ಸಂಸದೆ ಸುಮಲತಾಗೆ ಸೀರೆ ಕೊರಿಯರ್ ಮಾಡಿದ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ.. ಯಾಕೆ ಗೊತ್ತಾ..?

ಸಂಸದೆ ಸುಮಲತಾಗೆ ಸೀರೆ ಕೊರಿಯರ್ ಮಾಡಿದ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ.. ಯಾಕೆ ಗೊತ್ತಾ..?

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್‌ಗೆ ಮಂಡ್ಯದ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಗೌರಿ ಹಬ್ಬಕ್ಕಾಗಿ ಸೀರೆಯೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಪುತ್ರನ ರಾಜಕೀಯ ಎಂಟ್ರಿ ಬಗ್ಗೆ ಸುಮಲತಾ ಕೊಟ್ಟ ಹಿಂಟ್ ಏನು ಗೊತ್ತಾ..?

ಮಂಡ್ಯ ಜಿಲ್ಲೆಯ ರೈತರ ಪರವಾಗಿ ಹಾಗೂ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿರುವುದಕ್ಕಾಗಿ ಮಂಡ್ಯ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ್ ಬಾಬು ಸೀರೆ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ. ಸೀರೆ ಜೊತೆಗೆ, ಬಳೆ ಸೇರಿಸಿ ಬಾಗಿನ ವಸ್ತುಗಳನ್ನು ಶಂಕರ್ ಬಾಬು ಕೊರಿಯರ್ ಮಾಡಿದ್ದಾರೆ. ಬೆಂಗಳೂರಿನ ಸುಮಲತಾ ನಿವಾಸಕ್ಕೆ ಸೀರೆಯನ್ನ ಕೊರಿಯರ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಲಾವಿದರು ಅಂತಾ ಜನರು ಒಂದು ಬಾರಿ ಅವಕಾಶ ಕೊಡ್ತಾರೆ -ಸುಮಲತಾಗೆ ಟಾಂಗ್​ ಕೊಟ್ಟ ಶ್ರೀಕಂಠೇಗೌಡ

Source: newsfirstlive.com Source link