‘ಮುಂಗಾರು ಮಳೆ’ ತಂಡದಲ್ಲಿ ಸಂಭ್ರಮ.. ಗಣೇಶ್, ಭಟ್​ರ ‘ಮಳೆ ಹನಿ ಲೀಲೆ’ ಹೇಗಿತ್ತು ಗೊತ್ತಾ..? 

‘ಮುಂಗಾರು ಮಳೆ’ ತಂಡದಲ್ಲಿ ಸಂಭ್ರಮ.. ಗಣೇಶ್, ಭಟ್​ರ ‘ಮಳೆ ಹನಿ ಲೀಲೆ’ ಹೇಗಿತ್ತು ಗೊತ್ತಾ..? 

ಗಣೇಶ್, ಯೋಗರಾಜ್ ಭಟ್, ಕೃಷ್ಣ, ಪ್ರೀತಂ ಗುಬ್ಬಿ , ಜಯಂತ್ ಕಾಯ್ಕಿಣಿ ಈ ಎಲ್ಲರೂ ಒಟ್ಟಿಗೆ ಸೇರಿದ್ದಾರೆ.. ಮತ್ತೊಮ್ಮೆ ಮಗದೊಮ್ಮೆ ಮುಂಗಾರು ಮಳೆ ಮಾಡೋ ಆಸೆಯನ್ನ ವ್ಯಕ್ತ ಪಡಿಸಿದ್ದಾರೆ.

ಅದೆಲ್ಲಿ? ಅದ್ಯಾಕೆ?
ಮುಂಗಾರು ಮಳೆ.. ಸಿರಿ ಸ್ಯಾಂಡಲ್​ವುಡ್​​​ಗೆ ಸಂಪಾದ ತಂಪಾದ ಗೆಲುವಿನ ಮಳೆ ಇದಂಗೆ.. ಇವತ್ತಿಗೂ ಈ ಸಿನಿಮಾವನ್ನ ನೆನೆಸಿಕೊಂಡ್ರೆ ಪ್ರೇಕ್ಷಕ ಕುಲ ಚಿಟಪಟ ನೆನಪುಗಳ ವರ್ಷಧಾರೆಯಲ್ಲಿ ನೆನೆ-ನೆನೆದು ತಂಪಾಗುತೆ.. ಇಂತಹ ಜನ ಮನ ಮೆಚ್ಚಿದ ಸಿನಿಮಾಕ್ಕೆ 15ನೇ ವಸಂತ.. ನೆನ್ನೆ ಭಾನುವಾರ ರಾತ್ರಿ ಇಡೀ ಮುಂಗಾರು ಮಳೆ ಚಿತ್ರತಂಡದಲ್ಲಿ ಮನೆ ಮಾಡಿತ್ತು ಸಂತಸ..

blank

ಮಣಿ , ರಂಗ ಎಸ್​.ಎಸ್​.ಎಲ್​.ಸಿ ಸಿನಿಮಾ ಮುಗಿಸಿ ಮುಂಗಾರು ಮಳೆಯಲ್ಲಿ ನೆಂದು ಬಿಟ್ಟಿದ್ರು ಯೋಗರಾಜ್ ಭಟ್.. ಪ್ರೀತಂ ಗುಬ್ಬಿ ಬರೆದ ಪ್ರೇಮ ಕಥೆಗೆ ಭಟ್ಟರ ಕಲ್ಪನೆಯಲ್ಲಿ ಕಾಮಿಡಿ ಟೈಮ್ ಗಣೇಶ್ ಗೋಲ್ಡನ್ ಸ್ಟಾರ್ ಆಗಿ ಬಿಟ್ರು. ಬಾಂಬೆಯಲ್ಲಿ ಸಿರಿಯಲ್ ಲೋಕದಲ್ಲಿದ್ದ ಪೂಜಾ ಗಾಂಧಿ ರಾತ್ರೋ ರಾತ್ರಿ ಕರ್ನಾಟಕದಲ್ಲಿ ಮನೆ ಮಾಡಿಬಿಟ್ರು. ಮುಂಗಾರು ಮಳೆಯ ಎಲ್ಲಾ ಕಲಾವಿದರು ಕನ್ನಡಿಗರ ಮನೆ ಮಾತಾದ್ರು.. ಸಂಗೀತ ನಿರ್ದೇಶಕ ಮನೋಮೂರ್ತಿ, ಬರಹಗಾರ ಜಯಂತ್ ಕಾಯ್ಕಿಣಿ , ಕ್ಯಾಮೆರಾ ಮ್ಯಾನ್ ಕೃಷ್ಣ ಎಲ್ಲರೂ ರಾತ್ರೋ ರಾತ್ರಿ ಗಾಂಧಿನಗರದಲ್ಲಿ ಸ್ಟಾರ್ ಗದ್ದುಗೆ ಏರಿ ಕುಂತರು.. ನೋಡ ನೋಡುತ್ತಿದಂಗೆ ಮುಂಗಾರು ಮಳೆ ಇಡೀ ಕರ್ನಾಟಕ ಪ್ರೇಕ್ಷಕ ಸಾಮ್ರಾಜ್ಯವನ್ನೇ ರಂಜನೆಯ ಮಳೆಯಲ್ಲಿ ತೋಯಿಸ್ತಿ ಬಿಡ್ತು..

blank

ಕನ್ನಡ ಸಿನಿಮಾ ರಂಗ ಇತಿಹಾಸ ಮುಂಗಾರು ಮಳೆ ಸಿನಿಮಾಕ್ಕೆ ಇನೇನು 15 ವರ್ಷ ತುಂಬಿ ಬಿಡುತ್ತೆ.. ಈ ರೈಟ್​ ಟೈಮ್​​ನಲ್ಲೇ ಇಡೀ ಮುಂಗಾರು ಮಳೆ ಟೀಮ್ ಒಟ್ಟಿಗೆ ಸೇರಿ ಸಂಭ್ರಮ ಪಟ್ಟಿದೆ.. ಈ ಮೊದಲು ಮುಂಗಾರು ಮಳೆ ಸಿನಿಮಾದ ಪ್ರತಿ ಆ್ಯನಿವರ್ಸರಿಗೆ ಆಗಾಗ ಚಿತ್ರತಂಡ ಸೇರಿ ಸಂಭ್ರಮಿಸಿದೆ. ಆದ್ರೆ ಈ ಬಾರಿಯ ವಿಶೇಷವೆನಂದ್ರೆ ಸಿನಿಮಾಕ್ಕಾಗಿ ದುಡಿದ ಪ್ರಮುಖರು ಸೇರಿ ಸೆಲೆಬ್ರೇಟ್ ಮಾಡಿರೋದು.. ಸಿನಿಮಾದ ಪ್ರತಿ ಸೀನ್ ಅನ್ನ ಜನ ಹೇಗೆ ಸ್ವೀಕರಿಸಿದ್ರು ಸೀನುಗಳು ಹೇಗೆ ಮೂಡಿ ಬಂದಿದ್ವು ಅನ್ನೋದನ್ನ ಮೆಲುಕು ಹಾಕಿಕೊಂಡಿದೆ ಚಿತ್ರತಂಡ.

blank

ಗೋಲ್ಡನ್ ಸ್ಟಾರ್ ಗಣೇಶ್, ಯೋಗರಾಜ್ ಭಟ್, ಕ್ಯಾಮೆರಾ ಮ್ಯಾನ್ ಕೃಷ್ಣ , ಕಥೆ ಬರೆದಿದ್ದ ನಿರ್ದೇಶಕ ಪ್ರೀತಂ ಗುಬ್ಬಿ, ಸಾಹಿತಿ ಜಯಂತ್ ಕಾಯ್ಕಿಣಿ ಸೇರಿದಂತೆ ಅನೇಕರು ಸೇರ್ಕೊಂಡು ಸಂಭ್ರಮಿಸಿದ್ದಾರೆ. ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರ ಸಂಭ್ರಮ ಸೋಶಿಯಲ್ ಮೀಡಿಯಾ ಸಾಹಿತ್ಯ ಇಂತಿದೆ.

ಈ ” ಮುಂಗಾರು ಮಳೆ “ಯಲ್ಲಿ
ಇಷ್ಟೊಂದು ಬೆಂಕಿ ಇದೆ ಅಂತ
ಗೊತ್ತಿರಲಿಲ್ಲ ಕಣೋ ದೇವದಾಸ……🐇
ಮುಂಗಾರು ಮಳೆಯೆ ..
ಏನು ನಿನ್ನ ಹನಿಗಳ ಲೀಲೆ ! !
ಗಣೇಶ್ , ನಟ

 

ಸ್ನೇಹ ಅಮರ
ನೆನಪು ಮಧುರ
ರಾತ್ರಿ ತಂಡದ ಜೊತೆ “ಹನಿ ನೀರಾವರಿ”
ನೆನಪುಗಳಾದವು ಕಂಠಪೂರ್ತಿ
ಕನಸುಗಳಾದವು ತುಂಬಾ ಜಾಸ್ತಿ
ಜೈ ಮುಂಗಾರು ಮಳೆ
ಯೋಗರಾಜ್ ಭಟ್ , ನಿರ್ದೇಶಕ

blank

ಮುಂಗಾರು ಮಳೆ ತಂಡ ಒಟ್ಟಿಗೆ ಸೇರಿರೋ ಟೈಮ್​​ನಲ್ಲಿ ಚಿತ್ರತಂಡ ಜೊತೆಗೆ ಜೀ ಕನ್ನಡದ ಬಿಜಿನೇಸ್ ಹೆಡ್ ರಾಘವೇಂದ್ರ ಹುಣಸೂರ್ ಕೂಡ ಇದ್ದರು. ಈ ಸಂದರ್ಭದಲ್ಲಿ ಇಡೀ ಮುಂಗಾರು ಮಳೆ ತಂಡಕ್ಕೆ ‘‘ನೀವೆಲ್ಲ ಸೇರಿ ಮತ್ತೆ ಏನಾದ್ರು ಸಿನಿಮಾ ಪ್ರಯತ್ನ ಮಾಡಿ’’ ನಿಮ್ಮ ಜೊತೆ ನಾನು ಇರ್ತಿನಿ ಎಂದಿದ್ದಾರೆ.. ಒಟ್ಟಿನಲ್ಲಿ ಮುಂಗಾರು ಮಳೆ ತಂಡದ ಗೆಟ್ಟು ಗೆದರ್ ಪಾರ್ಟಿ ಚಿತ್ರಪ್ರೇಮಿಗಳ ಮನದಲ್ಲಿ ನೆನಪಿನ ಮುಂಗಾರು ಮಳೆಯಲ್ಲಿ ನೆನೆಯುವಂತೆ ಮಾಡಿದೆ.

Source: newsfirstlive.com Source link