ವಿಡಿಯೋ ಕಾಲ್​​ ಮೂಲಕ ಲೈಂಗಿಕ ಸುಖ ನೀಡುವಂತೆ ಪೀಡಿಸುತ್ತಿದ್ದ ಗಂಡ; ಪೊಲೀಸ್​​ ಠಾಣೆ ಮೆಟ್ಟಿಲೇರಿದ ಹೆಂಡತಿ

ವಿಡಿಯೋ ಕಾಲ್​​ ಮೂಲಕ ಲೈಂಗಿಕ ಸುಖ ನೀಡುವಂತೆ ಪೀಡಿಸುತ್ತಿದ್ದ ಗಂಡ; ಪೊಲೀಸ್​​ ಠಾಣೆ ಮೆಟ್ಟಿಲೇರಿದ ಹೆಂಡತಿ

ಅಹಮದಾಬಾದ್​​: ವಿಡಿಯೋ ಕಾಲ್​​ ಮೂಲಕ NRI ಗಂಡನಿಗೆ ಲೈಂಗಿಕ ಸುಖ ನೀಡಲು ನಿರಾಕರಿಸಿದ ಸೊಸೆ ಮೇಲೆ ಇಡೀ ಕುಟುಂಬ ದೌರ್ಜನ್ಯ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗುಜರಾತ್​ ಅಹಮದಾಬಾದ್​​​ ನಗರದ ಗೋಟಾ ಎಂಬಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ 30 ವರ್ಷದ ಮಹಿಳೆಯೊಬ್ಬರು ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಪೊಲೀಸ್​​ ಠಾಣೆಯಲ್ಲಿ ದೂರು​ ದಾಖಲಿಸಿದ್ದಾರೆ. ಈಗ ಮಹಿಳೆ ದೂರಿನ ಆಧಾರದ ಮೇರೆಗೆ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ.

ನನ್ನ ಗಂಡ ಕೆನಡಾದಲ್ಲಿ ಸೆಟಲ್​​ ಆಗಿದ್ದಾರೆ. ಯಾವಾಗಲೋ ಒಮ್ಮೆ ಮನೆಗೆ ಬರುತ್ತಾರೆ. ಆದರೆ, ಪ್ರತಿನಿತ್ಯ ವಿಡಿಯೋ ಕಾಲ್​​ ಮೂಲಕ ತನಗೆ ಲೈಂಗಿಕ ಸುಖ ನೀಡುವಂತೆ ಪೀಡಿಸುತ್ತಾರೆ. ವಿಡಿಯೋ ಕಾಲ್​​ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡು ಲೈಂಗಿಕ ಸುಖ ನೀಡು ಎಂದು ಸತಾಯಿಸುತ್ತಾರೆ. ಹೀಗಾಗಿ ನಾನು ಇದು ಇಷ್ಟವಿಲ್ಲ ಎಂದು ನಿರಾಕರಿಸಿದೆ ಎಂದು ಮಹಿಳೆ ಎಫ್​​ಐಆರ್​​ನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು, ಗಂಡನಿಗೆ ಲೈಂಗಿಕ ಸುಖ ನೀಡದಿದ್ದಕ್ಕೆ ತನ್ನ ಕುಟುಂಬದವರ ಮೂಲಕ ನನಗೆ ಥಳಿಸಿದ್ದಾರೆ. ಹಾಗಾಗಿ ನಾನು ಆಶ್ರಯಕ್ಕಾಗಿ ನನ್ನ ತವರು ಮನೆಗೆ ಬಂದಿದ್ದೇನೆ. ನನ್ನನ್ನು ಗಂಡನ ಕುಟುಂಬ ಥಳಿಸಿದ್ದು ಮಾತ್ರವಲ್ಲದೇ ವರದಕ್ಷಿಣೆ ಕಿರುಕುಳ ನೀಡುತ್ತಿದೆ ಎಂದು ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಹು-ಧಾ ಭದ್ರಕೋಟೆಯಲ್ಲಿ ಅಲ್ಪಮತ: ಬಿಜೆಪಿ 39 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದ್ದು ಏಕೆ..?

ನಮ್ಮ ಸಮುದಾಯದ ಮಾಟ್ರಿಮೋನಿಯಲ್​​ ಮೂಲಕ ಇವರು ನನಗೆ ಪರಿಚಯ. ನಾವು 2020 ಆಗಸ್ಟ್​ ತಿಂಗಳಿನಲ್ಲಿ ಮದುವೆ ಆದೆವು. ಅಂದಿನಿಂದ ಇಂದಿನವರೆಗೂ ಗಂಡ ಪ್ರತಿನಿತ್ಯ ಹೀಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು, ಪೊಲೀಸರು ಆರೋಪಿ ಕುಟುಂಬಕ್ಕಾಗಿ ಬಲೆ ಬೀಸಿದ್ದು, ಎಲ್ಲರೂ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕ್ರೈಂ​​​ ಸ್ಪಾಟ್​​ನಲ್ಲಿ ಕಾಂಡೋಮ್​​ ಸಿಕ್ಕ ಮಾತ್ರಕ್ಕೆ ಅದು ಒಪ್ಪಿತ ಲೈಂಗಿಕತೆಯಲ್ಲ; ಕೋರ್ಟ್​

Source: newsfirstlive.com Source link