ಆಫ್ಘನ್ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಮುಂದಾದ ಚೀನಾ.. ಡ್ರ್ಯಾಗನ್​ನ ನರಿ ಬುದ್ಧಿ ಬಗ್ಗೆ ಇಲ್ಲಿದೆ ಡೀಟೇಲ್ಸ್

ಆಫ್ಘನ್ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಮುಂದಾದ ಚೀನಾ.. ಡ್ರ್ಯಾಗನ್​ನ ನರಿ ಬುದ್ಧಿ ಬಗ್ಗೆ ಇಲ್ಲಿದೆ ಡೀಟೇಲ್ಸ್

ನಿಮಗೆ ಬಡ್ಡಿ ವ್ಯವಹಾರ ಮಾಡೋರ ಬಗ್ಗೆ ಗೊತ್ತಿರಬಹುದು. ಮೊದಲಿಗೆ ಬಡ್ಡಿ ಕೊಡ್ತಾರೆ. ಸಾಲ ತಗೊಂಡೋರು ಯಾವ ಕಾರಣಕ್ಕೂ ಅದನ್ನ ತೀರಿಸಬಾರದು.. ಆ ರೀತಿ ನೋಡಿಕೊಳ್ತಾರೆ. ಕೊನೆಗೆ ಸಾಲ ತಗೊಂಡೋರು ಅದನ್ನ ತೀರಿಸೋಕೆ ಆಗದೆ, ತಮ್ಮ ಮನೆನೋ ಸೈಟ್​ನೋ ಬಡ್ಡಿದಾರರಿಗೇ ಕೊಟ್ಟು ಬಿಡ್ತಾರೆ. ಚೀನಾದ್ದೂ ಇಂತಹ ನರಿ ಬುದ್ದಿನೇ. ಬಡ ರಾಷ್ಟ್ರಗಳಿಗೆ ಸಾಲ ಕೊಡೋದು ಕೊನೆಗೆ ಅವರ ಆಸ್ತಿ ಲಪಟಾಯಿಸೋದು. ಸದ್ಯಕ್ಕೆ ಅಂತಾದ್ದೇ ಒಂದು ಬೆಳವಣಿಗೆ ಆಗಿದೆ.

ಕಳೆದ ಒಂದು ವಾರದಿಂದ ಎಲ್ಲಾ ಹರಿದಾಡುತ್ತಿರೋದು ಒಂದೇ ಸುದ್ದಿ. ಅದು ಬಗ್ರಾಮ್ ಏರ್ ಬೇಸ್ ಅನ್ನ ಚೀನಾ ವಶಕ್ಕೆ ಪಡೆದುಕೊಳ್ಳುತ್ತೆ. ಆ ಮೂಲಕ ಭಾರತದ ವಿರುದ್ದ ಚೀನಾ ಮತ್ತೊಂದು ಬಲಿಷ್ಟ ಏರ್ ಬೇಸ್ ಅನ್ನ ತನ್ನದಾಗಿಸಿಕೊಂಡು ಅಫ್ಘಾನ್​​ ನಲ್ಲಿ ತನ್ನ ಸೇನೆ ಸದಾ ಸನ್ನದ್ಧವಾಗಿಸಿಕೊಳ್ಳೋ ಪ್ಲಾನ್ ಅನ್ನ ಮಾಡಿಕೊಂಡಿದೆ. ಈ ರೀತಿಯಾದ ಸುದ್ದಿಗಳು ಕಳೆದ ಒಂದು ವಾರದಿಂದ ಹರಿದಾಡುತ್ತಿರೋದು ಹೌದು. ಆದರೆ ಇದೆಲ್ಲವು ಸಾಧ್ಯಾವಾ ಅನ್ನೋ ಪ್ರಶ್ನೆ ಮೂಡುತ್ತೆ..

blank

ಅದಕ್ಕೂ ಮುನ್ನ ಈ ಬಗ್ರಾಮ್ ಏರ್​ ಬೇಸ್​​ ಬಗ್ಗೆ ನಿಮಗೆ ಹೇಳಲೇಬೇಕು. ನಂತರ ಏರ್ ಬೇಸ್​ ಮೇಲೆ ಚೀನಾ ಕಣ್ಣು ಯಾಕೆ ಬಿದ್ದಿದೆ ಅನ್ನೋದನ್ನ ಹೇಳ್ತಿವಿ. ನೋಡಿ ಇದೇ ಆ ಏರ್ ಬೇಸ್​​​​… ಅಫ್ಘಾನಿಸ್ತಾನದಲ್ಲಿರೋ ಏರ್​ ಬೇಸ್​​ಗಳ ಪೈಕಿ, ಇದು ಅತಿ ದೊಡ್ಡ ಏರ್​ ಬೇಸ್​​​​.. ಈಗಾಗಲೇ ಎರಡು ಬಲಿಷ್ಠ ರಾಷ್ಟ್ರಗಳು ಇಲ್ಲಿ ಸುಮಾರು ವರ್ಷಗಳ ಕಾಲ ನೆಲೆಸಿ, ಅಭಿವೃದ್ಧಿ ಪಡಿಸಿರೋ ಇತಿಹಾಸ ಕೂಡ ಇದೆ. ಇದರ ಮಾಲಿಕತ್ವವನ್ನ ವಹಿಸಿರೋದು ಇಸ್ಲಾಮಿಕ್ ಎಮಿರೇಟ್ಸ್​ ಆಫ್ ಅಫ್ಘಾನಿಸ್ತಾನ್​.

1950 ರಲ್ಲಿ ಬಗ್ರಾಮ್ ಏರ್​ ಬೇಸ್​ ನಿರ್ಮಾಣ
ಸೋವಿಯತ್ ಒಕ್ಕೂಟದ ರಾಷ್ಟ್ರಗಳು ಹಾಗೂ ಯುನೈಟೆಟ್ ಸ್ಟೇಟ್ಸ್​​​​​​​ ನಡುವೆ ಶೀತಲ ಸಮರದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್​ ಕಣ್ಣು ಬಿದ್ದಿದ್ದು ಅಫ್ಘಾನಿಸ್ತಾನದ ಮೇಲೆ. ಮತ್ತೊಂದು ಕಡೆ ಸೋವಿಯತ್ ಒಕ್ಕೂಟದ ಕಣ್ಣು ಬಿದ್ದಿದ್ದು ಮಾತ್ರ ಐಲ್ಯಾಂಡ್ ಆಫ್ ಕ್ಯೂಬಾ ಹಾಗು ಫಿಡಲ್​ ಕಾಸ್ಟ್ರೋ… ಆಗಲೇ ನೋಡಿ 1950 ರಲ್ಲಿ ಬಗ್ರಾಮ್ ಏರ್​ ಬೇಸ್​​ ನಿರ್ಮಾಣ ಆಗೋದು. ಆದ್ರೆ ಅಲ್ಲಿ ಏರ್ ಬೇಸ್ ಅನ್ನ ನಿರ್ಮಾಣ ಮಾಡೋದು ಮಾತ್ರ ಸೋವಿಯತ್ ರಾಷ್ಟ್ರ.. ಅದಕ್ಕೆ ಕಾರಣವೇ ತನ್ನ ಪ್ರಭಾವ ಬೀರುವ ಸಲುವಾಗಿ.. ಆ ನಂತರದ ದಿನಗಳಲ್ಲಿ ಸುಮಾರು 30 ವರ್ಷಗಳ ಕಾಲ ಸೋವಿಯತ್ ಒಕ್ಕೂಟ ರಾಷ್ಟ್ರಗಳು ಈ ಏರ್ ಬೇಸ್​​ನಲ್ಲಿ ಆಳ್ವಿಕೆ ನಡೆಸಿತ್ತು.
ಈ ಏರ್​ ಬೇಸ್​​​ನಲ್ಲಿ ಆರಂಭದ ದಿನಗಳಲ್ಲಿ ಕಿರಿದಾದ ರನ್​ ವೇ ಇತ್ತು. ಆದ್ರೆ 1979 ರಲ್ಲಿ ಇಲ್ಲಿ ಅತಿ ಉದ್ದನೆಯ ಸ್ಟ್ರೀಪ್ ರನ್ ವೇಯನ್ನ ಸ್ಥಾಪಿಸಲಾಯಿತು. ಅಲ್ಲಿಂದ ಹೆವಿ ಯುದ್ದ ವಿಮಾನಗಳು ಇಲ್ಲಿ ಹಾರಾಟವನ್ನ ನಡೆಸಲು ಅನುಕೂಲವಾಗುವಂತೆ ಮಾಡಿಕೊಡಲಾಗಿತ್ತು. ಅಲ್ಲಿಂದ ಆರಂಭವಾಗಿದ್ದು ಇಂದಿಗೂ ಕೂಡ ಏರ್​ ಬೇಸ್​​ಗಳ ಮೇಲೆ ಹಲವು ರಾಷ್ಟ್ರಗಳ ಕಣ್ಣು ಬಿದ್ದಿದೆ ಅನ್ನೋದನ್ನ ನಾವಿಲ್ಲಿ ಅಲ್ಲಗೆಳೆಯುವಂತಿಲ್ಲ.

blank

ಸದ್ಯ.. ಪಂಜ್​ಶೀರ್ ಅನ್ನೊ ಈಶಾನ್ಯ ಭಾಗದ ಪ್ರಾಂತ್ಯವನ್ನ ಹೊರತು ಪಡಿಸಿ ಇಡೀ ಅಫ್ಘಾನ್ ಅನ್ನ ತಾಲಿಬಾನಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಶತಾಯ ಗತಯಾ ಪಂಜ್ ಶೀರ್ ಅನ್ನ ವಶಪಡಿಸಿಕೊಳ್ಳಬೇಕು ಅನ್ನೋ ಕಾತುರದಲ್ಲಿದ್ದುಕೊಂಡು ತುದಿಗಾಲಲ್ಲಿ ನಿಂತಿದೆ. ನಿಜ ಹೇಳಬೇಕು ಅಂದ್ರೆ ಇವತ್ತು ಇಡೀ ತಾಲಿಬಾನಿಗಳು ಅದ್ರಲ್ಲಿ ಮೂರನೇ ಸುಪ್ರಿಮ್ ಅಂತಾ ಕರೆಸಿಕೊಂಡಿರೋ ಹೈಬತುಲ್ಲಾ ಅಖುಂದ್​​​ಜಾದಾ ಕೂಡ ಪಂಜ್ ಶೀರ್ ವಿಚಾರವಾಗಿ ತಲೆ ಕೆಡಿಸಿಕೊಂಡು ಕೂತಿದ್ದಾರೆ. ಈಗಾಗಲೇ 600 ಮಂದಿ ತಾಲಿಬಾನಿಗಳು ಹತರಾಗಿದ್ದಾರೆ. 1000 ಕ್ಕೂ ಹೆಚ್ಚು ಪಂಜ್​ಶೀರ್ ಸಿಂಹ ಪಡೆ ಸೆರೆಹಿಡಿದಿದ್ದಾರೆ. ಇದೇ ಕಾರಣಕ್ಕಾಗಿಯೇ ತಾಲಿಬಾನಿಗಳೆಲ್ಲರು ತಲೆ ಕೆಡಿಸಿಕೊಂಡಿರೋದು. ಆದ್ರೆ ಇದನ್ನ ಲಾಭವನ್ನಾಗಿಸಿಕೊಂಡಿದೆ ಚೀನಾ..

ಹೌದು.. ಸದ್ಯದ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿರೋ ಚೀನಾ, ಇದೇ ಸೂಕ್ತ ಸಮಯ ಎಂದು ತಿಳಿದು ಬಗ್ರಾಮ್​​​ ಏರ್​​​ ಬೇಸ್​ ಮೇಲೆ ಕಣ್ಣನ್ನಿಟ್ಟಿದೆ.. ಚೀನಾ ಬಗ್ರಾಮ್ ಗೆ ಕಾಲಿಡೋ ಮೂಲಕ ಭಾರತದ ಪಾಲಿಗೆ ರಕ್ಷಣಾತ್ಮಕವಾಗಿ ಅತಿ ದೊಡ್ಡ ಆತಂಕವಾದ ಸೃಷ್ಠಿ ಮಾಡೋ ಸಾಧ್ಯತೆ ಇದೆ ಎಂದು ಹೇಳಿದ್ದು ನಿಕ್ಕಿ ಹ್ಯಾಲೆ.. ಹೌದು ಇಂದು ಈ ನಿಕ್ಕಿ ಹ್ಯಾಲೆ ಹೇಳ್ತಿರೋ ಪ್ರಕಾರ ಬಗ್ರಾಮ್ ಏರ್​​ಬೇಸ್​​ಗೆ ಚೀನಾ ಕಾಲಿಡುತ್ತೆ, ಆಗ ಭಾರತಕ್ಕೆ ಕಂಟಕ ಅಂತಿದ್ದಾರೆ.. ನಿಮಗೆಲ್ಲಾ ಅನ್ನಿಸಿರಬಹುದು. ಯಾರು ಈ ನಿಕ್ಕಿ, ಈಕೆ ಹೇಳಿರೋದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತಾ.. ಹಾಗಾದ್ರೆ ನಿಕ್ಕಿ ಹ್ಯಾಲೆ ಯಾರು ಅನ್ನೋದನ್ನ ನೋಡೋದಾದ್ರೆ..

blank

ನಿಕ್ಕಿ ಹ್ಯಾಲೆ… ಈಕೆ ಸದ್ಯ ಅಮೇರಿಕಾದ ಡಿಪ್ಲೋಮ್ಯಾಟ್ ಮತ್ತು ರಾಜಕಾರಣಿ.. ನಿಕ್ಕಿ ಭಾರತೀಯ ಅಮೆರಿಕನ್ ಮಹಿಳೆ… ಈ ಹಿಂದೆ ಈಕೆ ಸೌತ್​ ಕರೋಲಿನಾದ ಗರ್ವನರ್ ಕೂಡ ಆಗಿದ್ದವರು. ಅಲ್ಲದೇ ವಿಶ್ವ ಸಂಸ್ಥೆಯಲ್ಲಿ ಅಮೆರಿಕಾದ ಪ್ರತಿನಿಧಿ ಆಗಿದ್ದರು. ರಿಪಬ್ಲಿಕನ್ ಪಕ್ಷದ ನಾಯಕಿ ಕೂಡ ಆಗಿದ್ದಾರೆ… ಅಮೆರಿಕಾದ ವಿರೋಧ ಪಕ್ಷದ ನಾಯಕಿಯಾಗಿದ್ದಾರೆ ಈ ನಿಕ್ಕಿ ಹ್ಯಾಲೆ.. ಇದೆಲ್ಲದಕ್ಕಿಂತ ಪ್ರಮುಖವಾದ ಅಂಶ ಅಂದ್ರೆ ಭಾರತದ ಮೇಲೆ ಹೆಚ್ಚು ಒಲವನ್ನ ಹೊಂದಿರೋ ಅಮೆರಿಕನ್​ ಪ್ರಜೆಯಾಗಿದ್ದಾರೆ. ಅವರು ಒಂದು ಮಾತು ಹೇಳಿದ್ದಾರೆ ಅದೇನಂದ್ರೆ, ಅಫ್ಘಾನ್​ ತೊರೆದಿರೋ ಅಮೇರಿಕಾ ತನ್ನ ಮಿತ್ರ ರಾಷ್ಟ್ರಗಳ ಭದ್ರತೆಯ ಬಗ್ಗೆ ಒಂದಷ್ಟು ಗಮನ ಹರಿಸಬೇಕು, ಆ ಮೂಲಕ ಒಂದು ಭರವಸೆಯನ್ನ ಮೂಡಿಸಬೇಕು ಎಂದು ಹೇಳುತ್ತಿದ್ದಾರೆ..

ನಿಕ್ಕಿ ಹ್ಯಾಲೆ ಅವರಿಗೆ ಭಾರತದ ಮೇಲಿರೋ ಕಾಳಜಿಯನ್ನ ನಾವು ಇಲ್ಲಿ ಪ್ರಶಂಸಿಲೇಬೇಕು. ಒಂದು ವೇಳೆ ಈ ಏರ್ ಬೇಸ್ ಅನ್ನ ಚೀನಾ ಆಕ್ರಮಿಸಿಕೊಂಡಿದ್ದೇ ಆದ್ರೆ ನಿಕ್ಕಿ ಹ್ಯಾಲಿ ಹೇಳಿದಂತೆ ಭಾರತಕ್ಕೆ ಆಗೋ ನಷ್ಟವೇನು ಅನ್ನೋ ಲೆಕ್ಕಚಾರಗಳು ಈಗ ಶುರು ಆಗಿದೆ. ಹಾಗಾದ್ರೆ ಅದನ್ನ ನೋಡೋದಾದ್ರೆ..?

ಚೀನಾ ಅಫ್ಘಾನ್ ಗೆ ಬಂದು ಕೂತ್ರೆ ಭಾರತಕ್ಕೆ ಆಗೋ ನಷ್ಟವೇನು
ಅಫ್ಘಾನಿಸ್ತಾನದ ಮೇಲೆ ಚೀನಾ ಕಣ್ಣಾಕಿದೆ ಅನ್ನೋದು ಸುಳ್ಳೇನಲ್ಲ ಹಾಗಂತ ಚೀನಾ ಆಕ್ರಮಿಸಿಕೊಳ್ಳೋದಕ್ಕೆ ಹೋಗೋದಿಲ್ಲಾ ಅನ್ನೋ ಮಾತು ಕಟು ಸತ್ಯವೇ ಹೌದು.. ಆದ್ರೆ ಮುಂದಿನ ದಿನಗಳಲ್ಲಿ ಚೀನಾ ಹಂತ ಹಂತವಾಗಿ ತನ್ನ ಕಬಂಧ ಬಾಹುವನ್ನ ಅಫ್ಘಾನ್​ ನಲ್ಲಿ ಚಾಚುತ್ತಾ ಹೋಗಲಿದೆ. ಸದ್ಯಕ್ಕೆ ಬೇರೆ ರಾಷ್ಟ್ರಗಳನ್ನ ಹೇಗೆ ಬಲಿ ಪಶು ವನ್ನಾಗಿ ಮಾಡಿದೆ ಅನ್ನೋದಕ್ಕೆ ಹಲವು ಉದಾಹರಣೆಗಳು ಇದೆ. ಚೀನಾ ಮಾಡೋದು ಇಷ್ಟೇ ಬೇರೆ ಬೇರೆ ಕಾರಣಗಳನ್ನ ಹೇಳಿಕೊಂಡು ಮೊದಲಿಗೆ ಕಾಲಿಡುತ್ತೆ. ಅದೇ ರೀತಿ ನರಿ ಬುದ್ದಿಯಿರೋ ಚೀನಾ ಅಫ್ಘಾನಿಸ್ತಾನದಲ್ಲಿಯೂ ಕೂಡ ವ್ಯಾಪಾರದ ಹೆಸರಲ್ಲಿ, ಅಭಿವೃದ್ಧಿ ಹೆಸರಲ್ಲಿ, ಸಾಲದ ಹೆಸರಲ್ಲಿ ಕಾಲಿಡ್ತಾರೆ.. ನಂತರ ಅದು ಸಂಪೂರ್ಣ ತನ್ನ ಹಿಡಿತದಲ್ಲಿರುವಂತೆ ಮಾಡಿಕೊಳ್ಳುತ್ತದೆ.

ಸದ್ಯಕ್ಕೆ ತಾಲಿಬಾನಿಗಳ ಬಳಿ ಫಂಡಿಂಗ್ ಇಲ್ಲಾ ಅನ್ನೋದು ಸತ್ಯವೇ, ಅದನ್ನೆ ದುರ್ಬಳಕೆ ಮಾಡಿಕೊಳ್ಳುವ ಪ್ಲಾನ್​ನಲ್ಲಿರೋ ಚೀನಾ ತಾಲಿಬಾನಿಗಳಿಗೆ ಮುಂದಿನ ದಿನಗಳಲ್ಲಿ ಹಣವನ್ನ ಕೊಟ್ರು ಕೊಡಬಹುದು.. ಆ ಮೂಲಕ ಹಣದ ಆಸೆ ತೋರಿಸಿ ಅಫ್ಘಾನ್ ಎಂಟ್ರಿ ಕೊಡಲಿದೆ ಚೀನಾ.

ಈಗಾಗಲೇ ಚೀನಾ ಇದೇ ರೀತಿ ಸಂಕಷ್ಟದಲ್ಲಿದ್ದ ಶ್ರೀಲಂಕಾಗೆ ಲಕ್ಷ ಲಕ್ಷ ಕೋಟಿ ಸಾಲ ನೀಡಿ ಶ್ರೀಲಂಕಾ ಸಾಲ ತೀರಿಸಲಾಗದೆ ಶ್ರೀಲಂಕಾದ ಒಂದು ವಾಯು ನೆಲೆ ಆಗಿರೋ ಹಂಬನ್​​ಟೋಟಾವನ್ನ ತನ್ನ ಹೆಸರಿಗೆ ಬರೆಸಿಕೊಂಡಿದೆ. ಮತ್ತೊಂದು ಸೌತ್ ಆಫ್ರಿಕಾ ರಾಷ್ಟ್ರಗಳಲ್ಲಿ ಒಂದಾದ ದಿಬೋಟಿ ಮಿಲಟರಿ ಬೇಸ್ ಅನ್ನ ಸಹ ವಶಪಡಿಸಿಕೊಂಡಿದೆ. ಈಗ ಬಗ್ರಾಮ್ ಏರ್ ಬೇಸ್ ಅನ್ನು ಕೂಡ ವಶ ಪಡಿಸಿಕೊಳ್ಳೋ ಪ್ಲಾನ್ ನಲ್ಲಿದೆ ಚೀನಾ.. ಇದೇ ಕಾರಣಕ್ಕಾಗಿ ಭಾರತಕ್ಕೆ ಸಂಕಷ್ಟ ಅಂತಾ ಹೇಳಲಾಗ್ತಿರೋದು. ಆದರೆ, ಕೆಲವರು ಇದನ್ನ ಅಲ್ಲೆಗಳೆದಿದ್ದಾರೆ.. ಚೀನಾ ಬಗ್ರಾಮ್ ವಾಯು ನೆಲೆಯನ್ನ ವಶಪಡಿಸಿಕೊಳ್ಳೋದ್ರ ಹಿಂದೆ ಈ ಮಿಲಿಟರಿ ಉದ್ದೇಶವಲ್ಲ ಬದಲಿಗೆ ಬೇರೆಯದ್ದೇ ಉದ್ದೇಶವಿದೆ ಅಂತಾ ಹೇಳಲಾಗುತ್ತಿದೆ.

ಚೀನಾಗೆ ಬಹುಮುಖ್ಯವಾಗಿ ಗಮನ ಹರಿಸುತ್ತಿರೋದು ಅಫ್ಘಾನಿಸ್ತಾನದಲ್ಲಿರೋ ಅಪಾರವಾದ ಖನಿಜ ಸಂಪತ್ತಿನ ಮೇಲೆ. ಆದ್ದರಿಂದ ಇಲ್ಲಿ ಭಾರತಕ್ಕೆ ಸಂಕಷ್ಟ ಎದುರಾಗುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಅಲ್ಲದೇ ಬಗ್ರಾಮ್ ಏರ್ ಬೇಸ್​ನಿಂದ ಕಾಬೂಲ್​​ಗೆ ಇರೋ ಅಂತರವೇ 45 ಕಿ.ಮೀ ಅಲ್ಲಿಂದ ಪಾಕಿಸ್ತಾನವನ್ನ ದಾಟಿ ಭಾರತದ ಗಡಿಯತ್ತ ಬರೋದು ತುಂಬಾನೇ ಕಷ್ಟ. ಹಾಗಾಗಿಯೇ ಚೀನಾ ಕಣ್ಣಿರೋದು ಭಾರತದ ಮೇಲಲ್ಲ, ಬದಲಾಗಿ ಅಲ್ಲಿನ ಖನಿಜ ಸಂಪತ್ತಿನೆ ಮೇಲೆ..

ಅಫ್ಘಾನ್​ ನಲ್ಲಿ ಇಂದು ಅಪಾರವಾದ ಹರಳು, ಕಾಪರ್​​​​ ಇನ್ನಿತರ ಖನಿಜ ವಸ್ತುಗಳು ಹೇರಳವಾಗಿ ಸಿಗುತ್ತದೆ. ಇದರ ಮೇಲೆ ಕಣ್ಣನ್ನಿಟ್ಟಿರೋ ಚೀನಾ ಅಲ್ಲಿಂದ ಬಗ್ರಾಮ್ ವಾಯು ನೆಲೆಯನ್ನ ವಶಪಡಿಸಿಕೊಳ್ಳೋ ಕಾತುರದಲ್ಲಿದೆ. ನೋಡಿ.. ಇಲ್ಲಿ ತಾಲಿಬಾನಿಗಳಿಗೆ ಸದ್ಯ ಹಣದ ಅವಶ್ಯಕತೆಯಿರೋದ್ರಿಂದ ಅದನ್ನ ಕೊಡೋದು ಅದಕ್ಕೆ ಬಲದಾಗಿ ತನ್ನ ಕೆಲ ಯಂತ್ರೋಪಕರಣಗಳನ್ನ ಸಾಗಾಟ ಮಾಡೋದಕ್ಕೆ ನಿಮ್ಮ ಬಗ್ರಾಮ್ ವಾಯು ನೆಲೆಯನ್ನ ಬಳಕೆ ಮಾಡಿಕೊಳ್ಳುತ್ತಿವಿ ಅಂತಾ ಮನವರಿಸೋ ಮೂಲಕ ಅಲ್ಲಿ ಮೊದಲಿಗೆ ಕಾಲಿಡೋ ಕುತಂತ್ರವನ್ನ ಹೆಣೆದಿದೆ.

ಒಂದು ವೇಳೆ ಏನೋ ಒಂದು ಕಾರಣವನ್ನ ಹೇಳಿಕೊಂಡು ಬಗ್ರಾಮ್ ವಾಯು ನೆಲೆಗೆ ಚೀನಾ ಕಾಲಿಟ್ಟಿದ್ದೇ ಆದ್ರೆ ಅಲ್ಲಿ ನಂತರ ಅದು ತನ್ನ ಮತ್ತೊಂದು ಆಟವನ್ನ ಶುರು ಮಾಡುತ್ತೆ. ಅದು ವಾಯು ನೆಲೆಯನ್ನ ರಕ್ಷಣೆ ಮಾಡಿಕೊಳ್ಳಬೇಕು ಹಾಗಾಗಿ ತನ್ನ ಸೇನೆಯನ್ನ ರಕ್ಷಣಾತ್ಮಕವಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಅಲ್ಲಿ ಚೀನಾ ಸೇನೆಯನ್ನ ತಂದು ಇಳಸಿಬಹುದು. ಇಂದು ಪಾಕಿಸ್ತಾನದಲ್ಲಿಯೂ ಕೂಡ ಚೀನಾ ಮಾಡೀರೋದು ಇದನ್ನ. ಹೀಗೆ ನಿಧಾನವಾಗಿ ಚೀನಾ ಸೇನೆ ಎಂಟ್ರಿ ಕೊಟ್ಟ ಮೇಲೆ ನಂತರ ಯುದ್ದ ವಿಮಾನಗಳು ಬರುತ್ತವೆ.. ಆಗ ಏರ್​ ಬೇಸ್ ಅನ್ನ ನಾವೇ ಮೆಂಟೈನ್ ಮಾಡುತ್ತೇವೆ ಎಂದು ಹೇಳಿದ್ರೆ ಅಲ್ಲಿಗೆ ಮುಗಿಯಿತು.

ಇನ್ನು ಈ ಬಗ್ರಾಮ್ ಏರ್​ ಬೇಸ್​​​​​ ಅನ್ನ ಈಗಾಗಲೇ ಜಗತ್ತಿನ ಎರಡು ಸೂಪರ್ ಪವರ್ ರಾಷ್ಟ್ರಗಳು ಆಳಿದೆ, ಇದರ ನಿರ್ಮಾಣಕ್ಕೆ, ದುರಸ್ಥಿಗೆ ಸಾಕಷ್ಟು ಹಣವನ್ನ ವ್ಯಯಿಸಿದೆ. ಒಂದು ವೇಳೆ ಚೀನಾ ವಶಕ್ಕೆ ಪಡೆದುಕೊಂಡರೆ ಅದು ಮೂರನೇ ರಾಷ್ಟ್ರವಾಗಲಿದೆ.
ಇನ್ನು 1950 ರಲ್ಲಿ ಈ ಏರ್ ಬೇಸ್ ಅನ್ನ ನಿರ್ಮಾಣ ಮಾಡಿದ್ದು ಸೋವಿಯತ್ ಯೂನಿಯನ್. ಆಗ ಆಫ್ಘಾನ್ ಮೇಲೆ ಸೋವಿಯತ್ ಹಿಡಿತ ಇತ್ತು. ನಂತರದ ದಿನಗಳಲ್ಲಿ ಅಲ್ಲೊಂದು ರಾಜದ್ರೋಹ ಆಗಿ ಅಫ್ಘಾನ್ ಮಂತ್ರಿ ಹಾಗೂ ರಾಜಾ ಜಹಿರ್ ಶಾನ ಸಂಬಂಧಿಯೂ ಆಗಿದ್ದ ದಾವೂದ್ ಖಾನ್, ರಾಜನನ್ನ ಪದಚ್ಯುತಗೊಳಿಸಿ ತಾನು ಅಧ್ಯಕ್ಷನಾಗಿ ಅಧಿಕಾರವನ್ನ ಸ್ವೀಕರಿಸಿದ. ಆ ನಂತರ ಸಣ್ಣದಾಗಿ ಅಮೇರಿಕಾದ ಕಡೆ ವಾಲೋದಕ್ಕೆ ಶುರು ಮಾಡ್ತು. ನಂತರ ಕಮ್ಯೂನಿಸ್ಟ್ ಕ್ರಾಂತಿ ಆಯ್ತು. ಮುಂದೆ ರಷ್ಯಾ ಕಮ್ಯೂನಿಸ್ಟ್​ ಪಡೆಗಳು ಅಫ್ಘಾನ್​​ಗೆ ಕಾಲಿಟ್ಟವು ಹಲವು ವರ್ಷಗಳ ಕಾಲ ರಷ್ಯಾ ಹಿಡಿತದಲ್ಲಿತ್ತು ಈ ಬಗ್ರಾಮ್ ಏರ್​ ಬೇಸ್.

ಯಾವಾಗ ರಷ್ಯಾ ಇಲ್ಲಿ ಕಾಲಿಟ್ಟಿತ್ತೋ ಆಗ ಅವರು ಅಲ್ಲಿ ಅತ್ಯಂತ ಉದ್ದನೆಯ ಏರ್ ಸ್ಟ್ರೀಪ್ ಅನ್ನ ಮಾಡಿದ್ರು. ನಂತರ ಒಂದು ನಗರದ ರೀತಿಯಲ್ಲಿ ನಿರ್ಮಾಣ ಮಾಡಿದ್ರು, ವಸತಿ ವ್ಯವಸ್ತೆಗಳನ್ನ ನಿರ್ಮಾಣ ಮಾಡಿದ್ರು. ಸಿನಿಮಾ ಥಿಯೇಟರ್​​ಗಳು, ಸ್ಪಾ, ಈಜುಕೊಳ, ರೆಸ್ಟೋರೆಂಟ್​​ ಪ್ರತಿಯೊಂದು ತಲೆಯೆತ್ತಿ ನಿಂತುಕೊಂಡಿತ್ತು. ಆದ್ರೆ 90 ರ ದಶಕದಲ್ಲಿ ರಷ್ಯಾ ಅಲ್ಲಿಂದ ಕಾಲ್ತೆಗೆದು ನಂತರ ಅಲ್ಲಿ ತಾಲಿಬಾನ್​ ಆಡಳಿತ ಬಂದ ತಕ್ಷಣವೇ ಬಗ್ರಾಮ್ ಏರ್ ಬೇಸ್ ಅನ್ನ ಭಾಗಶಃ ನಾಶ ಮಾಡಲಾಯಿತು. 2001 ರಲ್ಲಿ ಅಮೆರಿಕಾ ಅಫ್ಘಾನ್​ಗೆ ಬಂದ ಮೇಲೆ ಮತ್ತೆ ಅಭಿವೃದ್ಧಿ ಪಡಿಸಿದ್ರು, ನಂತರ ಇದು ಅಮೆರಿಕಾದ ಅತಿ ಮುಖ್ಯ ಏರ್​ ಬೇಸ್ ಅಂತಾ ಅನ್ನಿಸಿಕೊಂಡಿತ್ತು. ಸುಮಾರು 3602 ಮೀಟರ್ ಉದ್ದದ ಏರ್ ಸ್ಟ್ರೀಪ್ ಇದ್ದು, ಇಲ್ಲಿ ಭಾರೀ ಗಾತ್ರದ ವಿಮಾನಗಳು ಇಳಿಸಬಹುದು. ಇನ್ನು ಇಲ್ಲಿ ಯುದ್ದ ವಿಮಾನಗಳನ್ನ ನಿಲ್ಲಿಸೋ ಸ್ಥಳ ಕೂಡ ಇದೆ. ಸಾಕಷ್ಟು ಸಪೋರ್ಟಿಂಗ್ ಬಿಲ್ಡಿಂಗ್ ಗಳು ಇದೆ. ಸಿಬ್ಬಂದಿಗೆ ಬೇಕಾದ ವಸತಿ ವ್ಯವಸ್ಥೆ ಕೂಡ ಇವೆ. ಇಲ್ಲಿ ಅಮೇರಿಕಾ ಜೈಲನ್ನ ಸಹ ಮಾಡಿಕೊಂಡಿತ್ತು. ಆದ್ರೆ ಅಮೆರಿಕಾ ಇಲ್ಲಿಂದ ಹೊರಟ ಮೇಲೆ ತಾಲಿಬಾನಿಗಳು ಇಲ್ಲಿನ ಜೈಲಿನಲ್ಲಿದ್ದವರನ್ನ ಬಿಡುಗಡೆ ಮಾಡಿದ್ದಾರೆ. ಸದ್ಯ ಇಲ್ಲಿನ ಏರ್ ಬೇಸ್ ಅನಾಥವಾಗಿ ನಿಂತಿದೆ..

ಸುತ್ತ ಬೆಟ್ಟಗುಡ್ಡಗಳಿಂದ ಕೂಡಿದ್ದು, ಸುಸಜ್ಜಿತ ಪ್ಲೇಸ್​​ನಲ್ಲಿರೋ ಈ ಏರ್​ ಬೇಸ್​​​​ ಮೇಲೆ ಸದ್ಯ ಕಣ್ಣಿಟ್ಟಿರೋದು ಚೀನಾ.. ಸದ್ಯಕ್ಕಂತು ಏರ್​ ಬೇಸ್​​ ಖಾಲಿ ಖಾಲಿ ಆಗಿದೆ.. ಮುಂದೆ ಇದು ಯಾರ ತೆಕ್ಕೆಗೆ ಸೇರಿಕೊಳ್ಳಲಿದೆ ಅನ್ನೋದನ್ನ ಕಾಲವೇ ಉತ್ತರಿಸಲಿದೆ.

Source: newsfirstlive.com Source link