ಟೀಮ್​ ಇಂಡಿಯಾ ಟರ್ನಿಂಗ್​ ಪಾಯಿಂಟ್​ ಏನ್​ ಗೊತ್ತಾ..? ವಿರಾಟ್​​ ಹೇಳಿದ್ದಿದು..

ಟೀಮ್​ ಇಂಡಿಯಾ ಟರ್ನಿಂಗ್​ ಪಾಯಿಂಟ್​ ಏನ್​ ಗೊತ್ತಾ..? ವಿರಾಟ್​​ ಹೇಳಿದ್ದಿದು..

ನಾಲ್ಕನೇ ಟೆಸ್ಟ್​​​ನಲ್ಲಿ 157ರನ್​ಗಳಿಂದ ಇಂಗ್ಲೆಂಡ್​ ತಂಡವನ್ನ ಮಣಿಸಿದ ಭಾರತ, ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ನಾಯಕ ವಿರಾಟ್​ ಕೊಹ್ಲಿ, ತಂಡ ನೀಡಿದ ಅದ್ಭುತ ಪ್ರದರ್ಶನಕ್ಕೆ ಈ ಅದ್ಭುತ ಗೆಲುವು ಒಲಿದಿದೆ ಎಂದು ಹೇಳಿದ್ದಾರೆ.

ಫ್ಲಾಟ್​ ಪಿಚ್​​​​​​ನಲ್ಲಿ ಪರಿಸ್ಥಿತಿಗಳು ಭಿನ್ನವಾಗಿದ್ದವು. ಆದರೆ ಜಡೇಜಾದ ಒರಟಾದ ಬೌಲಿಂಗ್ ನಮಗೆ ವಿಶ್ವಾಸವನ್ನ ಹೆಚ್ಚಿಸಿತು. ಅಂತಿಮ ದಿನವನ್ನ ರಿವರ್ಸ್ ಸ್ವಿಂಗ್‌ನೊಂದಿಗೆ ಬೌಲರ್‌ಗಳು ಉತ್ತಮವಾಗಿ ದಾಳಿ ನಡೆಸಿದರು. ಹಾಗಾಗಿ ಇಂಗ್ಲೆಂಡ್ ಅನ್ನು ಆಲೌಟ್​ ಮಾಡುವ ವಿಶ್ವಾಸ ಇತ್ತು ಎಂದು ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಇಂಗ್ಲೆಂಡ್​​ 4ನೇ ಟೆಸ್ಟ್​​ ಪಂದ್ಯ: ಟೀಂ ಇಂಡಿಯಾ ಭರ್ಜರಿ ಗೆಲುವು

ಚೆಂಡು ಹೆಚ್ಚು ಟರ್ನಿಂಗ್​ ಆಗುತ್ತಿದ್ದ ವೇಳೆ, ಬುಮ್ರಾ ನನಗೆ ಚೆಂಡನ್ನು ಕೊಡು ಎಂದು ಕೇಳಿದರು. ಇದೇ ವೇಳೆ ಇಂಗ್ಲೆಂಡ್​​ನ ಪ್ರಮುಖ ಕಳೆದುಕೊಂಡವು. ಹಾಗಾಗಿ ಪಂದ್ಯ ನಮ್ಮ ಕಡೆ ತಿರುಗಿತು. ಇನ್ನು ರೋಹಿತ್ ಶರ್ಮಾರ ಶತಕದ ಇನ್ನಿಂಗ್ಸ್ ಅದ್ಭುತವಾಗಿತ್ತು. ಹಾಗೆಯೇ ಶಾರ್ದೂಲ್​​ ಬ್ಯಾಟಿಂಗ್​-ಬೌಲಿಂಗ್​ನಲ್ಲಿ ಬೊಂಬಾಟ್​ ಆಟವಾಡಿದ್ರು. ಇದು ತಂಡಕ್ಕೆ ಹೆಚ್ಚು ನೆರವಾಯಿತು ಎಂದು ಕೊಹ್ಲಿ ಶ್ಲಾಘಿಸಿದ್ದಾರೆ.

ಇಂಗ್ಲೆಂಡ್​ ಕೂಡ 2ನೇ ಇನ್ನಿಂಗ್ಸ್​​​ನಲ್ಲಿ ಉತ್ತಮ ಆರಂಭಪಡೆದುಕೊಂಡಿತು. ಆರಂಭಿಕರು ಇಬ್ಬರೂ ಕೂಡ ಅರ್ಧಶತಕ ಗಳಿಸಿದರು. ಇದು ಕೊಂಚ ಮಟ್ಟಿಗೆ ಒತ್ತಡವನ್ನ ಸಿಲುಕಿಸಿತು. ಆದರೆ ಸತತ ವಿಕೆಟ್​ ಪಡೆದುಕೊಳ್ಳುತ್ತಿದ್ದಂತೆ ಇಂಗ್ಲೆಂಡ್​​ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

Source: newsfirstlive.com Source link