ಭಾರತ-ಇಂಗ್ಲೆಂಡ್ ಟೆಸ್ಟ್​ ಮ್ಯಾಚ್​​ನಲ್ಲಿ ಏಕಾಂಗಿಯಾದ ಅಶ್ವಿನ್.. ಬೇಸರ ಹೊರಹಾಕಿದ ಅಭಿಮಾನಿಗಳು

ಭಾರತ-ಇಂಗ್ಲೆಂಡ್ ಟೆಸ್ಟ್​ ಮ್ಯಾಚ್​​ನಲ್ಲಿ ಏಕಾಂಗಿಯಾದ ಅಶ್ವಿನ್.. ಬೇಸರ ಹೊರಹಾಕಿದ ಅಭಿಮಾನಿಗಳು

ಓವಲ್​ನಲ್ಲಿ ಇಂದು ನಡೆಯುತ್ತಿರುವ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಮ್ಯಾಚ್​ನಲ್ಲಿ ಅಶ್ವಿನ್ ಸ್ಥಾನ ಪಡೆದುಕೊಂಡಿಲ್ಲ. ಹೀಗಾಗಿ ಅವರು ಸ್ಟೇಡಿಯಂನಲ್ಲಿ ಕೂತು ಕ್ರಿಕೆಟ್ ವೀಕ್ಷಿಸುತ್ತಿದ್ದರು. ಆದ್ರೆ ಅಶ್ವಿನ್ ಏಕಾಂಗಿಯಾಗಿ ಕಂಡುಬಂದಿದ್ದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಅಶ್ವಿನ್ ಅದ್ಭುತ ಆಫ್ ಸ್ಪಿನ್ನರ್ ಆಗಿದ್ದು ಅವರನ್ನು ಬೇಕಂತಲೇ ಬೆಂಚ್ ಕಾಯುವಂತೆ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಅಶ್ವಿನ್ ಟೀಂನಲ್ಲಿ ಇದ್ದಿದ್ರೆ ಇವತ್ತಿನ ಆಟದಲ್ಲಿ ಇಂಗ್ಲೆಂಡ್​ನ ಏನೇ ಪ್ರಯತ್ನ ಮಾಡಿದ್ರೂ ಗೆಲುವು ಅವರ ಪಾಲಾಗ್ತಿರಲಿಲ್ಲ ಅಂತ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಯಾರೋ ಒಬ್ಬರ ಈಗೋದಿಂದ ಇಂಥವುಗಳು ನಡೆಯುತ್ತವೆ.. ಮುಂದಿನ ದಿನಗಳಲ್ಲಾದ್ರೂ ಭಾರತ ಟೀಂಗೆ ಉತ್ತಮ ನಾಯಕ ಸಿಗುತ್ತಾನೆ ಎಂದು ಮತ್ತಷ್ಟು ಅಭಿಮಾನಿಗಳು ಕಿಡಿಕಾರಿದ್ದಾರೆ.

Source: newsfirstlive.com Source link