ವಿಶ್ವದ ದಿಗ್ಗಜ ನಾಯಕರ ಹಿಂದಿಕ್ಕಿದ ಪ್ರಧಾನಿ ಮೋದಿ; ಜಾಗತಿಕ ಮಟ್ಟದಲ್ಲಿ ಸಮೀಕ್ಷೆಯಲ್ಲಿ No.1

ವಿಶ್ವದ ದಿಗ್ಗಜ ನಾಯಕರ ಹಿಂದಿಕ್ಕಿದ ಪ್ರಧಾನಿ ಮೋದಿ; ಜಾಗತಿಕ ಮಟ್ಟದಲ್ಲಿ ಸಮೀಕ್ಷೆಯಲ್ಲಿ No.1

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಏಳು ವರ್ಷ ಕಳೆದಿದೆ. ಆದ್ರೆ, ಇಂದಿಗೂ ಕೂಡ ಅವರ ಜನಪ್ರಿಯತೆ ಕುಗ್ಗಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಸಮೀಕ್ಷೆಯೊಂದು ಹೊರಬಂದಿದೆ. ಆ ಸಮೀಕ್ಷೆಯಲ್ಲಿ ಮೋದಿ ಅವರು ವಿಶ್ವದಲ್ಲಿಯೇ ಅಗ್ರಸ್ಥಾನ ಪಡೆದಿದ್ದಾರೆ.

ಏನದು ಸಮೀಕ್ಷೆ? ಸಮೀಕ್ಷೆ ನಡೆದಿದ್ದು ಹೇಗೆ?
ಜಾಗತಿಕವಾಗಿ ಯಾರು ಪ್ರಭಾವ ಶಾಲಿಯಾಗಿದ್ದಾರೆ, ಯಾರು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಯಾರು ದೇಶದ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಯಾರನ್ನು ಜನ ಇಷ್ಟ ಪಡುತ್ತಾರೆ. ಯಾಕೆ ಇಷ್ಟಪಡುತ್ತಾರೆ. ಇಂತಹ ಹತ್ತಾರು ಸಮೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ, ಈಗ ಹೊರಬಂದಿರೋ ಸಮೀಕ್ಷೆಯೊಂದರಲ್ಲಿ ನರೇಂದ್ರ ಮೋದಿ ಅವರು ಜಾಗತಿಕವಾಗಿ ಅಗ್ರಸ್ಥಾನ ಪಡೆದಿದ್ದಾರೆ. ಈ ಮೂಲಕ ಇಡೀ ವಿಶ್ವದ ಗಮನವನ್ನೇ ಭಾರತದತ್ತ ಸೆಳೆದಿದ್ದಾರೆ. ಅತಿರಥ, ಮಹಾರಥ ರಾಷ್ಟ್ರಗಳು ಕೂಡ ಮೋದಿ ಅವರ ಕಾರ್ಯವೈಖರಿಯತ್ತ ದೃಷ್ಟಿ ಹರಿಸುವಂತಾಗಿದೆ.

blank

ಜಾಗತಿಕ ಮಟ್ಟದಲ್ಲಿ ಸಮೀಕ್ಷೆ
ನರೇಂದ್ರ ಮೋದಿ ವಿಶ್ವದಲ್ಲಿಯೇ ಜನಪ್ರಿಯ ನಾಯಕ

ಈ ಹಿಂದೆ ನಡೆದ ಅನೇಕ ಜಾಗತಿಕ ಸಮೀಕ್ಷೆಗಳಲ್ಲಿ ನರೇಂದ್ರ ಮೋದಿಯವರು ಅಗ್ರಸ್ಥಾನ ಪಡೆದಿದ್ದಾರೆ. ಅದನ್ನು ನೋಡಿ ಇಡೀ ದೇಶವೇ ಹೆಮ್ಮೆ ಪಟ್ಟಿದೆ. ಇದೀಗ ಅಮೆರಿಕದ ಮಾಹಿತಿ ಗುಪ್ತಚರ ಕಂಪನಿಯಾದ ಮಾರ್ನಿಂಗ್ ಕನ್ಸಲ್ಟೆನ್ಸಿ ಒಂದು ಸರ್ವೆಯನ್ನು ಹೊರಹಾಕಿದೆ. ಅದರಲ್ಲಿಯೂ ನರೇಂದ್ರ ಮೋದಿಯವರೇ ಅಗ್ರಸ್ಥಾನ ಪಡೆದಿದ್ದಾರೆ. ಅಮೆರಿಕ, ಜಪಾನ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌….ಅಂತಹ ಸೂಪರ್‌ ಪವರ್ ರಾಷ್ಟ್ರಗಳ ನಾಯಕರನ್ನೇ ಹಿಂದಿಕ್ಕಿ ಮೋದಿ ಮುಂದೆ ಬಂದಿದ್ದಾರೆ. ಹೀಗಾಗಿಯೇ ಇಡೀ ವಿಶ್ವ ಬೆರಗುಗಣ್ಣಿನಿಂದ ನರೇಂದ್ರ ಮೋದಿ ಅವರನ್ನು ನೋಡಿದುತ್ತಿದೆ. ಹಾಗಾದ್ರೆ ನರೇಂದ್ರ ಮೋದಿ ಅವರಿಗೆ ಸಿಕ್ಕ ರೇಟಿಂಗ್‌ ಎಷ್ಟು ಗೊತ್ತಾ?

ಶೇ.70 ರಷ್ಟು ರೇಟಿಂಗ್‌ ಪಡೆದ ನರೇಂದ್ರ ಮೋದಿ
13 ದೇಶಗಳ ಪೈಕಿ ನರೇಂದ್ರ ಮೋದಿಗೆ ಎಷ್ಟು ಮತ
5ನೇ ಸ್ಥಾನಕ್ಕೆ ಕುಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌

ಮಾರ್ನಿಂಗ್‌ ಕನ್ಸಲ್ಟೆನ್ಸಿ ಕಂಪನಿ 13 ದೇಶಗಳ ಜನಪ್ರಿಯತೆಯನ್ನು ಗುರುತಿಸುವ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ನಡೆಸಿತ್ತು. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 70 ರೇಟಿಂಗ್‌ ಪಡೆದು ಅಗ್ರಸ್ಥಾನ ಪಡೆದಿದ್ದಾರೆ. ಹಾಗೆ ಮೆಕ್ಸಿಕೋದ ಲೋಪೆಜ್ ಒಬ್ರಡಾರ್ ಶೇಕಡಾ 64 ಮತ್ತು ಇಟಲಿಯ ಡ್ರ್ಯಾಗಿ ಶೇಕಡಾ 63 ರೇಟಿಂಗ್‌ ಪಡೆದು ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶೇಕಡಾ 52 ರಷ್ಟು ರೇಟಿಂಗ್‌ ಪಡೆದ ಜರ್ಮನಿಯ ಮಾರ್ಕೆಲ್‌ 4ನೇ ಸ್ಥಾನ, ಶೇಕಡಾ 48 ರೇಟಿಂಗ್‌ ಪಡೆದ ಅಮೆರಿಕದ ಜೋ ಬೈಡನ್‌ 5ನೇ ಸ್ಥಾನ, ಶೇಕಡಾ 48 ರೇಟಿಂಗ್‌ ಪಡೆದ ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ 6ನೇ ಸ್ಥಾನ, ಶೇಕಡಾ 45 ರೇಟಿಂಗ್‌ ಪಡೆದ ಕೆನಡಾದ ಜಸ್ಟಿನ್ ಟ್ರುಡೆವ್ 7ನೇ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್‌ನ ಬೊರಿಸ್ ಜಾನ್ಸನ್, ಬ್ರೆಜಿಲ್‌ನ ಜೈರ್ ಬೊಲ್ಸಾನಾರೋ, ದಕ್ಷಿಣ ಕೊರಿಯಾದ ಮೂನ್ ಜೈಇನ್, ಸ್ಪೇನ್‌ನ ಪೆಡ್ರೋ ಸ್ಯಾಂಚೆಜ್, ಫ್ರಾನ್ಸ್‌ನ ಇಮ್ಯಾನ್ಯುಯೆಲ್ ಮಾರ್ಕೊನ್, ಜಪಾನ್‌ನ ಯೋಶಿಧ ಸುಗಾ ಸ್ಥಾನ ಪಡೆದಿದ್ದಾರೆ.

blank

ಯಾವ ವಿಷಯದ ಮೇಲೆ ಸಮೀಕ್ಷೆ ನಡೆಯಿತು ಗೊತ್ತಾ?
ಸಮೀಕ್ಷೆ ನಡೆಸುವ ಮುನ್ನ ಕಂಪನಿ ಹಲವು ವಿಷಯಗಳನ್ನು ಕೈಗೆತ್ತಿಕೊಂಡಿತ್ತು. ಅದೇ ವಿಷಯದ ಮೇಲೆಯೇ ಸಮೀಕ್ಷೆ ನಡೆಸಲು ತೀರ್ಮಾನಿಸಿತ್ತು. ಅದರಲ್ಲಿದ್ದ ಪ್ರಮುಖ ವಿಷಯಗಳು ಅಂದ್ರೆ, ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿಯ ವೇಗ, ಉತ್ತಮ ನಾಯಕತ್ವ, ಜಾಗತಿಗ ಬೆಳವಣಿಗೆ, ಕೊರೊನಾ, ಆರ್ಥಿಕ ಹೊಡೆತ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ. ಈ ಎಲ್ಲಾ ವಿಚಾರದಲ್ಲಿ ನರೇಂದ್ರ ಮೋದಿ ಅವರು, ವಿಶ್ವದ ದಿಗ್ಗಜ ನಾಯಕರನ್ನೇ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಅಗ್ರಸ್ಥಾನಕ್ಕೇರುವುದು ಸುಲಭವಲ್ಲ
ಭಾರತದಲ್ಲಿರೋ ಜನಸಂಖ್ಯೆ ಸುಮಾರು 135 ಕೋಟಿ. ಇಷ್ಟೊಂದು ದೊಡ್ಡ ರಾಷ್ಟ್ರದಲ್ಲಿ ನೂರಾರು ಸಮಸ್ಯೆಗಳು ಇರುತ್ತವೆ. ಅದರಲ್ಲಿಯೂ ಕೊರೊನಾದಂತಹ ಸೋಂಕು ಬಂದಾಗ ನಿಯಂತ್ರಿಸುವುದು ಸುಲಭವಲ್ಲ. ಎಷ್ಟೋ ಸೂಪರ್‌ ಪವರ್‌ ರಾಷ್ಟ್ರಗಳೇ ನಲುಗಿ ಹೋಗಿವೆ. ಸಮಸ್ಯೆ ಬಗೆಹರಿಸಿಕೊಳ್ಳಲಾಗದೇ ನಲುಗಿ ಬಿಟ್ಟಿವೆ. ಅಂತಹದ್ರಲ್ಲಿ 135 ಕೋಟಿ ಜನಸಂಖ್ಯೆ ಇರೋ ಭಾರತದಲ್ಲಿ ಹೇಗಾಗಬೇಡ? ಆದ್ರೆ, ಭಾರತದಲ್ಲಿ ಕೊರೊನಾ ಮೊದಲನೇ ಅಲೆಯನ್ನು ಯಶಸ್ವಿಯಾಗಿಯೇ ನಿರ್ವಹಿಸಿತ್ತು. ಆದ್ರೆ, ಎರಡನೇ ಅಲೆಯಲ್ಲಿ ಭಾರತ ಹೈರಾಣವಾಗಿ ಬಿಡ್ತು. ಅನೇಕ ನಿರ್ಬಂಧಗಳನ್ನು ಕೈಗೊಂಡು, ಜಾನರಲ್ಲಿ ಜಾಗೃತಿ ಮೂಡಿಸಿ, ಹಾಗೇ ವ್ಯಾಕ್ಸಿನ್‌ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ನಿಯಂತ್ರಣಕ್ಕೆ ತರಲಾಗಿದೆ. ಇನ್ನು ಭ್ರಷ್ಟಾಚಾರದ ವಿಚಾರಕ್ಕೆ ಬರುವುದಾದ್ರೆ, ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ತಮ್ಮ ಸಂಪುಟದಲ್ಲಿ ಭ್ರಷ್ಟರಿಗೆ ಅವಕಾಶವನ್ನೇ ನೀಡಿಲ್ಲ. ನಾನು ತಿನ್ನಲ್ಲ, ನಿನ್ನೋರಿಗೂ ಕೊಡಲ್ಲ ಅಂತ ಹೇಳಿಕೊಳ್ಳುತ್ತಲೇ ಬಂದಿದ್ದಾರೆ.

ಮೋದಿ ಜನಪ್ರಿಯತೆ ಹೆಚ್ಚಳಕ್ಕೆ ಕಾರಣ ಏನು?
ಕೊರೊನಾ ಸೋಂಕಿನಿಂದ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಕುಸಿದು ಬಿಟ್ಟಿದೆ. ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾದಂತಹ ರಾಷ್ಟ್ರಗಳ ಆರ್ಥಿಕತೆಯೇ ಪಲ್ಟಿ ಹೊಡೆದಿದೆ. ಪಾಕಿಸ್ತಾನದಲ್ಲಿ ನೌಕರರಿಗೆ ಸಂಬಂಳ ಕೊಡಲಾಗದೇ ಪರದಾಡುತ್ತಿದ್ದಾರೆ. ಇನ್ನು ಪ್ರವಾಸಿಗರನ್ನೇ ನಂಬಿಕೊಂಡಿದ್ದ ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಆದ್ರೆ, ಭಾರತದಲ್ಲಿ ಆರ್ಥಿಕತೆಗೆ ಹಿನ್ನಡೆಯಾಗಿರೋದು ಸತ್ಯ. ಆದ್ರೆ, ಅದನ್ನು ಉತ್ತಮ ರೀತಿಯಲ್ಲಿ ನರೇಂದ್ರ ಮೋದಿ ಹ್ಯಾಂಡಲ್‌ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ದೇಶದ ಜನ ಮುಗಿಲೇಳದಂತೆ ನೋಡಿಕೊಂಡಿದ್ದಾರೆ. ಅದರಲ್ಲಿಯೂ ಕೊರೊನಾ ಸಮಯದಲ್ಲಿ ಬಡತನ ರೇಖೆಗಿಂತ ಕೇಳಿನವರಿಗೆ ಉಚಿತ ಪಡಿತರ ನೀಡುವ ಮೂಲಕ ಪ್ರಶಂಸೆಗೆ ಒಳಲಾಗಿದ್ದಾರೆ.

blank

ಜೋ ಬೈಡನ್‌ ಜನಪ್ರಿಯತೆ ಕುಸಿಯಲು ಕಾರಣ ಏನು?
ಅಫ್ಘಾನ್‌ನಲ್ಲಿ ಸೇನೆ ಹಿಂತೆಗೆತದಿಂದ ಬೈಡನ್‌ ಜನಪ್ರಿಯತೆ ಕುಸಿಯಿತಾ?

ಇಷ್ಟು ವರ್ಷಗಳ ಕಾಲ ಜನಪ್ರಿಯತೆ ವಿಷಯ ಮೇಲೆ ಯಾವುದೇ ಸಮೀಕ್ಷೆ ನಡೆದ್ರೂ ಅಮೆರಿಕ ಅಧ್ಯಕ್ಷರೇ ಅಗ್ರಸ್ಥಾನ ಪಡೆದಿರುತ್ತಿದ್ರು. ಇದನ್ನು ಹಲವಾರು ಸಮೀಕ್ಷೆಗಳಲ್ಲಿ ನೋಡಿದ್ದೇವೆ. ಆದ್ರೆ, ಮಾರ್ನಿಂಗ್ ಕನ್ಸಲ್ಟೆನ್ಸಿ ನಡೆಸಿದ ಸಮೀಕ್ಷೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅಘ್ಘಾನ್‌ ಸ್ಥಾನದ ಘಟನೆ ಎನ್ನಲಾಗಿದೆ. ಹೌದು, 20 ವರ್ಷಗಳ ನಂತರ ಅಮೆರಿಕ ಸೇನೆಯನ್ನು ಅಫ್ಘಾನ್‌ನಿಂದ ಅಮೆರಿಕಾಗೆ ವಾಪಸ್‌ ಕರೆಯಿಸಿಕೊಳ್ಳಲಾಗಿದೆ. ಇದರಿಂದ ತಾಲಿಬಾನ್‌ ಉಗ್ರರು ಅಫ್ಘಾನ್‌ ವಶಪಡಿಸಿಕೊಂಡು ಕ್ರೌರ್ಯ ಮೆರೆಯುವಂತಾಯಿತು. ಇದರಿಂದಾಗಿ ವಿಶ್ವಾದ್ಯಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಜೋ ಬೈಡನ್‌ ಜನಪ್ರಿಯತೆ ಕುಸಿದಿದೆ ಎನ್ನಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ನಾಯಕರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಇಡೀ ವಿಶ್ವದಲ್ಲಿಯೇ ಅಗ್ರಸ್ಥಾನಿತರಾಗಿ ಹೊರಹೊಮ್ಮಿರುವುದು ಪ್ರಶಂಸನೀಯ. ದೇಶದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿ ಎಂಬುದೇ ನಮ್ಮ ಆಶಯ.

Source: newsfirstlive.com Source link