ಭಾರತ-ಇಂಗ್ಲೆಂಡ್​​ 4ನೇ ಟೆಸ್ಟ್​​ ಪಂದ್ಯ: ಟೀಂ ಇಂಡಿಯಾ ಭರ್ಜರಿ ಗೆಲುವು

ಭಾರತ-ಇಂಗ್ಲೆಂಡ್​​ 4ನೇ ಟೆಸ್ಟ್​​ ಪಂದ್ಯ: ಟೀಂ ಇಂಡಿಯಾ ಭರ್ಜರಿ ಗೆಲುವು

ಭಾರತ-ಇಂಗ್ಲೆಂಡ್​​ ನಡುವಿನ 4ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಭಾರತದ ಬೌಲರ್​​ಗಳ ದಾಳಿಗೆ ಆಂಗ್ಲರು ಮುಗ್ಗರಿಸಿದ್ದಾರೆ.

157 ರನ್​ಗಳ ಅಂತರದಿಂದ ಟೀಮ್​ ಇಂಡಿಯಾಗೆ ಗೆಲುವು ಲಭ್ಯವಾಗಿದೆ. 210 ರನ್​ಗಳಿಗೆ ಆತಿಥೇಯ ಇಂಗ್ಲೆಂಡ್ ಆಲ್​ಔಟ್ ಆಗಿದೆ. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 191 ರನ್ ಗಳಿಸಿದ್ರೆ ಎರಡನೇ ಇನ್ನಿಂಗ್ಸ್​ನಲ್ಲಿ 466 ರನ್ ದಾಖಲಿಸಿತ್ತು. ಇನ್ನು ಇಂಗ್ಲೆಂಡ ಮೊದಲ ಇನ್ನಿಂಗ್ಸ್​ನಲ್ಲಿ 290 ರನ್​ ಗಳಿಸಿದ್ರೆ ಎರಡನೇ ಇನ್ನಿಂಗ್ಸ್​ನಲ್ಲಿ 210 ರನ್ ಗಳಿಸಿದೆ. ಸದ್ಯ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಸಾಧಿಸಿದೆ.

ಉಮೇಶ್​​ ಯಾದವ್​ 3, ಜಡೇಜಾಗೆ 2 ವಿಕೆಟ್ ಲಭ್ಯವಾದ್ರೆ ಜಸ್​ಪ್ರಿತ್​​ ಬೂಮ್ರಾ, ಠಾಕೂರ್​​ಗೆ ತಲಾ 2 ವಿಕೆಟ್​ ಸಿಕ್ಕಿವೆ. 4ನೇ ಟೆಸ್ಟ್​​​​ನಲ್ಲಿ ಇಂಗ್ಲೆಂಡ್ ಗೆಲುವಿಗೆ 368 ರನ್ ಬೇಕಿತ್ತು.

Source: newsfirstlive.com Source link