ವ್ಯಾಕ್ಸಿನ್​ ಸರ್ಟಿಫಿಕೇಟ್​ನಲ್ಲಿ ಶಾಸಕ ಹ್ಯಾರಿಸ್​ ಫೋಟೋ ಆರೋಪ -ಬಿಜೆಪಿ ಪ್ರತಿಭಟನೆ

ವ್ಯಾಕ್ಸಿನ್​ ಸರ್ಟಿಫಿಕೇಟ್​ನಲ್ಲಿ ಶಾಸಕ ಹ್ಯಾರಿಸ್​ ಫೋಟೋ ಆರೋಪ -ಬಿಜೆಪಿ ಪ್ರತಿಭಟನೆ

ಬೆಂಗಳೂರು: ನಗರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಲಸಿಕೆ ರಾಜಕೀಯ ಶುರುವಾಗಿದ್ದು, ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕನ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

blank

ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಕಳೆದ ಮೂರ್ನಾಲ್ಕು ದಿನಗಳಿಂದ ಶಾಂತಿನಗರದ ಏಳು ವಾರ್ಡ್ ಗಳಲ್ಲಿ ತಮ್ಮ ಪೋಟೋ ಹಾಕಿ ವ್ಯಾಕ್ಸಿನ್ ವಿತರಣೆ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಮೋದಿ ಇರೋದಕ್ಕೆ ಪೆಟ್ರೋಲ್ ಬೆಲೆ ಇಷ್ಟಿದೆ.. ಇಲ್ಲದಿದ್ರೆ ₹200 ರೂ ಆಗ್ತಿತ್ತು..-ಮುರುಗೇಶ್ ನಿರಾಣಿ

blank

ಲಸಿಕೆ ಸರ್ಟಿಫಿಕೇಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಫೋಟೋ ಹಾಕದೆ, ತಮ್ಮ ಫೋಟೋ ಹಾಕಿ ಲಸಿಕೆ ಹಂಚಿಕೆ ಮಾಡ್ತಿದ್ದಾರೆ ಅಂತ ‌ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಹ್ಯಾರಿಸ್ ಮನೆಯಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ವ್ಯಾಕ್ಸಿನ್ ಹಾಕುತ್ತಿದ್ದಾರೆ ಎಂದು ಗಭೀರ ಆರೋಪ ಮಾಡಿದ್ದಾರೆ.

ಅಧಿಕಾರಿಗಳು, ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಅಂತ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ವ್ಯಾಕ್ಸಿನೇಷನ್‌ ಮಾಡಲಾಗ್ತಿದೆ, ಸಾಮಾನ್ಯ ಜನರಿಗೆ ಲಸಿಕೆ ಹಾಕುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮೋದಿ ‘GDP’ ಏರುತ್ತಿದೆ ಅಂತಿದ್ರು, GDP ಅಂದ್ರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಅಂತ ಅರ್ಥವಾಯ್ತು- ರಾಹುಲ್ ಗಾಂಧಿ

Source: newsfirstlive.com Source link