‘ಟರ್ಕಿ’ಗೆ ಮನಸೋತ ಕತ್ರಿನಾ ಕೈಫ್; ಮಸ್ತ್​ ಮಸ್ತ್​ ಡ್ಯಾನ್ಸ್..!

‘ಟರ್ಕಿ’ಗೆ ಮನಸೋತ ಕತ್ರಿನಾ ಕೈಫ್; ಮಸ್ತ್​ ಮಸ್ತ್​ ಡ್ಯಾನ್ಸ್..!

ಬಾಲಿವುಡ್ ಬಾಕ್ಸ್​ ಆಫೀಸ್​​ ಸುಲ್ತಾನ ಸಲ್ಮಾನ್ ಖಾನ್​ ಮತ್ತು ಬಿಟೌನ್​ ಬೆಡಗಿ ಕತ್ರಿನಾ ಕೈಫ್​ ನಟಿಸುತ್ತಿರುವ ‘ಟೈಗರ್​-3’ ಚಿತ್ರದ ಶೂಟಿಂಗ್ ಸದ್ಯ ಟರ್ಕಿಯಲ್ಲಿ ನಡೆಯುತ್ತಿದೆ. ಮೊನ್ನೆಯಷ್ಟೇ ಕತ್ರಿನಾ ಮತ್ತು ಸಲ್ಲು ಟರ್ಕಿ ದೇಶದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮೆಹ್ಮೆತ್ ನೂರಿ ಎರ್ಸೊಯ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಊಟ ಮಾಡಿದ್ದರು.

ಇದೀಗ ಕತ್ರಿನಾ ‘ಟೈಗರ್​ -3’ ಚಿತ್ರದ ಹಾಡೊಂದಕ್ಕೆ ಕ್ಯಾಟ್​ ಭರ್ಜರಿ ಡ್ಯಾನ್ಸ್​ ರಿಹರ್ಸಲ್​ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ. ಇನ್ನು ‘ಟೈಗರ್​ ಜಿಂದಾ ಹೇ’ ಸಿನಿಮಾದ ‘ಸ್ವಾಗ್ ಸೆ ಸ್ವಾಗತ್’ ಹಾಡಿಗಿಂತ ಈ ಹಾಡು ಇನ್ನು ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಎಂದು ಹೇಳಲಾಗಿದೆ.

ಬಾಲಿವುಡ್​ ನಿರ್ದೇಶಕ ಮನೀಶ್​ ಶರ್ಮಾ ಕಲ್ಪನೆಯಲ್ಲಿ ‘ಟೈಗರ್​ -3’ ಚಿತ್ರದ ಹಾಡು ಮೂಡಿ ಬರ್ತಿದ್ದು ನಟ ಇಮ್ರಾನ್​ ಹಶ್ಮಿ ಈ ಚಿತ್ರದಲ್ಲಿ ಸಲ್ಲುಗೆ ವಿಲನ್​ ಆಗಿ ಕಾಣಿಸಿಕೊಳುತ್ತಿದ್ದಾರೆ.

 

Source: newsfirstlive.com Source link