ಎಣ್ಣೆ ಕುಡಿದು ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು

ಎಣ್ಣೆ ಕುಡಿದು ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು

ಮೀನು ಹಿಡಿಯಲು ಹೋಗಿ ವ್ಯಕ್ತಿಯೋರ್ವ ಕೆರೆ ಪಾಲಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಮೀನು ಹಿಡಿಯಲು ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದ ವ್ಯಕ್ತಿ ಶಾಂತರಾಜು (40) ಎಂದು ತಿಳಿದು ಬಂದಿದೆ.

ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಬಾಪೂಜಿನಗರದ ಶಾಂತರಾಜು ಎಂಬಾತ ಕುಡಿದು ಮೀನು ಹಿಡಿಯಲು ಹೋಗಿದ್ದ. ತನ್ನ ಸ್ನೇಹಿತ ಬಾಬು ಎಂಬಾತ ಮೀನು ಬೇಕು ಎಂದು ಕೇಳಿಕೊಂಡಿದ್ದ.

ಆದ್ದರಿಂದ ಶಾಂತರಾಜು ಮತ್ತು ಬಾಬು ಎಂಬುವರು ಮದ್ಯ ಸೇವಿಸಿ ಕಂದವಾರ ಕೆರೆಗೆ ಹೋಗಿದ್ದಾರೆ. ಇಲ್ಲಿ ಮೀನು ಹಿಡಿಯಲು ಕಾಲು ಜಾರಿ ಬಿದ್ದು ಶಾಂತರಾಜು ಸಾವನ್ನಪ್ಪಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: JDS ಜತೆ ಮೈತ್ರಿ ಕುರಿತು ಮಲ್ಲಿಕಾರ್ಜುನ ಖರ್ಗೆ ಬಳಿ ಚರ್ಚಿಸುತ್ತೇನೆ- ಸಿದ್ದರಾಮಯ್ಯ

Source: newsfirstlive.com Source link