ರವಿಶಾಸ್ತ್ರಿ ಬಳಿಕ ಫೀಲ್ಡಿಂಗ್​​ & ಬೌಲಿಂಗ್​ ಕೋಚ್​​ಗಳಿಗೂ ಕೊರೊನಾ

ರವಿಶಾಸ್ತ್ರಿ ಬಳಿಕ ಫೀಲ್ಡಿಂಗ್​​ & ಬೌಲಿಂಗ್​ ಕೋಚ್​​ಗಳಿಗೂ ಕೊರೊನಾ

ಟೀಮ್​ ಇಂಡಿಯಾ ಹೆಡ್​ ಕೋಚ್​​​ ರವಿಶಾಸ್ತ್ರಿಗೆ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ಬೌಲಿಂಗ್​ ಕೋಚ್​ ಆ್ಯಂಡ್​ ಫೀಲ್ಡಿಂಗ್​ ಕೋಚ್​​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಹೀಗಾಗಿ ಮುಂದಿನ 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿದ್ದು, ಸೆಪ್ಟೆಂಬರ್ 10 ರಿಂದ ಆರಂಭವಾಗಲಿರುವ ಐದನೇ ಟೆಸ್ಟ್​ನಿಂದ ಶಾಸ್ತ್ರಿ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ದೂರ ಉಳಿಯಲಿದ್ದಾರೆ.

ಇದನ್ನೂ ಓದಿ: ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್; ಆಟಗಾರರಿಗೆ ಶುರುವಾಯ್ತು ಟೆನ್ಷನ್

ತಂಡದ ಮುಖ್ಯ ಕೋಚ್​ಗಳ ಅನುಪಸ್ಥಿತಿಯಲ್ಲಿ ಭಾರತ 5ನೇ ಟೆಸ್ಟ್​​ ಪಂದ್ಯಕ್ಕೆ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಆರಂಭದಲ್ಲಿ ಱಪಿಡ್ ಟೆಸ್ಟ್​ನಲ್ಲಿ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ನೆಗೆಟಿವ್ ಬಂದಿತ್ತು. ಭಾನುವಾರ ಮತ್ತೆ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಾಗಿದೆ. ಶಾಸ್ತ್ರಿ ಜೊತೆಗೆ ಭರತ್ ಅರುಣ್, ಆರ್.ಶ್ರೀಧರ್ ಮತ್ತು ಫಿಸಿಯೋ ಥೆರಪಿಸ್ಟ್ ನಿತಿನ್ ಪಟೇಲ್ ಅವರು ಕೂಡ ಐಸೋಲೇಶನ್​ಗೆ ಒಳಗಾಗಿದ್ರು. ಇದೀಗ ನಿನ್ನೆ ನಡೆಸಿದ ಕೊರೊನಾ ಪರೀಕ್ಷೆ ಇಂದು ಬಂದಿದ್ದು, ಭರತ್ ಅರುಣ್, ಆರ್.ಶ್ರೀಧರ್​​​​ಗೆ ಕೂಡ ಪಾಸಿಟಿವ್​ ಬಂದಿದೆ.

Source: newsfirstlive.com Source link