ಸಾಹಿತ್ಯ ಲೋಕದಲ್ಲಿ ಕ್ರಾಂತಿ – ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಲಿದ್ದಾರೆ ಸುನಿಲ್ ಕುಮಾರ್

ಬೆಂಗಳೂರು: ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸಾಹಿತ್ಯ ಲೋಕದಲ್ಲೊಂದು ನವ ಕ್ರಾಂತಿ ಮಾಡಿದ್ದಾರೆ. ತಾವು ಸಚಿವರಾದ ಬಳಿಕ ಅಭಿನಂದಿಸಲು ಬಂದ ಅಭಿಮಾನಿಗಳಲ್ಲಿ ಹಾರ, ತುರಾಯಿ ತರಬೇಡಿ ಪುಸ್ತಕಗಳನ್ನು ಕೊಡಿ ಅದನ್ನು ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದಿದ್ದರು. ಇದೀಗ ಇವರಿಗೆ ಸಾವಿರಾರು ಪುಸ್ತಕಗಳು ಅಭಿನಂದನಾ ರೂಪದಲ್ಲಿ ಸಿಕ್ಕಿದೆ.

ಈ ಹಿಂದೆ ಸುನಿಲ್ ಕುಮಾರ್ ಅವರು ಸಚಿವರಾದ ಬಳಿಕ ದಯವಿಟ್ಟು ಹಾರ ತುರಾಯಿ ತರಬೇಡಿ ಅಭಿನಂದಿಸಲೇ ಬೇಕೆಂದಿದ್ದರೆ ಪುಸ್ತಕಗಳನ್ನು ಕೊಡಿ ಅದನ್ನು ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದಿದ್ದರು. ಅದರಂತೆ ಅವರು ಹೋದಲ್ಲಿ ಎಲ್ಲಾ ಕಡೆ ಅವರಿಗೆ ಪುಸ್ತಕ ನೀಡಿ ಅಭಿನಂದಿಸಿದ್ದಾರೆ. ಇದೀಗ ಅವರ ಬಳಿ ಸಾವಿರಾರು ಪುಸ್ತಕಗಳು ಬಂದು ಸೇರಿದೆ. ಇದನ್ನೂ ಓದಿ: ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲು ನಿಷೇಧ: ಬೊಮ್ಮಾಯಿ ಆದೇಶ

ಸಚಿವರು ಈ ಪುಸ್ತಕಗಳನ್ನು ಇದೀಗ ಪ್ರದರ್ಶನಕ್ಕೆ ಇಟ್ಟು ಬಳಿಕ ಗ್ರಂಥಾಲಯಕ್ಕೆ ಹಸ್ತಾಂತರ ಮಾಡುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 9ರಂದು ವಿಕಾಸ, ಶಾಸಕರ ಕಛೇರಿ, ಕಾರ್ಕಳದಲ್ಲಿ ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ಕೊಡಲು ಮುಂದಾಗಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿದ್ದು, ಹಾರ ತುರಾಯಿ ಹಾಕದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ಹಾಕವುದು ಬೇಡ. ಅನಗತ್ಯವಾಗಿ ಖರ್ಚು ವೆಚ್ಚ ಮಾಡುವುದು ಬೇಡ ಎಂದು ಸೂಚನೆ ಹೊರಡಿಸಿದ್ದರು. ಇದನ್ನೂ ಓದಿ: ಅಭಿನಂದಿಸಲು ಹಾರ ತುರಾಯಿ ತರಬೇಡಿ, ಪುಸ್ತಕ ತನ್ನಿ: ಸುನೀಲ್ ಕುಮಾರ್

Source: publictv.in Source link