ಬಾಲಿವುಡ್​ ಪ್ರೊಡ್ಯೂಸರ್​ಗೂ ಕಾಲ್​ಶೀಟ್ ಕೊಡಲಿಲ್ವಂತೆ ಯಶ್.. ನಿಗೂಢವಾಯ್ತು ರಾಕಿಭಾಯ್ ನಡೆ

ಬಾಲಿವುಡ್​ ಪ್ರೊಡ್ಯೂಸರ್​ಗೂ ಕಾಲ್​ಶೀಟ್ ಕೊಡಲಿಲ್ವಂತೆ ಯಶ್.. ನಿಗೂಢವಾಯ್ತು ರಾಕಿಭಾಯ್ ನಡೆ

ಯಶ್ ಅನ್ನೋ ಬ್ರಾಂಡ್ ಹಿಂದೆ ಸ್ಯಾಂಡಲ್​ವುಡ್​​ನಿಂದ ಹಿಡಿದು ಬಾಲಿವುಡ್​​​​​ ಗ್ರ್ಯಾಂಡ್​​​​​​ ಪ್ರೊಡ್ಯೂಸರ್ಸ್ ಹಿಂದೆ ಬಿದ್ದಿದ್ದಾರೆ.. ಆದ್ರೆ ರಾಕಿ ಭಾಯ್​​​​​​ ನಡೆ ಮಾತ್ರ ನಿಗೂಢ.. ಬಾಲಿವುಡ್​​​​ನ ಬಿಗ್ ಪ್ರೊಡ್ಯೂಸರ್ ಯಶ್ ಮನೆ ತನಕ ಬಂದು ಖಾಲಿ ಕೈಯಲ್ಲಿ ವಾಪಸ್ ಹೋಗಿದ್ದಾರಂತೆ.. ಹಾಗಾದ್ರೆ ಯಾರು ಬಾಲಿವುಡ್​​ ಲೋಕದ ಆ ಬಿಗ್ ಪ್ರೊಡ್ಯೂಸರ್​​..? ಅಷ್ಟಕ್ಕೂ ಯಶ್ ಗುರಿಯೇನು..? ಬನ್ನಿ ಪತ್ತಿ ಹಚ್ಚೋಣ..

ಓಡೋ ಕುದುರೆಯ ಹಿಂದೆ ಹೆಂಗ್ ಜನ ಬಾಜಿ ಕಟ್ಟಿ ಗೆಲ್ಲೋ ಕನಸು ಕಾಣ್ತಾರೋ ಹಂಗೆ ಈ ಕನಸಿನ ಸಿನಿಮಾ ಲೋಕದಲ್ಲೂ ಗೆಲ್ಲೋ ಹೀರೋ ಹಿಂದೆನೇ ಸಿನಿಮಾ ಮಂದಿ ಬರೋದು, ಆ ಹೀರೋಗಾಗಿ ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ಮಾಡೋದು..
ಕೆಜಿಎಫ್ ಅನ್ನೋ ಬಂಗಾರದ ಸಿನಿಮಾವನ್ನ ಕಲ್ಪಸಿಕೊಂಡ ಡೈರೆಕ್ಟರ್ ಪ್ರಶಾಂತ್ ನೀಲ್ ಮುಂದಿನ್ ಸಿನಿಮಾ ಅದ್ರ ಮುಂದಿನ ಸಿನಿಮಾ ಕೆಲಸದಲ್ಲಿ ಮಗ್ನರಾಗಿದ್ದಾರೆ.. ಕೆಜಿಎಫ್ ಸಿನಿಮಾವನ್ನ ನಿರ್ಮಾಣ ಮಾಡಿದ ಹೊಂಬಾಳೆ ಫಿಲಂಮ್ಸ್ ಸರ್ತಿಸಾಲಿನಲ್ಲಿ ಸಿನಿಮಾಗಳನ್ನ ಅನೌನ್ಸ್ ಮಾಡ್ತಾ ಹೊಸ ಹೊಸ ಪ್ರತಿಭೆಗಳಿಗೆ ದಾರಿ ದೀಪವಾಗುತ್ತಿದೆ.. ಆದ್ರೆ ಕೆಜಿಎಫ್ ಅನ್ನೋ ಮಹಾನ್ ಸಾಮ್ರಾಜ್ಯದಲ್ಲಿ ಹೀರೋ ಮಿಂಚಿರುವ ರಾಕಿಂಗ್ ಸ್ಟಾರ್ ಯಶ್ ಮಾತ್ರ ತನ್ನ ಮುಂದಿನ ಸಿನಿಮಾ ಯಾವ ಕಡೆ ಮುಂದೇನು ನಡೆ ಅನ್ನೋದನ್ನೇ ನಿಗೂಢವಾಗಿಸಿದ್ದಾರೆ..

blank

 

ಹತ್ತಿರ ಹತ್ತಿರ 5 ವರ್ಷ ಒಂದೇ ಸಿನಿಮಾಕ್ಕೆ ತನ್ನ ತನು-ಮನವನ್ನೇ ಅರ್ಪಿಸಿ ಬಿಟ್ಟಿದ್ದಾರೆ ರಾಕಿಂಗ್ ಸ್ಟಾರ್ ಯಶ್​​.. ಇಷ್ಟೊತ್ತಿಗಾಗಲೇ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆಗಿ ಹಳೆಯದಾಗಿ ಯಶ್ ಅವರ ಹೊಸ ಸಿನಿಮಾದ ಬಗ್ಗೆ ಕುತೂಹಲ ಎದ್ದಿರಬೇಕಿತ್ತು.. ಆದ್ರೆ ಕೊರೊನಾ ಅಯೋಮಯದಿಂದ ಮುಂದಿನ ವರ್ಷ ಏಪ್ರಿಲ್ 14ರ ತನಕ ಕೆಜಿಎಫ್ ಚಾಪ್ಟರ್ 2 ಬಗ್ಗೆ ನಿರೀಕ್ಷೆಯನ್ನ ಇಟ್ಟುಕೊಂಡು ಕೂರೋ ಹಾಗೆ ಆಗಿದೆ.. ಸಮಸ್ತ ಇಂಡಿಯನ್ ಸಿನಿ ಪ್ರೇಕ್ಷಕರು ನಿರೀಕ್ಷೆ ಒಂದು ಮಟ್ಟಕ್ಕಾದ್ರೆ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ನಿರೀಕ್ಷೆ ಮತ್ತೊಂದು ಘಟ್ಟ.. ಆದ್ರೆ ಯಶ್​​​ಗೆ ಕೆಜಿಎಫ್ ಚಾಪ್ಟರ್ 2 ಇದೆಲ್ಲದಕ್ಕೂ ಮೀರಿದ್ದು.. ಎರಡನೇ ಕೆಜಿಎಫ್​ ಬಿಡುಗಡೆಯ ನಿರೀಕ್ಷೆ ಹಾಗೂ ಜೀವನದ ಹೊಸ ಪರೀಕ್ಷೆಗೆ ಯಶ್ ಎದುರು ನೋಡ್ತಿದ್ದಾರೆ..

ಇನ್ನೊಂದು 7 ತಿಂಗಳು ಬೇಕು ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದಕ್ಕೆ.. ಈ ಗ್ಯಾಪ್​​ನಲ್ಲಿ ಹೊಸ ಸಿನಿಮಾವನ್ನ ಒಪ್ಪಿಕೊಂಡು ಕೆಲಸ ಮುಗಿಸಿಬಿಡಬಹುದು ಯಶ್​.. ಆದ್ರೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗೋ ತನಕ ಮುಂದಿನ ಸಿನಿಮಾದ ಮಾತುಕಥೆಯೇ ಬೇಡ ಎನ್ನುತ್ತಿದ್ದಾರಂತೆ ರಾಕಿ ಭಾಯ್​.. ಸ್ಯಾಂಡಲ್​ವುಡ್ ಜೊತೆಗೆ ಟಾಲಿವುಡ್ ಹಾಗೂ ಬಾಲಿವುಡ್​ನ ಬಿಗ್ ಪ್ರೊಡ್ಯೂಸರ್ ಒಬ್ಬರು ಯಶ್ ಮನೆಯ ತನಕ ಬಂದು.. ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ವಾಪಸ್ ಹೋಗಿದ್ದಾರಂತೆ.. ಹಾಗಾದ್ರೆ ಯಾರು ಆ ನಿರ್ಮಾಪಕ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..

ಬಿಟೌನ್ ಕರಣ್ ಜೋಹರ್ ಆಫರ್ ತಿರಸ್ಕರಿಸಿದ್ರಾ ಯಶ್..?
ಯಾರಿಗೂ ಸಿಕ್ತಿಲ್ಲವೇಕೆ ರಾಕಿಂಗ್ ಸ್ಟಾರ್ ಕಾಲ್ ಶೀಟ್..?

ಸ್ಯಾಂಡಲ್​ವುಡ್​ ಬಿಗ್ ಬಿಗ್ ಪ್ರೊಡ್ಯೂಸರ್ಸ್ ಪಕ್ಕದ ಟಾಲಿವುಡ್​​ ನ ದಿಲ್ ರಾಜು, ಮೈತ್ರಿ ಮೂವಿ ಮೇಕರ್ಸ್​​, ಗೀತಾ ಆರ್ಟ್ ಮುಂತಾದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳು ಯಶ್ ಹಿಂದೆ ಬಿದ್ರು ಪ್ರಯೋಜನವಾಗಿಲ್ಲ.. ಕರಣ್ ಜೋಹರ್; ಬಾಲಿವುಡ್ ಲೋಕದಲ್ಲಿ ಲಕ್ಕಿ ಪ್ರೊಡ್ಯೂಸರ್​​.. ಇವ್ರ ಧರ್ಮ ಪ್ರೊಡಕ್ಷನ್​​ನಲ್ಲೇ ನಮ್ಮ ಮಕ್ಕಳನ್ನ ಲಾಂಚ್ ಮಾಡಿಸಬೇಕು ಅಂತ ಅದೆಷ್ಟೋ ಸ್ಟಾರ್ಸ್ ಯೋಚಿಸುವುದುಂಟು.. ಬಿಟೌನ್ ಲೋಕದ ಸ್ಟಾರ್ ನಟ-ನಟಿಯರೆಲ್ಲ ಇದೇ ಪ್ರೊಡಕ್ಷನ್ ಹೌಸ್​​ನಲ್ಲಿ ಕೆಲಸ ಮಾಡಬೇಕು ಅಂತ ಕನಸು ಕಾಣೋದು ಉಂಟು.. ಇಂತಹ ನಿರ್ಮಾಪಕ ಕರಣ್ ಜೋಹಾರ್ ಯಶ್ ಅವರಿಗೆ ದೊಡ್ಡ ಮಟ್ಟಕ್ಕೆ ಅಡ್ವಾನ್ಸ್ ಕೊಟ್ಟು ‘‘ಯಶ್ ಜೀ ಆಯಿಯೇ ಹಮಾರೆ ಸಾಥ್’’ ಅಂದ್ರೂ ಯಶ್ ಮಾತ್ರ ನೋ ನೋ ಎಂದು, ನಾನ್ ನಿಮಗೆ ಹೇಳಿ ಕಳುಹಿಸ್ತಿನಿ ಅಡ್ವಾನ್ಸ್ ಏನ್ ಬೇಡ ಅಂದು ಕಳುಹಿಸಿ ಕೊಟ್ಟಿದ್ದಾರೆ..

blank

ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಹೀರೋಗಳು ಕೈಗೆ ಬರೋ ಅಡ್ವಾನ್ಸ್ ಹಣವನ್ನ ಬೇಡ ಅಂತ ಹೇಳೋದಿಲ್ಲ.. ಬಯಸಿ ಬಂದಿರೋ ಲಕ್ಷ್ಮೀನಾ ನಾವೇಕೆ ದೂರ ತಳ್ಳೋದು ಸಿನಿಮಾ ಮಾಡ್ತಿವೋ ಬಿಡ್ತಿವೋ ಗೊತ್ತಿಲ್ಲ ಫಸ್ಟ್ ಅಡ್ವಾನ್ಸ್ ಇಸ್ಕೋ ಬಿಡೋ ಅಂತ ಯೋಚಿಸೋರೆ ಹೆಚ್ಚು.. ಆದ್ರೆ ಯಶ್ ಹಂಗೆ ಮಾಡಿಲ್ವಂತೆ.. ಯಾವುದೇ ನಿರ್ಮಾಪಕರು ಬಂದು ಇರ್ಲಿ ಇಟ್ಕೊಳಿ ಅಡ್ವಾನ್ಸು ಆಮೇಲೆ ಲೆಕ್ಕ ಮಾಡಿದ್ರಾಯ್ತು ಅಂದ್ರೂ ಕೇಳ್ತಿಲ್ವಂತೆ.. ಯಶ್ ಅವರನ್ನ ಹುಡುಕೊಂಡು ಹೋಗೋ ನಿರ್ಮಾಪಕರು ಖಾಲಿ ಕೈಯಲ್ಲಿ ವಾಪಸ್ ಬರ್ತಿದ್ದಾರೆ.. ಕರಣ್ ಜೋಹಾರ್ ಕೂಡ ಯಶ್ ಅವರನ್ನ ಬಲೆಗೆ ಬಿಳಿಸಿಕೊಳ್ಳೋದ್ರಲ್ಲಿ ವಿಫಲವಾಗಿದ್ದಾರೆ..

ಒಟ್ಟಿನಲ್ಲಿ ಯಶ್ ಅವರ ಮುಂದಿನ ಸಿನಿಮಾ ನಡೆ ಸದ್ಯಕ್ಕಂತೂ ನಿಗೂಢ.. ಒಂದು ಗಟ್ಟಿ ಮಾಹಿತಿಯ ಪ್ರಕಾರ ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಡೈರೆಕ್ಷನ್​ನಲ್ಲಿ ತಮ್ಮದೇ ಆಯದ ಪ್ರೊಡಕ್ಷನ್ ಹೌಸ್​​ನಲ್ಲಿ ಯಶ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆ.. ಆದ್ರೆ ಕೆಜಿಎಫ್ ಚಾಫ್ಟರ್ 2 ಬರೋ ತನಕ ಯಾವುದೇ ಗುಟ್ಟನ್ನ ಹೊರ ಬಿಡೋದಿಲ್ಲ ಯಶ್​​..

Source: newsfirstlive.com Source link