ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನ್​​ ಉಗ್ರರು

ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನ್​​ ಉಗ್ರರು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಕುಟುಂಬದ ಸದಸ್ಯರ ಎದುರೇ ಗರ್ಭಿಣಿ ಪೊಲೀಸ್​​ ಅಧಿಕಾರಿಯನ್ನು ತಾಲಿಬಾನ್​​ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ತಾಲಿಬಾನ್​​ ಉಗ್ರರು ಗುಂಡೇಟಿಗೆ ಬಲಿಯಾದ 6 ತಿಂಗಳ ಗರ್ಭಿಣಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ನಿಗಾರಾ ಎಂದು ಗುರುತಿಸಲಾಗಿದೆ. ತನ್ನ ಗಂಡ ಮತ್ತು ಮಕ್ಕಳ ಎದುರೇ ಈಕೆಯನ್ನು ಗುಂಡಿಟ್ಟು ಕೊಂದು ಕ್ರೌರ್ಯತೆ ಮೆರೆದಿದ್ದಾರೆ.

ಎಲ್ಲಾ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಮತ್ತು ಬುರ್ಖಾ ಧರಿಸಲೇಬೇಕಿದೆ. ಒಂದು ವೇಳೆ ಹಿಜಾಬ್​​​ ಮತ್ತು ಬುರ್ಖಾ ಧರಿಸದೆ ಹೋದರೆ ತಾಲಿಬಾನ್​​ ಉಗ್ರರು ಮಹಿಳೆಯರಿಗೆ ಕಂಡಲ್ಲಿ ಗುಂಡು ಎಂಬ ಆದೇಶ ಹೊರಡಿಸಿದ್ದಾರೆ.

20 ವರ್ಷಗಳ ನಂತರ ತಾಲಿಬಾನ್​​ ಮತ್ತೆ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಅಮೆರಿಕಾ ತನ್ನ ಸೇನೆಯನ್ನು ಸಂಪೂರ್ಣ ವಾಪಸ್ಸು ಕರೆದುಕೊಂಡ ಬಳಿಕವಂತೂ ಈಗ ತಾಲಿಬಾನ್​​ ಸರ್ಕಾರ ರಚನೆಗೆ ಮುಂದಾಗಿದೆ. ಹೀಗಾಗಿ ತಮ್ಮನ್ನು ಹೊರಗಿಟ್ಟು ಸರ್ಕಾರ ರಚನೆಗೆ ಮುಂದಾದ ತಾಲಿಬಾನ್​​ ಉಗ್ರರ ವಿರುದ್ಧ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಆಫ್ಘನ್ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಮುಂದಾದ ಚೀನಾ.. ಡ್ರ್ಯಾಗನ್​ನ ನರಿ ಬುದ್ಧಿ ಬಗ್ಗೆ ಇಲ್ಲಿದೆ ಡೀಟೇಲ್ಸ್

Source: newsfirstlive.com Source link