ಸಾಯುವ ಮೊದಲೇ ರೆಡಿಯಾಗಿದೆ ಬ್ರಿಟನ್ ರಾಣಿಯ ಅಂತ್ಯಸಂಸ್ಕಾರದ ಪ್ಲಾನ್

ಸಾಯುವ ಮೊದಲೇ ರೆಡಿಯಾಗಿದೆ ಬ್ರಿಟನ್ ರಾಣಿಯ ಅಂತ್ಯಸಂಸ್ಕಾರದ ಪ್ಲಾನ್

ಅವರು ಬ್ರಿಟನ್ ದೇಶದ ಮಹಾರಾಣಿ. ಬರೀ ಮಹಾರಾಣಿ ಅಲ್ಲ, ಜನರ ಪ್ರೀತಿ, ಒಲವು ಅತಿಯಾದ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಧೀಮಂತ ನಾಯಕಿ. ದಿ ಕ್ವೀನ್ ಆಫ್ ಬ್ರಿಟನ್ ಎಲಿಜಬೆತ್ 2. ಇವರ ಅಂತ್ಯಸಂಸ್ಕಾರ ಹೇಗಿರಬೇಕು ಅನ್ನೋ ಪ್ಲಾನ್ ಇದೀಗ ಎಲ್ಲೆಲ್ಲೂ ಓಡಾಡುತ್ತಿದೆ. ಅರೆ! ಮಹಾರಾಣಿಯವರು ವಿಧಿವಶರಾದ್ರಾ? ಎಂದು ಶಾಕ್ ಆಗ್ಬೇಡಿ. ಅವರು ವಿಧಿವಶರಾಗಿಲ್ಲ.

ಕ್ವೀನ್ ಎಲಿಜಬೆತ್ 2. ಮುಖದಲ್ಲಿ ಸದಾ ಆಕರ್ಷಣೆಯ ನಗುವನ್ನು ಹೊತ್ತು ತಿರುಗಾಡುವ ಇವರು, ಬ್ರಿಟನ್ ಪ್ರಜೆಗಳ ನೆಚ್ಚಿನ ರಾಣಿ. ಅವರ ಸ್ಥಾನ, ಅಂತಸ್ತು, ಪ್ರತಿಷ್ಟೆ ಎಲ್ಲವನ್ನು ಮರೆತು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇದ್ದು ಬಿಡುವ ಗುಣ ಈ ರಾಣಿಯದು. ತನ್ನ ದೇಶದ ಪ್ರಜೆಯೆಂದರೆ ಆಕೆಗೆ ಇನ್ನಿಲ್ಲದ ಪ್ರೀತಿ. ತನ್ನ ಬ್ಯುಸಿ ದಿನಚರಿಯಲ್ಲಿಯೂ ಯಾರಾದ್ರು ಸಿಕ್ಕರೆ ತನ್ನ ಪ್ರೀತಿ ಮಾತುಗಳಿಂದ ಎಲ್ಲರನ್ನು ಸಂತೋಷ ಪಡಿಸುತ್ತಾರೆ. ಇದುವೇ ರಾಣಿ ಎಲಿಜಬೆತ್ ಅವರ ಹುಟ್ಟು ಗುಣವಾಗಿದೆ.

ಮಹಾರಾಣಿಗೆ ಈಗ 95 ವರ್ಷ ವಯಸ್ಸು. ಅವರು ತಮ್ಮ ಚಿಕ್ಕ ವಯಸ್ಸಿಗೆ ಹಲವು ಜವಾಬ್ದಾರಿಯನ್ನು ಹೊತ್ತು ದೇಶದ ಜನರ ಒಳಿತಿಗಾಗಿ ಶ್ರಮಿಸಿದವರು. ತಂದೆ ಪ್ರಿನ್ಸ್ ನಾಲ್ಕನೇ ಜಾರ್ಜ್ ವಿಧಿವಶರಾದಾಗ ಕ್ವೀನ್ ಎಲಿಜಬೆತ್ ಅವರಿಗೆ 26 ವರ್ಷ. ಅದಕ್ಕೂ ಮುಂಚೆಯೇ ಇವರು, ದೇಶದ ಜನರನ್ನು ಕುರಿತು ರೇಡಿಯೋ ಸಂವಾದವನ್ನು ನಡೆಸುತ್ತಿದ್ದರು. 2ನೇ ವಿಶ್ವ ಮಹಾಯುದ್ಧವಾದಾಗ ಇವರೊಬ್ಬರು ಮಹಾರಾಜನ ಮಗಳು, ಮುಂದಿನ ಪೀಳಿಗೆಯ ಮಹಾರಾಣಿ ಎನ್ನುವುದನ್ನು ಮರೆತು, ಯುದ್ಧದಲ್ಲಿ ಗಾಯಾಳುಗಳಾದ ವೀರರ ಸೇವೆಗೆ ನರ್ಸ್ ಅವತಾರ ತಾಳಿ ಸೇವೆ ಮಾಡಿದ್ದರು. ಒಬ್ಬ ಮಹಾರಾಣಿ ಆದ್ರೂ ಯಾವುದೇ ಅಹಂ ಇಲ್ಲದೇ ಸೇವೆ ಮಾಡಿದ್ದು ಇಡೀ ವಿಶ್ವದ ಗಮನವನ್ನೇ ಸೆಳೆದಿತ್ತು. ಇನ್ನು ರಾಜತಂತ್ರ ಹಾಗೂ ಪ್ರಜೆಗಳು ಎಂದು ಬಂದಾಗ ದಿಟ್ಟ ನಾಯಕಿಯಾಗಿ ಸಕಲ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

blank
Image Source: theroyalfamily

ತನ್ನ ವಿಶಿಷ್ಟ ರಾಜತಂತ್ರ ಹಾಗೂ ನಡವಳಿಕೆಯಿಂದ ಎಲ್ಲರನ್ನು ತನ್ನ ಹತ್ತಿರದಲ್ಲಿ ಇರಿಸಿಕೊಂಡಿದ್ದ ರಾಣಿ ಇವರಾಗಿದ್ದಾರೆ. 1947 ರಲ್ಲಿ ಪ್ರಿನ್ಸ್ ಫೆಲಿಪ್ ಅವರೊಂದಿಗೆ ವಿವಾಹವಾದರು. ಮದುವೆಯಾದ ಮೇಲೋ ಪ್ರಜೆಗಳ ಸೌಖ್ಯವನ್ನು ವಿಚಾರಿಸುತ್ತಾ ಸಾಗಿದರು. ದೇಶದಲ್ಲಿ ಯಾವುದಕ್ಕೂ ಕೊರತೆ ಇಲ್ಲದಂತೆ 1952 ರಿಂದ ಇಂದಿನವರೆಗೂ ಎವರ್ ಸ್ಮೈಲಿಂಗ್ ಮಹಾರಾಣಿಯಾಗಿ ಬ್ರಿಟಿಷ್‌ ಜನರ ಮನಸಲ್ಲಿ ಮನೆ ಮಾಡಿಕೊಂಡಿದ್ದಾರೆ.

ಕೊರೊನಾ ಕಾಲದಲ್ಲಿ ಅಂದ್ರೆ ಏಪ್ರಿಲ್ 9, 2021ರಂದು ಪ್ರೀನ್ಸ್ ಫೆಲಿಪ್ ತಮ್ಮ 99ನೇ ವಯಸ್ಸಿನಲ್ಲಿ ವಿಧಿವಶರಾದ್ರು. ಅಂದಿನಿಂದ ಬ್ರಿಟನ್ ಮಹಾರಾಣಿಗೆ ಏನೋ ಸಂಕಟ. ತನ್ನ ಪತಿ ತೊರೆದಿದ್ದು, ನನ್ನ ಮನದಲ್ಲಿ ಒಂದು ದೊಡ್ಡ ಖಾಲಿ ಜಾಗ ಇದ್ದಂತಾಗಿದೆ ಎಂದು ಹೇಳಿಕೊಂಡಿದ್ದರು. ಇಷ್ಟಾದರೂ ಅವರ ಜನರ ಜೊತೆಗಿನ ಒಡನಾಡ ಹಾಗೂ ನಗು ಹುಟ್ಟಿಸುವ ಮಾತುಕತೆಗಳು ನಿಂತಿರಲಿಲ್ಲ. ಅವರಿಗೆ 95 ವರ್ಷವಾಗಿದೆ, ಇನ್ನು ತನ್ನ ಕಾಲ ಮುಗಿಯುವ ಹಂತಕ್ಕೆ ಬಂದು ತಲುಪಿದೆ ಅನ್ನುವ ಅನುಮಾನ ಕಾಡುತ್ತಿರಬೇಕು. ಯಾಕೋ ಅವರನ್ನು ಹೇಗಿದ್ದಿರಿ ಎಂದರೆ, ಇನ್ನೂ ಬದುಕಿದ್ದೀನಿ ಎನ್ನುವಂತಹ ಉತ್ತರವನ್ನು ನೀಡುತ್ತಿದ್ದರು..

blank

ಈ ಮಾತುಗಳು ಆ ಕ್ಷಣಕ್ಕೆ ನಗು ತರಿಸುವಂತಿದೆ. ಆದರೆ ಅವರ ಅಂತರಾಳದಲ್ಲಿ ತಮ್ಮ ಕೊನೆ ದಿನಗಳು ಎನ್ನುವ ಮೌನವಿದೆ ಅನ್ನೋದು ಅರಿಯಬಹುದು. ಇನ್ನುಳಿದಂತೆ ಎಲ್ಲರೊಂದಿಗೆ, ಯಾವುದೆ ಸಂಕೋಚವಿಲ್ಲದೆ ನಗೆ ಹುಟ್ಟಿಸುವ ಮಾತುಗಳನ್ನೆ ಆಡುತ್ತಾರೆ ಮಾಹಾರಾಣಿ.
ಇಷ್ಟು ಖುಷಿ ಖುಷಿಯಾಗಿ ಎಲ್ಲರೊಂದಿಗೂ ನಗೆ ಚಟಾಕಿ ಸಿಡಿಸುತ್ತಾ, ಎಲ್ಲರಿಗೂ ಸ್ಪಂದಿಸುತ್ತಾ ಇರುವ ಎಲಿಜಬೆತ್ ಅವರಿಗೂ ಸಾವು ಅನ್ನೋದು ಕಾಡದೆ ಬಿಟ್ಟಿಲ್ಲ. ಹಾಗೊಂದು ವೇಳೆ ಈ ಮಹಾರಾಣಿ ಕೊನೆ ಉಸಿರೆಳೆದರೇ ಏನೆಲ್ಲಾ ಆಗುತ್ತದೆ ಅನ್ನೋದು ಊಹೆಗೂ ಮೀರಿದ್ದು. ಯಾಕಂದರೆ ಅವರಿಗಿರುವ ಅಭಿಮಾನಿ ಬಳಗ ಎಲ್ಲೆಡೆಯಿಂದ ಹಾದು ಬಂದು ಬಿಡಬಹುದು. ವಿಶ್ವದ ನಾಯಕರೆಲ್ಲ, ಗಣ್ಯಾತಿಗಣ್ಯರೆಲ್ಲ ಮಹಾರಾಣಿಯ ಅಂತಿಮ ದರ್ಶನಕ್ಕೆ ಬ್ರಿಟನ್‌ಗೆ ಬರಲೇಬೇಕು. ಇನ್ನು ಯುನೈಟೆಡ್ ಕಿಂಗ್‌ಡಮ್​ಗೆ ಸೇರಿದ ಇಂಗ್ಲೆಂಡ್‌, ಸ್ಕಾಟ್ ಲ್ಯಾಂಡ್, ವೇಲ್ಸ್ ಹಾಗೂ ಐರ್ಲ್ಯಾಂಡ್​ಗಳಿಂದ ಕೋಟಿ ಕೋಟಿ ಜನ ಅರಮನೆ ಅಂಗಳಕ್ಕೆ ಕಾಲಿಡಿಬಹುದು. ಆ ಕ್ಷಣಕ್ಕೆ ಇದನ್ನು ನಿಯಂತ್ರಿಸಲು ಬಲು ಕಷ್ಟದ ಕೆಲಸ. ಅದಕ್ಕಾಗಿ ಮಹಾರಾಣಿಯ ಮಂತ್ರಿಮಂಡಲ, ರಾಣಿ ವಿಧಿವಶರಾದಾಗ ಅವರ ಅಂತ್ಯಸಂಸ್ಕಾರದ ರೂಪಾರೇಷ ಹೇಗಿರಬೇಕು ಎನ್ನುವ ಪ್ಲಾನ್ ರೆಡಿ ಮಾಡಿಕೊಂಡಿದೆ. ಅದಕ್ಕೆ ಆಪರೇಷನ್ ಲಂಡನ್ ಬ್ರಿಡ್ಜ್ ಎನ್ನುವ ಕೋಡ್ ನೇಮ್ ಸಹ ಇಟ್ಟು ಚರ್ಚೆಗಳು ನಡೆಯುತ್ತಿತ್ತು. ಆದರೆ, ಆ ಡಾಕ್ಯೂಮೆಂಟ್ ಈಗ ಎಲ್ಲೆಡೆ ಲೀಕ್ ಆಗಿ ಬಿಟ್ಟಿದೆ.

ಆಪರೇಷನ್ ಲಂಡನ್ ಬ್ರಿಡ್ಜ್​ನಲ್ಲಿ ಏನಿದೆ ಗೊತ್ತಾ ?
ಎಲಿಜಬೆತ್ ಅಂತ್ಯಸಂಸ್ಕಾರ ಹೀಗೆ ನಡೆಯಬೇಕು!

ಹೌದು.. ಕ್ವೀನ್ ಎಲಿಜಬೆತ್​ರವರ ಅಂತ್ಯಸಂಸ್ಕಾರ ಪಕ್ಕಾ ಪ್ಲಾನಿಂಗ್ ನಲ್ಲಿ ನೆರವೇರಬೇಕು. ಇಲ್ಲದಿದ್ದರೆ ಹೆಚ್ಚು ಅನಾಹುತಗಳೊಂದಿಗೆ ಅಡಚಣೆ ಆಗಿ ಬಿಡುತ್ತದೆ ಎನ್ನುವ ಕಾರಣದಿಂದ, ಹೀಗೊಂದು ಪೂರ್ವ ಸಿದ್ಧತೆಯ ವರದಿ, ಗುಪ್ತವಾಗಿದ್ದಿದ್ದು ಎಲ್ಲರ ಕೈ ಸೇರಿ ಬಿಟ್ಟಿದೆ. ಅದರಲ್ಲಿ ರಾಣಿಯವರು ಎಲ್ಲಿ ಕೊನೆ ಉಸಿರು ಎಳೆಯುತ್ತಾರೆ, ಅಲ್ಲಿಂದ ಹಿಡಿದು ಅವರ ಸಂಸ್ಕಾರ ಯಾವ ನೆಲದಲ್ಲಿ ಆಗಬೇಕು ಎನ್ನುವ ಸಂಪೂರ್ಣ ವಿವರಣೆ ದಾಖಲಾಗಿದೆ. ಅಲ್ಲದೆ ಅವರು ಪ್ರಾಣ ಬಿಟ್ಟ ದಿನದಿಂದ 10 ದಿನಗಳವರೆಗೂ ಅಂತಿಮ ದರ್ಶನದ ಕಾರ್ಯಕ್ರಮವನ್ನು ಪ್ಲಾನ್ ಮಾಡಿದ್ದು ಆ ಹತ್ತು ದಿನಗಳನ್ನು ಡಿ-ಡೇ ಎಂದು ಹೆಸರಿಸಲಾಗಿದೆ. ಅಲ್ಲದೆ ಡಿ-ಡೇಯಲ್ಲಿ ಪ್ರತಿ ದಿನ ಎಲಿಜಬೆತ್ ಮಗ ಚಾರ್ಲ್ಸ್ ಎಲ್ಲೆಲ್ಲಿ ಇರಬೇಕು ಎನ್ನುವುದ ಸೇರಿ ದೇಶದ ಪ್ರತಿನಿಧಿಗಳ ಕೆಲಸಗಳೇನು ಅನ್ನುವುದನ್ನು ದಾಖಲಿಸಲಾಗಿದೆ. ಅಲ್ಲದೆ ಅಂತಿಮ ದರ್ಶನಕ್ಕೆ ಯಾರು ಯಾರು ಬರಬೇಕು ಎನ್ನುವ ಸಂಪೂರ್ಣ ಚಲನೆಯನ್ನು ಸಿದ್ಧ ಪಡಿಸಿದ್ದಾರೆ. ಆ ಹತ್ತು ದಿನಗಳೂ ಏನೆಲ್ಲಾ ಆಗುತ್ತೆ ಹೇಳ್ತೀವಿ ನೋಡಿ.

ಬ್ರಿಟನ್ ಪ್ರಧಾನಿಯಿಂದಲೇ ಸಾವಿನ ಸುದ್ದಿ ತಿಳಿಯಬೇಕು
ಮಂತ್ರಿ ಮಂಡಲಕ್ಕೆ ಇ-ಮೇಲ್ ಮುಖಾಂತರ ಮಾಹಿತಿ

ಸುದ್ದಿ ತಿಳಿದ ಕ್ಷಣದಿಂದ ದೇಶದ ಬಾವುಟ ಕೆಳಗಿಳಸಬೇಕು

ರಾಣಿಯವರು ಕೊನೆ ಉಸಿರು ಎಳೆದ ಬಳಿಕ, ಆ ಸುದ್ದಿಯನ್ನು ಮೊದಲು ಪ್ರಧಾನಿ ಬಂದು ತಿಳಿಸಬೇಕು. ಅಲ್ಲಿಯವರೆಗೂ ಯಾವ ಮಂತ್ರಿ ಮಂಡಲವಾಗಲಿ ಅದರ ಬಗ್ಗೆ ಮಾತನಾಡುವಂತಿಲ್ಲ. ಸಾವಿನ ಸುದ್ದಿಯನ್ನು ಅಂದಿನ ಪ್ರಧಾನಿ ಘೋಷಿಸಿವವರೆಗೂ ಮಾಧ್ಯಮದವರಾಗಲೀ, ಮಂತ್ರಿಗಳಾಗಲೀ ಮಾತನಾಡುವಂತಿಲ್ಲ. ಪ್ರಧಾನಿ ಈ ಸುದ್ದಿಯನ್ನು ತಿಳಿಸಿದ ಹತ್ತು ನಿಮಿಷದಲ್ಲಿ ದೇಶದಲ್ಲಿರುವ ಎಲ್ಲ ಬಾವುಟಗಳೂ ಅರ್ಧಕ್ಕೆ ಕೆಳಗಿಳಿಯಬೇಕು. ಜೊತೆಗೆ ಯುನೈಟೆಡ್ ಕಿಂಗ್‌ಡಮ್‌ ಎಲ್ಲ ಮಂತ್ರಿಗಳಿಗೂ ಇ-ಮೇಲ್ ಮೂಲಕ ಸುದ್ದಿಯನ್ನು ಕಳುಹಿಸುವುದಾಗಿ ನಿರ್ಧರಿಸಿದ್ದಾರೆ. ಆ ಇ-ಮೇಲೆ ಸಹ ಈಗಾಗಲೇ ಬರೆದಾಗಿದೆ. ಅದು ಹೀಗಿದೆ ನೋಡಿ.

ಆತ್ಮೀಯ ಸಹೋದ್ಯೋಗಿಗಳೇ,
ಹರ್ ಮೆಜೆಸ್ಟಿ ದಿ ಕ್ವೀನ್ ಸಾವಿನ ಬಗ್ಗೆ ನಿಮಗೆ ತಿಳಿಸಲು ನಾನು ದುಃಖದಿಂದ ಬರೆಯುತ್ತೇನೆ.- ಕ್ಯಾಬಿನೆಟ್ ಕಾರ್ಯದರ್ಶಿ, ಯುನೈಟೆಡ್ ಕಿಂಗ್​​ಡಮ್

ಇದಾದ ಬೆನ್ನಲ್ಲೇ ಸರ್ಕಾರಿ ಚಾಲಿತ ಎಲ್ಲ ಆನ್ ಲೈನ್ ಸೈಟ್ಸ್ ಗಳು ಹಾಗೂ ಸೋಷಿಯಲ್ ಮೀಡಿಯಾ ಸೈಟ್ಸ್​ಗಳು, ಕಪ್ಪು ಬಣ್ಣಕ್ಕೆ ಬದಲಿಸಬೇಕು. ರಕ್ಷಣಾ ಸಚಿವ ಕೂಡಲೇ ಎಚ್ಚೆತ್ತು ಆರ್ಮಿ ಹಾಗೂ ಬಾಂಬ್ ಸ್ಕ್ವಾ ಡ್ ಜೊತೆ ದೇಶದ ರಕ್ಷಣಾ ಚಟುವಟಿಕೆಗೆ ಭಾಗಿ ಆದರೆ, ಫಾರಿನ್ ಮಿನಿಸ್ಟರ್ ಯಾವ ದೇಶದಿಂದ, ಯಾರು, ಹೇಗೆ ಪ್ರಯಣಿಸುತ್ತಾರೆ ಹಾಗೂ ಅವರಿಗೆ ಸಕಲ ಸೌಕರ್ಯಕ್ಕೆ ಅನುವು ಮಾಡಿಕೊಡಬೇಕು. ಇದಾದ ಬಳಿಕ ಪ್ರಧಾನ ಮಂತ್ರಿ ಸಂಜೆ 6 ಗಂಟೆಯ ಹೊತ್ತಿಗೆ ಹೊಸ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಜೊತೆ ಮಾಧ್ಯಮದ ಮುಂದೆ ಪ್ರತ್ಯಕ್ಷರಾಗುತ್ತಾರೆ. ಆ ದಿನದ ಅಂತ್ಯದಲ್ಲಿ ಲಂಡನ್ ಹೃದಯ ಭಾಗದಲ್ಲಿ ಸೆಂಟ್ ಪೌಲ್ ಚರ್ಚ್ ನಲ್ಲಿ ನೆನಪಿನ ಕಾರ್ಯಕ್ರಮದಲ್ಲಿ ಕೆಲವು ಗಣ್ಯರು ಭಾಗಿಯಾಗುತ್ತಾರೆ. ಅಲ್ಲಿಂದ ಡಿ-ಡೇ 1 ಪ್ರಾರಂಭವಾಗುತ್ತದೆ.

ಡಿ-ಡೇ 1: ಮಂತ್ರಿಗಳು ದಂಪತಿ ಸಮೇತರಾಗಿ ದರ್ಶನ ಪಡೆಯುವುದು
ಡಿ-ಡೇ 2: ರಾಣಿಯ ಶವಪೆಟ್ಟಿಗೆ ಬಂಕಿಂಗ್‌ಹ್ಯಾಮ್‌ ಅರಮನೆಗೆ ತರಲಾಗುವುದು

ರಾಣಿಯ ಸಾವಿನ ಮರುದಿನ ಬೆಳಿಗ್ಗೆ 10 ಗಂಟೆಗೆ , ಸೇಂಟ್ ಜೇಮ್ಸ್ ಅರಮನೆಯಲ್ಲಿ ಸೇರಿಕೊಳ್ಳುವ ಕೌನ್ಸಿಲ್​ಗಳು ರಾಜ ಚಾರ್ಲ್ಸ್​ರನ್ನು ಹೊಸ ಸಾರ್ವಭೌಮ ಎಂದು ಘೋಷಿಸಲಾಗುತ್ತದೆ. ಇದಾದ ಬಳಿಕ ಮಂತ್ರಿಗಳು ತಮ್ಮ ದಂಪತಿಯ ಜೊತೆ ಸಂತಾಪ ಸೂಚಿಸುವ ವಸ್ತ್ರವನ್ನು ಧರಿಸಿ, ಮಹಾರಾಣಿಯವರ ಅಂತಿಮ ದರ್ಶನ ಪಡೆಯಬೇಕಾಗುತ್ತದೆ. ಇದಾದ ಬಳಿಕ ಪ್ರಿನ್ಸ್ ಚಾರ್ಲ್ಸ್​ಗೆ ಸಂತಾಪ ಹೇಳುವ ಸಭೆ ನಡೆಸಿ, ಮರುದಿನ ಅಂದ್ರೆ ಡಿ-ಡೇ 2 ರಾಣಿಯ ಶವಪೆಟ್ಟಿಗೆಯನ್ನು ಬಂಕಿಂಗ್‌ಹ್ಯಾಮ್‌ ಅರಮನೆಗೆ ತರಲಾಗುವುದು.

ಡಿ-ಡೇ 3: ಪ್ರಿನ್ಸ್ ಚಾರ್ಲ್ಸ್​ ಯುನೈಟೆಡ್ ಕಿಂಗ್‌ಡಮ್‌ ಟೂರ್ ಹೋಗಿರುತ್ತಾರೆ
ಡಿ-ಡೇ 4: ಬಂಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಮೆರವಣಿಗೆಯ ತಾಲೀಮು
ಡಿ-ಡೇ 5 : ಬಂಕಿಂಗ್‌ಹ್ಯಾಮ್‌ ಅರಮನೆಯಿಂದ ವೆಸ್ಟ್ ಮಿನಿಸ್ಟರ್​ಗೆ ಮೆರವಣಿಗೆ

ಡಿ-ಡೇ 3 ಶುರುವಾಗುವುದಕ್ಕೂ ಮುಂಚೆ ಪ್ರಿನ್ಸ್ ಚಾರ್ಲ್ಸ್​ ಯುನೈಟೆಡ್ ಕಿಂಗ್‌ಡಮ್‌ನ ಎಲ್ಲ ನಾಲ್ಕು ದೇಶಕ್ಕೆ ಹೋಗಿ ಅಲ್ಲಿ ಸಂತಾಪ ಸಭೆಯಲ್ಲಿ ಭಾಗಿಯಾಗಿರುತ್ತಾರೆ. ಇತ್ತ ಶವ ಅರಮನೆಯಲ್ಲಿ ಅಂತಿಮ ದರ್ಶನದ ಸಿದ್ಧತೆಗಳು ಶುರುವಾಗಿರುತ್ತದೆ. ಇನ್ನು ಡಿ-ಡೇ 4 ನಲ್ಲಿ ಬಂಕಿಂಗ್‌ಹ್ಯಾಮ್‌ ಅರಮನೆಯ ಆವರಣದಲ್ಲಿ ಶವಪೆಟ್ಟಿಗೆಯ ಮೆರವಣೆಗೆ ಹೇಗಿರುತ್ತದೆ ಅನ್ನೋದನ್ನು ಯೋಧರು ಹಾಗೂ ಮಂತ್ರಿಗಳ ಸಮೇತರಾಗಿ ತಾಲೀಮು ನೆರವೇರಿಸಲಾಗಿರುತ್ತದೆ. ಡಿ-ಡೇ 5 ಬಂಕಿಂಗ್‌ಹ್ಯಾಮ್‌ ಅರಮನೆಯಿಂದ ವೆಸ್ಟ್ ಮಿನಿಸ್ಟರ್​ಗೆ ದೇಹ ಮೆರವಣಿ ಮುಖಾಂತರ ತಂದು ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.

ಡಿ-ಡೇ 6-9: ದಿನದ 23 ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನ
ಡಿ-ಡೇ 10 : ಕಿಂಗ್ ಜಾರ್ಜ್ VI ಸ್ಮಾರಕ ಪ್ರಾರ್ಥನಾ ಮಂದಿರದಲ್ಲಿ ಸಮಾಧಿ

ಇನ್ನು ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಣಿ ಎಲಿಜಬೆತ್ ಅವರ ಅಂತಿಮ ದರ್ಶನ ಪಡೆಯಲು 3 ದಿನಗಳನ್ನು ಕಾಲ ದಿನಕ್ಕೆ 23 ಗಂಟೆಗಳವರೆಗೂ ಅವಕಾಶ ಕಲ್ಪಿಸಲಾಗಿದೆ. ಡಿ-ಡೇ 10 ರಂದು ತಮ್ಮ ತಂದೆ ಜಾರ್ಜ್ 4 ರವರ ಸ್ಮಾರಕ ಪ್ರಾರ್ಥನಾ ಮಂದಿರದಲ್ಲೆ, ರಾಣಿಯವರನ್ನು ಸಮಾಧಿ ಮಾಡಲಾಗುವುದು ಎನ್ನುವುದು ಸದ್ಯಕ್ಕೆ ಇರುವ ಪ್ಲಾನ್.

ಮಹಾರಾಣಿಯವರಿಗೆ, ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ, ಅವರ ಸೇವೆಗೆ ಸಂಪೂರ್ಣ ಯುನೈಟೆಡ್ ಕಿಂಗ್‌ಡಮ್‌ ಮೆಚ್ಚಿದ್ದಾಗಿದೆ. ಈಗಾಗಲೇ ಅವರ ಮದುವೆ ಸಮಾರಂಭದಲ್ಲಿ ಹಾಗೂ ಭಾರತಕ್ಕೆ ರಾಣಿ ಬಂದಾಗ ಹಲವು ತೊಂದರೆಗಳಾಗಿತ್ತು. ಇನ್ನು ಪ್ರಿನ್ಸ್ ಚಾರ್ಲ್ಸ್ ವಿಧಿವಶರಾದಾಗ, ಕೊರೊನಾ ಕಾರಣದಿಂದ ಕಡಿಮೆ ಜನರ ಸಮ್ಮುಖದಲ್ಲಿ ಮುಗಿಸಿದ್ದರು. ಆದರೆ ರಾಣಿಯವರ ಅಂತಿಮ ಸಂಸ್ಕಾರ ಅಷ್ಟು ಸುಲಭವಾಗಿರುವುದಿಲ್ಲ. ಈ ಕಾರಣ, ಮುಂಚಿತವಾಗಿಯೇ ಹೀಗೊಂದು ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಇಂದಿಗೂ ಪ್ರತಿ ನಿರ್ಧಾರವನ್ನು ಪ್ರಧಾನಿಯೊಂದಿಗೆ ಚರ್ಚಿಸುವ ಕ್ವೀನ್ ಎಲಿಜಬೆತ್ ಈ ವಿಷಯವನ್ನು ಒಪ್ಪಿ, ಎಲ್ಲದಕ್ಕೂ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈಗ ಸೋರಿಕೆ ಆಗಿರುವ ಡಾಕ್ಯೂಮೆಂಟ್ ಆಪರೇಷನ್ ಲಂಡನ್ ಬ್ರಿಡ್ಜ್ ಬಗ್ಗೆ ಯಾವ ಮಂತ್ರಿಗಳು ಸಹ ಕಮೆಂಟ್ ಮಾಡುತ್ತಿಲ್ಲ. ಕೊನೆಗೆ ಇದು ಸತ್ಯವೋ, ವದಂತಿಯೋ ಅನ್ನೋ ಪ್ರಶ್ನೆ ಉಳಿಯುವಂತಾಗಿದೆ.

ಬ್ರಿಟನ್ ಕ್ವೀನ್ ಎಲಿಜಬೇತ್ ಇನ್ನು ಆರೋಗ್ಯವಾಗಿದ್ದಾರೆ, ಎಲ್ಲರನ್ನು ಎಂದಿನಂತೆ ನಗುನಗುತ್ತಾ, ಸಂತೋಷದಿಂದ ಮಾತನಾಡಿಸಿ, ವ್ಯವಹರಿಸುತ್ತಾರೆ.. ಆದರೆ ಅವರಿಗೂ ಮೃತ್ಯೂ ಅನ್ನೋದು ಇದ್ದೆ ಇದೆ. ಲಂಡನ್ ಬ್ರಿಡ್ಜ್ ಇಸ್ ಫಾಲಿಂಗ್ ಡೌನ್ ಎನ್ನುವಂತೆ ಈ ಪ್ಲಾನ್ ಸಿದ್ಧವಾಗಿದೆ,. ಆದರೆ ಅವರು ತಮ್ಮ ಸಾವಿನಲ್ಲೂ ಯಾರಿಗೂ ತೊಂದರೆ ಆಗಬಾರದು ಎಂದು ಯೋಚಿಸಿ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ ಅಚ್ಚರಿ ಪಡಬೇಕಾಗಿಲ್ಲ

Source: newsfirstlive.com Source link