ಬೇಡದ ಖಾತೆ ಪಡೆದು ಉತ್ತಮ ಕೆಲಸ ಮಾಡುತ್ತಿದ್ದೇವೆ: ಎಸ್ ಟಿ ಸೋಮಶೇಖರ್

ಕಾರವಾರ: ನಾವೆಲ್ಲಾ ಬೇಡದ ಖಾತೆ ಪಡೆದು ಉತ್ತಮ ಕೆಲಸ ಮಾಡುತ್ತಿದ್ದೇವೆ. ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಮುಖ್ಯಮಂತ್ರಿ ಮುಂದೆ ಉನ್ನತ ಖಾತೆ ಕೇಳುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಕೆಡಿಸಿಸಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರ ಎದುರು ನಾವು ಮಣ್ಣಿನ ಮಕ್ಕಳು ಎನ್ನುತ್ತಾರೆ. ಮುಖ್ಯಮಂತ್ರಿ ಎದುರು ಪಿಡಬ್ಲ್ಯೂಡಿ, ನೀರಾವರಿ, ಗೃಹ ಖಾತೆಯ ಬೇಡಿಕೆ ಇಡುತ್ತಾರೆ. ಸಹಕಾರ, ಕಾರ್ಮಿಕ, ಕೃಷಿ ಖಾತೆ ಯಾರೂ ಬೇಡಿಕೆ ಇಡುವುದಿಲ್ಲ. ನಾವೆಲ್ಲ ಬೇಡದ ಖಾತೆಯನ್ನು ಪಡೆದು ಒಳ್ಳೆಯ ಕೆಲಸಮಾಡುತ್ತಿದ್ದೇವೆ ಎಂದರು.ಇದನ್ನೂ ಓದಿ:  ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು

ಸಚಿವ ಸ್ಥಾನ ನೀಡದ್ದಕ್ಕೆ ಬೇಸರಗೊಂಡಿದ್ದ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಸಹಕಾರ ಕೋರಿದ್ದರು. ನಾನು ಭೈರತಿ ಸೇರಿ ಎಲ್ಲರೂ ಅವರಿಗೆ ಕೈಜೋಡಿಸಿದೆವು ಎಂದು ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಸಮ್ಮುಖದಲ್ಲೇ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ರಾಜಕಾರಣಿ: ಶ್ರೀರಾಮುಲು

ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಜನರಿಗೆ ಉತ್ತಮ ಸಂದೇಶ ಹೋಗಿದೆ. ಬೊಮ್ಮಾಯಿ ನೇತೃತ್ವದಲ್ಲಿ ಒಂದು ಮುಕ್ಕಾಲು ವರ್ಷ ರಾಜ್ಯದ ಜನರು ಆರಾಮವಾಗಿರಬಹುದು. ಒಳ್ಳೊಳ್ಳೆಯ ಕಾರ್ಯಕ್ರಮ ಮಾಡುತ್ತಾರೆ, ತಾಳ್ಮೆಯಿಂದ ಇರುತ್ತಾರೆ ಎಂಬ ಸಂದೇಶ ಜನರಿಗೆ ಹೋಗಿದೆ. ಬಿಜೆಪಿ ಪಕ್ಷ ಹಾಗೂ ಮುಖಂಡರ ಮೇಲಿನ ವಿಶ್ವಾಸದಿಂದ ಜನರು ಮತ ಹಾಕಿದ್ದಾರೆ. ಅದನ್ನು ಉಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಬೆಲೆ ಏರಿಕೆ ವಿಚಾರ ಸಂಬಂಧಿಸಿ ಸಿಎಂ 7-8ರಂದು ದೆಹಲಿಗೆ ತೆರಳುತ್ತಿದ್ದಾರೆ. ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.

Source: publictv.in Source link