ಪಾಲಿಕೆ ಫಲಿತಾಂಶ: 2023 ವಿಧಾನಸಭಾ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ..?

ಪಾಲಿಕೆ ಫಲಿತಾಂಶ: 2023 ವಿಧಾನಸಭಾ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ..?

ಬೆಂಗಳೂರು: ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​​ ಎಷ್ಟೇ ಕೆಲಸ ಮಾಡಿದರೂ ನಿರೀಕ್ಷೆ ಫಲಿತಾಂಶ ಬರದೆ ಕಾಂಗ್ರೆಸ್​ಗೆ ಭಾರೀ ಹಿನ್ನಡೆಯಾಗಿದೆ. ಹಾಗಾಗಿ ಈ ಮೂರು ಪಾಲಿಕೆಗಳ ಚುನಾವಣಾ ಫಲಿತಾಂಶವೂ ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬುದರ ಕುರಿತು ಹಲವು ಹೈಲೈಟ್ಸ್​ ಇಲ್ಲಿವೆ.

ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಬೀರಲಿರುವ ಪರಿಣಾಮಗಳು

 • ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದ ಎದುರಾದ ಮೊದಲ ಚುನಾವಣೆ ಇದೆ.
 • ಮೂರು ಮಹಾನಗರ ಪಾಲಿಕೆಗಳಲ್ಲೂ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿರುವ ವಿಚಾರ.
 • ಹೊಸ ನಾಯಕರಿಗೆ ಆತ್ಮವಿಶ್ವಾಸ ತುಂಬಿರುವ ಈ ಫಲಿತಾಂಶ.
 • ಇನ್ನು ಈ ಚುನಾವಣೆಯಿಂದ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದ್ರೂ, ಸ್ಥಳೀಯ ಸಾರ್ವಜನಿಕರು ಪಕ್ಷದ ಜೊತೆಗಿದ್ದಾರೆ ಎಂಬ ಸಂದೇಶ.
 • ಮೂರು ಪಾಲಿಕೆಗಳ ಪೈಕಿ, ಎರಡು ಉತ್ತರ ಕರ್ನಾಟಕಕ್ಕೆ ಸೇರಿದ್ದು, ಒಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದೆ. ಒಟ್ಟಾರೆ, ಉತ್ತರ ಕರ್ನಾಟಕ ಎಂದು ಸಂಬೋಧಿಸಬಹುದಾದ್ರೂ, ಆ ಭಾಗದ ಜನ ಇಂದಿಗೂ ಬಿಜೆಪಿಯ ಜೊತೆಗಿದ್ದಾರೆ ಎಂಬ ಸಂದೇಶ ರವಾನೆ.
 • ಕಾಂಗ್ರೆಸ್ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌‌ಗೆ ನೆಲೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
 • ಇತ್ತ ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ- ಚುನಾವಣೆ ನಡೆಯಬೇಕಿದೆ. ಹಾನಗಲ್ ಮತ್ತು ಸಿಂದಗಿ. ಆ ಉಪ-ಚುನಾವಣೆಗೆ ಇದನ್ನು ದಿಕ್ಸೂಚಿ ಎಂದು ಪರಿಗಣಿಸಬಹುದು.
 • ಪ್ರತಿ ಆರು ತಿಂಗಳಿಗೊಮ್ಮೆ ಸಾರ್ವಜನಿಕರ ಮನಸ್ಥಿತಿ ಬದಲಾಗುತ್ತದೆ. ಹೀಗಾಗಿ, ಈ ಫಲಿತಾಂಶವನ್ನು ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಪರಿಗಣಿಸಲಾಗುವುದಿಲ್ಲ.
 • ಇನ್ನು ಇದರ ಜೊತೆಗೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪರ ಪ್ರವಾಸವು ಸೇರಿದ್ರೆ, ಇನ್ನಷ್ಟು ಬಿಜೆಪಿ ಬಲವರ್ಧನೆಯಾಗುವ ಸಾಧ್ಯತೆ.
 • ಬೆಳಗಾವಿ ಎರಡನೇ ರಾಜಧಾನಿ ಎಂಬ ಹೆಸರಿನಿಂದ ಕರೆಯಲ್ಪಡುವ ಕಾರಣ, ಅಲ್ಲಿ ಕಮಲ ಅರಳಿದ್ದು, ಮುಂದೆ ಬಿಬಿಎಂಪಿ
 • ಸೇರಿದಂತೆ ಎಲ್ಲಾ ಚುನಾವಣೆಗೂ ಈ ಫಲಿತಾಂಶ ಒಂದು ಹಂತದ ಮುನ್ನಡೆಗೆ ಕಾರಣವಾಗಲಿದೆ.

ಹೀಗೆ ಸಾಲು ಸಾಲು ಕಾರಣಗಳನ್ನಿಟ್ಟುಕೊಂಡು ಮುಂದಿಟ್ಟುಕೊಂಡು, ರಾಜ್ಯದ ಮೂರು ಮಹಾನಗರ ಪಾಲಿಕೆಯ ಫಲಿತಾಂಶವನ್ನು ಅಳೆಯಬಹುದು.

ಇದನ್ನೂ ಓದಿ: ಒಂದು ಬಾವಿಯೊಳಗಿನ ಕಥೆ: ಚಿರತೆ ಮತ್ತು ಬೆಕ್ಕಿನ ಸೆಣಸಾಟ ಹೇಗಿತ್ತು?-ವಿಡಿಯೋ

Source: newsfirstlive.com Source link