2 ಗಂಟೆ ಕಳೆದ್ರೂ ಸ್ನಾನದ ರೂಮಿನಿಂದ ಹೊರಬಾರದ MBBS ವಿದ್ಯಾರ್ಥಿನಿ ಸಾವು- ಅಸಲಿಗೆ ಏನಾಯ್ತು?

2 ಗಂಟೆ ಕಳೆದ್ರೂ ಸ್ನಾನದ ರೂಮಿನಿಂದ ಹೊರಬಾರದ MBBS ವಿದ್ಯಾರ್ಥಿನಿ ಸಾವು- ಅಸಲಿಗೆ ಏನಾಯ್ತು?

ಬೆಂಗಳೂರು: ಎರಡು ಗಂಟೆ ಕಳೆದರೂ ಸ್ನಾನದ ರೂಮಿನಿಂದ ಹೊರಬಾರದ ಎಂಬಿಬಿಎಸ್​​ ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್​​ ಸಂಪದ (23) ಸ್ನಾನದ ಕೋಣೆಯಲ್ಲೇ ಸಾವೀಗೀಡಾದ ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ.

ಆಗಸ್ಟ್​ 4ನೇ ತಾರೀಕಿನಂದು ಮಧ್ಯಾಹ್ನ ಸ್ನಾನಕ್ಕಾಗಿ ತೆರಳಿದ್ದಳು. ಈ ವೇಳೆ ಎರಡು ಗಂಟೆ ಕಳೆದರೂ ಸ್ನಾನದ ರೂಮಿನಿಂದ ಹೊರಗೆ ಬಂದಿರಲಿಲ್ಲ. ಬಳಿಕ ಗ್ಯಾಸ್​​ ಗೀಸರ್​​​ ಸಮಸ್ಯೆಯಾಗಿ ಕಾರ್ಬನ್​​​ ಮೋನಾಕ್ಸೈಡ್​​​​ ಲೀಕ್​​​ ಆದ ಪರಿಣಾಮ ಸ್ನಾನದ ಕೋಣೆಯಲ್ಲೇ ಉಸಿರುಗಟ್ಟಿ ಸಂಪದ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಇನ್ನು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಷ್ಟೊತ್ತಾದರೂ ಹೊರಗೆ ಬಂದಿಲ್ಲ ಎಂದು ಸ್ನಾನದ ರೂಮ್​​ ಬಾಗಿಲು ಮುರಿದು ಒಳಗೆ ಹೋದಾಗ ಸಂಪದ ಕುಸಿದು ಬಿದ್ದಿದ್ದಳು. ಕೂಡಲೇ ತೀವ್ರ ಗಾಬರಿಗೊಂಡ ಕುಟುಂಬಸ್ಥರು ಕುಸಿದು ಬಿದ್ದಿದ್ದ ಸಂಪದರನ್ನು ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ಕರೆ ತರುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ಬಾವಿಯೊಳಗಿನ ಕಥೆ: ಚಿರತೆ ಮತ್ತು ಬೆಕ್ಕಿನ ಸೆಣಸಾಟ ಹೇಗಿತ್ತು?-ವಿಡಿಯೋ

Source: newsfirstlive.com Source link