ಪ್ರಜ್ವಲ್​​ ದೇವರಾಜ್​​ ಸಿನಿಮಾದಲ್ಲಿ ಬಾಲಿವುಡ್‌ ಖ್ಯಾತ ನಟ; ಯಾರು ಗೊತ್ತಾ?

ಪ್ರಜ್ವಲ್​​ ದೇವರಾಜ್​​ ಸಿನಿಮಾದಲ್ಲಿ ಬಾಲಿವುಡ್‌ ಖ್ಯಾತ ನಟ; ಯಾರು ಗೊತ್ತಾ?

ಡಾ. ರಾಜ್ ಕುಮಾರ್ ಅವರಿಗೆ ಕನ್ನಡದಲ್ಲಿ ಮಾತ್ರ ಅಲ್ಲ ಪರ ಭಾಷೆಯ ಸಿನಿಮಾ ಅಂಗಳದಲ್ಲೂ ಅಭಿಮಾನಿಗಳಿದ್ದಾರೆ. ಅದರಂತೆ ಬಾಲಿವುಡ್​ ಲೋಕದಲ್ಲಿ ಅಣ್ಣಾವ್ರ ಅಭಿಮಾನಿಗಳಲ್ಲೊಬ್ಬರು ಗೋವಿಂದ. ಹಿಂದಿ ಸಿನಿಮಾ ಪಾಳ್ಯದಲ್ಲಿ ಹಾಸ್ಯ ರಸವಿಳ್ಯವನ್ನ ಹರಿಸುತ್ತಿದ್ದ ಗೋವಿಂದ್ ಫಸ್ಟ್ ಟೈಮ್ ಕನ್ನಡಕ್ಕೆ ಬರೋ ಪ್ಲಾನ್ ಮಾಡಿದ್ದಾರೆ.. ಅದ್ಯಾವ ಸಿನಿಮಾ ಅನ್ನೋ ಕುತೂಹಲಕ್ಕೆ ಉತ್ತರ ನಿಮ್ಮಮುಂದೆ..
ನಮ್ಮ ಕನ್ನಡದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಹೆಂಗೋ ಹಂಗೆ ಬಾಲಿವುಡ್ ಸಿನಿಮಾ ಲೋಕದಲ್ಲಿ ಗೋವಿಂದ ಕೂಡ ಕಾಮಿಡಿ ಹೀರೋ.. ಕಾಮಿಡಿ ಮಾಡ್ಕೊಂಡು ಪ್ರೇಕ್ಷಕರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಲಿಸೋದ್ರಲ್ಲಿ ಗೋವಿಂದ ಪಂಟ್ರು.

80ರ ಮದ್ಯಭಾಗದಿಂದ, 90ರ ದಶಕದಲ್ಲಿ ಬಹುಬೇಡಿಕೆಯ ನಟನಾಗಿ ಮಿಂಚಿರುವ ಗೋವಿಂದ ಈಗ ರಾಜಕೀಯದಿಂದ ಜನ ಸೇವೆಯನ್ನ ಅಭಿನಯದಿಂದ ಕಲಾ ಸೇವೆಯನ್ನ ಮಾಡುತ್ತಿದ್ದಾರೆ.. ತಮ್ಮೂರಿನಲ್ಲೇ ತಮ್ಮ ಇಂಡಸ್ಟ್ರಿಯಲ್ಲೇ ಬ್ಯುಸಿಯಾಗಿದ್ದ ಗೊವಿಂದ ಅಪರೂಪ ಅಕ್ಕ ಪಕ್ಕದ ಸಿನಿಮಾ ನೆಲಕ್ಕೆ ಕಾಲಿಟ್ಟಿದ್ದು.. ಆದ್ರೆ ಈಗ ಗೋವಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.. ಹಾಗಾದ್ರೆ ಯಾರ ಸಿನಿಮಾದ ಮೂಲಕ ಅನ್ನೋ ಪ್ರಶ್ನೆಗೆ ಉತ್ತರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸಿನಿಮಾ ಮೂಲಕ..

blank

ಚಂದನವನದಲ್ಲಿ ಸದ್ಯಕ್ಕಂತೂ ಸಾಲು ಸಾಲು ಸಿನಿಮಾಗಳಲ್ಲಿ ಜಂಟಲ್ ಮನ್ ಪ್ರಜ್ವಲ್ ದೇವರಾಜ್ ಬ್ಯುಸಿಯೋ ಬ್ಯುಸಿ.. ಪ್ರಜ್ಜು ನಟಿಸಲಿರುವ ಮುಂಬರುವ ಚಿತ್ರವೊಂದರಲ್ಲಿ ಗೋವಿಂದ ಅಭಿಮಾನಯ ಮಾಡುವ ಸಾಧ್ಯತೆ ಇದೆ.. ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಕಿರಣ್ ವಿಶ್ವನಾಥ್ ಸೃಷ್ಟಿಸಿರುವ ಕಥೆಯೊಂದಕ್ಕೆ ಪ್ರಜ್ವಲ್ ಹೀರೋ..

ಇದನ್ನೂ ಓದಿ: ‘ವೀರಂ’ ಅವತಾರಕ್ಕೆ ರಗಡ್ ಕಿಕ್ ಕೊಟ್ಟ ಪ್ರಜ್ವಲ್

ಇನ್ನೇನು ಈ ಸಿನಿಮಾ ಹೆಸರು ಸಮೇತ ಪ್ರಚಾರ ಮಾಡ್ಕೊಂಡು ಶೂಟಿಂಗ್​​ ಅಂಗಳಕ್ಕೆ ಕಾಲಿಡಲಿದೆ.. ಶೂಟಿಂಗ್​​​ಗೂ ಮುನ್ನ ಪ್ರಮುಖ ಪಾತ್ರವೊಂದಕ್ಕೆ ಹಿಂದಿ ನಟ ಗೊವಿಂದ ಅವರನ್ನ ಅಪ್ರೌಚ್ ಮಾಡಿ ಕಥೆ ಹೇಳಿ ಬಂದಿದೆ ಚಿತ್ರತಂಡ.. ಶೀಘ್ರದಲ್ಲೇ ಗೋವಿಂದ ಅವರಿಂದ ಗ್ರೀನ್ ಸಿಗ್ನಲ್ ಸಿಗೋ ನಿರೀಕ್ಷೆ ಚಿತ್ರತಂಡಕ್ಕಿದೆ.

ಈ ಹಿಂದೆ ಗೋವಿಂದ ಅವರ ಕನ್ನಡದಲ್ಲಿ ನಟಿಸದಿದ್ದರು ಡಾ.ರಾಜ್ ಕುಮಾರ್ ಅವರ ಅಪ್ಪಟ್ಟ ಅಭಿಮಾನಿ.. ಅಣ್ಣಾವ್ರ ಹಾಡುಗಳನ್ನ ಆಗಾಗ ಕೆಲವು ವೇದಿಕೆಯ ಮೇಲೆ ಹಾಡಿ ತನ್ನ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.. ನವೀನ್ ಕುಮಾರ್ ಎಂಬುವವರು ಈ ಸಿನಿಮಾ ಹೆಸರಿಡ ಚಿತ್ರದ ನಿರ್ಮಾಪಕರಾಗಿದ್ದು ಬಹುಬೇಗ ಗೋವಿಂದ ಸ್ಯಾಂಡಲ್​ವುಡ್​​ಗೆ ಬರೋ ಸುದ್ದಿ ಪ್ರಕಟವಾಗೋ ಸಾಧ್ಯತೆ ಇದೆ..

Source: newsfirstlive.com Source link