತದ ಹನಿ ಇರುವವರೆಗೂ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್​ನ ನರಿಬುದ್ಧಿ ಬೆತ್ತಲು ಮಾಡಿದ ಇರಾನ್; ತಾಲಿಬಾನಿಗಳಿಗೆ ಸಹಾಯ ಮಾಡಿದ್ದಕ್ಕೆ ಇಲ್ಲಿದೆ ಸಾಕ್ಷಿ

19 ನಿಮಿಷಗಳ ಆಡಿಯೋವೊಂದನ್ನ ಅಹ್ಮದ್ ಮಸೂದ್ ರಿಲೀಸ್ ಮಾಡಿದ್ದಾರೆ. ಆಡಿಯೋದಲ್ಲಿ ಅಹ್ಮದ್ ಮಸೂದ್ ಪಾಕಿಸ್ತಾನ ಮತ್ತು ತಾಲಿಬಾನಿಗಳು ನಡೆಸಿದ ದಾಳಿಯಲ್ಲಿ ಫಾಹಿಮ್ ಹಾಗೂ ತನ್ನ ಸಂಬಂಧಿಕರನ್ನು ಕಳೆದುಕೊಂಡಿದ್ದಾಗಿ ದೃಢೀಕರಿಸಿದ್ದಾರೆ. ಆಫ್ಘನ್ನರು ತಾಲಿಬಾನಿಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ತಾಲಿಬಾನಿಗಳ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ. ನಮಗೆ ಅಂತಾರಾಷ್ಟ್ರೀಯ ಬೆಂಬಲ ಬೇಕೆಂದಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ರೂಲ್ಸ್​! ಪುರುಷ-ಮಹಿಳಾ ವಿದ್ಯಾರ್ಥಿಗಳ ಮಧ್ಯೆ ಕರ್ಟನ್​ ಹಾಕಿ ಪಾಠ

ಇನ್ನು ಪಂಜ್​ಶೀರ್​ನಲ್ಲಿ ಹುತಾತ್ಮರಾದವರಿಗೆ ಸಂತಾಪ ಸೂಚಿಸಿರುವ ಅಹ್ಮದ್ ಮಸೂದ್.. ಪಾಕಿಸ್ತಾನ ಅಹ್ಮದ್​ನ ಪಂಜ್​ಶಿರ್​ ಮೇಲೆ ನೇರ ದಾಳಿ ಮಾಡಿದೆ. ಇದನ್ನು ಅಂತಾರಾಷ್ಟ್ರೀಯ ಸಮುದಾಯ ಮೂಕಪ್ರೇಕ್ಷಕನಂತೆ ನೋಡಿದೆ. ನನ್ನ ರಕ್ತದ ಕೊನೆಯ ಹನಿ ಇರುವವರೆಗೂ ನಾನು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ತಾಲಿಬಾನ್ ತಾವು ಬದಲಾಗಿಲ್ಲ ಅನ್ನೋದನ್ನು ಮತ್ತೊಮ್ಮೆ ಖಚಿತಪಡಿಸಿದ್ದಾರೆ. ತಾಲಿಬಾನಿಗಳು ಆಫ್ಘನ್ನರಲ್ಲ.. ಅವರು ಹೊರಗಿನವರು ಹಾಗೂ ಹೊರಗಿನವರಿಗಾಗಿ ಕೆಲಸ ಮಾಡುವವರು ಮತ್ತು ಅಫ್ಘಾನಿಸ್ತಾನವನ್ನು ಹೊರಜಗತ್ತಿನಿಂದ ಏಕಾಂಗಿಯಾಗಿಸಲು ಮುಂದಾಗಿರುವವರು. ಆಫ್ಘನ್ನ ಜನರು ತಾಲಿಬಾನಿಗಳ ವಿರುದ್ಧದ ಫೋರ್ಸ್​ಗೆ ಯಾವುದೇ ಮಾರ್ಗದಲ್ಲಾದರೂ ಬೆಂಬಲ ನೀಡಲೇಬೇಕು ಎಂದು ಅಹ್ಮದ್ ಮಸೂದ್ ಮನವಿ ಮಾಡಿಕೊಂಡಿದ್ದಾರೆ.

Source: newsfirstlive.com Source link