ಮೊಬೈಲ್ ಚಾರ್ಜ್ ಮಾಡೋವಾಗ ಸ್ವಿಚ್​​ ಬೋರ್ಡ್​ನಲ್ಲಿ ನಾಗರ ಹಾವು ಪ್ರತ್ಯಕ್ಷ.. ಮುಂದೇನಾಯ್ತು..?

ಮೊಬೈಲ್ ಚಾರ್ಜ್ ಮಾಡೋವಾಗ ಸ್ವಿಚ್​​ ಬೋರ್ಡ್​ನಲ್ಲಿ ನಾಗರ ಹಾವು ಪ್ರತ್ಯಕ್ಷ.. ಮುಂದೇನಾಯ್ತು..?

ಕೊಪ್ಪಳ: ಐಟಿಐ ಕಾಲೇಜೊಂದರಲ್ಲಿ ನಾಗರ ಹಾವು ಪತ್ತೆಯಾಗಿದೆ. ವಿದ್ಯಾರ್ಥಿಯೋರ್ವ ತನ್ನ ಮೊಬೈಲ್​​ ಚಾರ್ಜ್​​ ಮಾಡಲು ಹೋದಾಗ ಸ್ವಿಚ್​​​ ಬೋರ್ಡ್​ನಲ್ಲೇ ದಿಢೀರ್​​ ನಾಗರ ಹಾವು ಪತ್ತೆಯಾಗಿದೆ.

ಇನ್ನು, ನಾಗರ ಹಾವು ಮೊಬೈಲ್​​ ಚಾರ್ಜ್ ಮಾಡಲು ಹೋದ ವಿದ್ಯಾರ್ಥಿಗೆ ಕಡಿದಿದೆ. ಇನ್ನು, ಗವಿಸ್ವಾಮಿ (18) ನಾಗರ ಹಾವಿನಿಂದ ಕಡಿತಕ್ಕೊಳಗಾದ ವಿದ್ಯಾರ್ಥಿ.

ಕೊಪ್ಪಳದ ಗಂಗಾವತಿ ನಗರದ ಕಲ್ಮಠ ಕೊಟ್ಟುರೇಶ್ವರ ಐಟಿಐ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸ್ನೇಹಿತರ ಸಹಾಯದಿಂದ ಪಾರಾದ ವಿದ್ಯಾರ್ಥಿ ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಕಿನಾರೆಯಲ್ಲಿ ನಿಂತು ‘ಬ್ಯೂಟಿ ಟಿಪ್ಸ್’​ ಕೊಟ್ಟ ಮೋಹಕ ತಾರೆ ರಮ್ಯಾ

Source: newsfirstlive.com Source link