RRR ಸಿನಿಮಾ ರಿಲೀಸ್​ಗೆ ಹಲವು ವಿಘ್ನಗಳು..? ದೇವರ ಮೊರೆ ಹೋದ್ರಂತೆ ರಾಜಮೌಳಿ

RRR ಸಿನಿಮಾ ರಿಲೀಸ್​ಗೆ ಹಲವು ವಿಘ್ನಗಳು..? ದೇವರ ಮೊರೆ ಹೋದ್ರಂತೆ ರಾಜಮೌಳಿ

ಬರಿ ಟಾಲಿವುಡ್​​​ನಲ್ಲಿ ಅಷ್ಟೇ ಅಲ್ಲ.. ಇಡೀ ಭಾರತೀಯ ಸಿನಿಮಾರಂಗದಲ್ಲೇ ಸೋಲಿಲ್ಲದ ಸರದಾರ ಎಸ್​​.ಎಸ್.ರಾಜಮೌಳಿ.. ತನ್ನ ಗೆಲುವಿನ ದಾಖಲೆಯನ್ನ ತಾನೇ ಮುರಿದುಕೊಂಡು ಮುನುಗ್ಗಿರುವ ರಾಜಮೌಳಿ ಅವರಿಗೆ ಈಗ ಟೈಮ್ ಸರಿ ಇಲ್ವಂತೆ! ಈ ಕಾರಣಕ್ಕೆ ಮೌಳಿ ಮನೆಯಲ್ಲಿ ದೇವರ ಮೊರೆ ಹೋಗಿದ್ದಾರಂತೆ.. ಅರೇ ಹೌದಾ..?

ಇದನ್ನೂ ಓದಿ: ರಾಜಮೌಳಿ ಕಲ್ಪನೆಯಲ್ಲಿ ಅಲ್ಲು-ಚರಣ್ ಸಮಾಗಮ.. ಮೆಗಾ ಫ್ಯಾಮಿಲಿ ಸ್ಟಾರ್ಸ್​ಗೆ ಮೌಳಿ ಡೈರೆಕ್ಷನ್?

ಟಾಲಿವುಡ್​​ನ ಚಿತ್ರ ಬ್ರಹ್ಮ , ಸೋಲಿಲ್ಲದ ಸಿನಿ ಸೂತ್ರಧಾರ ಯೆಸ್​.ಎಸ್.ರಾಜಮೌಳಿ ಮೂರೊತ್ತು ಥ್ರಿಬಲ್ ಆರ್, ಥ್ರಿಬಲ್ ಆರ್ ಅಂತ ಕನವರಿಸುತ್ತಿದ್ದಾರೆ.. ಇನೇನು ನಿಮ್ಮಮುಂದೆ ಸಿನಿಮಾವನ್ನ ತಂದು ಬಿಡ್ತೀವಿ, ಕಾಯುತ್ತಿರಿ ಅಂದವರು ಈಗ ಕನ್​​​​​​​​​​ಫ್ಯೂಸ್ ಆಗಿದ್ದಾರೆ. ಈ ವರ್ಷ ‘‘ರೌದ್ರ ರಣ ರುಧಿರ’’ ಬರೋದು ಡೌಟ್​​​..! ಕೊರೊನಾದಿಂದ ಚಿತ್ರರಂಗದ ಟೈಮ್ ಟಿಪಿಕಲ್ ಆಗಿರುವಾಗಲೇ ಎಸ್​.ಎಸ್.ರಾಜಮೌಳಿ ಅವರಿಗೆ ಟೈಮ್ ಸರಿ ಇಲ್ವಂತೆ..!

ಇದನ್ನೂ ಓದಿ: RRR ಶೂಟಿಂಗ್ ಕಂಪ್ಲೀಟ್ ; ಅದಕ್ಕಾಗಿ ರಾಜಮೌಳಿ ತೆಗೆದುಕೊಂಡ ಟೈಮ್​ ಎಷ್ಟು ಗೊತ್ತಾ?

2001ರಿಂದ 2021ರ ತನಕ 11 ಸಿನಿಮಾ.. ಒಂದಕ್ಕಿಂತು ಒಂದು ಸೂಪರ್ ಡೂಪರ್​​.. ಈಗ ಥ್ರಿಬಲ್ ಆರ್ ಸಿನಿಮಾ ರಾಜಮೌಳಿ ಅವರ 12ನೇ ಸಿನಿಮಾ ಪ್ರಯತ್ನ.. ಭಾರತೀಯ ಪ್ರೇಕ್ಷಕರ ಜೊತೆ ಬೇರೆ ಬೇರೆ ದೇಶದ ಸಿನಿಮಾ ಮಂದಿಯೂ ಥ್ರಿಬಲ್ ಆರ್ ನಲ್ಲಿ ರಾಜಮೌಳಿ ಏನ್ ಮಾಡಿದ್ದಾರೆ ಅಂತ ಅಂದಾಜಿಸುತ್ತಿದ್ದಾರೆ. ಆದ್ರೆ ಈಗ ರಾಜಮೌಳಿ ಅವ್ರ ಟೈಮ್ ಸರಿ ಇಲ್ಲ..! ಹಿಂಗಂತ ನಾವು ಹೇಳ್ತಿಲ್ಲ ಟಾಲಿವುಡ್ ಮಾಯಾನಗರಿಯಲ್ಲಿ ಆಗ್ತಿರೋ ಛಾಯ್ ಪೇ ಚರ್ಚೆ ಇದು..

ರಾಜಮೌಳಿ ಅವರ ರಾಶಿ ಮತ್ತು ಜನ್ಮ ನಕ್ಷತ್ರದಲ್ಲಿ ಈಗ ಟೈಮ್ ಅಷ್ಟಾಗಿ ಸರಿಯಾಗಿಲ್ವಂತೆ. ರಾಜಮೌಳಿ ಸಿನಿಮಾ ರಂಗಕ್ಕೆ ಬಂದು 15 ವರ್ಷದ ನಂತರ ಜಾತಕ ಫಲದಲ್ಲಿ ಫಸ್ಟ್​ ಟೈಮ್​​​​ ಸಮಸ್ಯೆಗಳು ಉದ್ಭವವಾಗಿವೆ. ಈ ಕಾರಣದಿಂದಾಗಿ ರಾಜಮೌಳಿ ಅವರ ಮನೆಯಲ್ಲಿ ಹೋಮ-ಹವನ ಪೂಜೆ ಪುನಃಸ್ಕಾರವನ್ನ ಜೋರಾಗಿಯೇ ಮಾಡ್ತಿದ್ದಾರಂತೆ.

ಇದನ್ನೂ ಓದಿ: ಉಕ್ರೇನ್​ ಶೂಟ್​ ಮುಗಿಸಿ ಭಾರತಕ್ಕೆ ಬಂದ ರಾಜಮೌಳಿ ಆಂಡ್​ ಟೀಮ್​

ಥ್ರಿಬಲ್ ಆರ್ ಸಿನಿಮಾ 400 ಕೋಟಿ ಬಜೆಟ್​​ನಲ್ಲಿ ನಿರ್ಮಾಣವಾಗಿದೆ. ಈ ಸಿನಿಮಾ ಗೆಲ್ಲಲೇಬೇಕು. ಜೊತೆಗೆ ರಾಜಮೌಳಿಯವರ ರಾಶಿ ನಕ್ಷತ್ರ ಫಲದಲ್ಲಿ ಬಂದಿರೋ ದೋಷವನ್ನ ನಿವಾರಣೆ ಮಾಡಬೇಕೆಂದು ಮೌಳಿ ಕುಟುಂಬದಲ್ಲಿ ದೇವರ ಮೊರೆಹೊಗಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿ ಅಷ್ಟಾಗಿ ದೇವ್ರು-ದಿಂಡ್ರು ಸಂಪ್ರದಾಯ ಆಚರಣೆಗಳನ್ನ ಪಾಲಿಸೋದಿಲ್ಲ. ಆದ್ರೆ ಅವರ ಮನೆಯಲ್ಲಿ ಎಲ್ಲಾ ರೀತಿಯ ಆಚರಣೆಯನ್ನ ಫಾಲೋ ಮಾಡ್ತಾರೆ. ಈ ಕಾರಣದಿಂದಾಗಿ ರಾಜಮೌಳಿ ಅವರ ಹೆಸರಿನಲ್ಲಿ ಪೂಜೆಯನ್ನ ಮಾಡ್ತಿರೋದಂತೆ.
ಒಂದಂತು ಸತ್ಯ ಬರಿ ರಾಜಮೌಳಿ ಅಲ್ಲ ಇಡೀ ಸಿನಿಮಾ ರಂಗದ ಟೈಮೇ ಈಗ ಖರಾಬು.. ಕೊರೊನಾದಿಂದ ಸಿನಿಮಾ ಚಟುವಟಿಕೆ ಕಂಗಾಲಾಗಿದೆ. ರಾಜಮೌಳಿಗಾಗಿ ಅವರ ಮನೆಯಲ್ಲಿ ಹೋಮ ಹವನ ಮಾಡಿದ್ರು ನಿಜ. ಆದ್ರೆ ಚಿತ್ರರಂಗದ ಟೈಮೇ ಸರಿ ಇಲ್ವಲ್ಲ. ಚಿತ್ರರಂಗಕ್ಕೆ ಯಾರು ಹೋಮ ಹವನ ಶಾಂತಿ ಮಾಡಿಸೋರು..?

ಇದನ್ನೂ ಓದಿ: ರಾಜಮೌಳಿಗಾಗಿ ವೃತ್ತಿ ಜೀವನದಲ್ಲಿ ಎಂದೂ ಮಾಡದ ಕೆಲಸ ಮಾಡಿದ Jr NTR

Source: newsfirstlive.com Source link