ಕೊಳಕು ಸಾಕ್ಸ್​ಗೂ ಭಾರೀ ಡಿಮ್ಯಾಂಡ್​; ಬೆಲೆ ಕೇಳಿದ್ರೆ ದಂಗಾಗ್ತೀರಾ…

ಕೊಳಕು ಸಾಕ್ಸ್​ಗೂ ಭಾರೀ ಡಿಮ್ಯಾಂಡ್​; ಬೆಲೆ ಕೇಳಿದ್ರೆ ದಂಗಾಗ್ತೀರಾ…

ಕೊಳಕು ಸಾಕ್ಸ್​ಗೆ ಉದ್ಯಮಿಯೋರ್ವ 200 ಪೌಂಡ್​​ ಅಂದರೆ ಸುಮಾರು 20 ಸಾವಿರ ರೂಪಾಯಿ ನೀಡಿ ಖರಿದೀಸಿದ ಘಟನೆ ನಡೆದಿದೆ. ಕೊಳಕು ಸಾಕ್ಸ್​ ಖರೀದಿಸುವ ಮುನ್ನ ಕಾಲುಗಳ ತುಣುಕುಗಳನ್ನು ನೋಡಲೆಂದೇ ಸುಮಾರು ಗಂಟೆಗಟ್ಟಲೇ ಟೈಮ್​​ ಸ್ಪೆಂಡ್​​ ಮಾಡುತ್ತಾರಂತೆ ಈ ಉದ್ಯಮಿ.

ಈತನ ಹೆಸರು ಮಿ.ಡಿ, ಇವರ ವಯಸ್ಸು 33. ಜನರಿಂದ ಕೊಳಲು ಸಾಕ್ಸ್​ ಖರಿದೀಸಿ ಹಣ ನೀಡೋದೆ ಇವರ ಹವ್ಯಾಸ. ಅಲ್ಲದೇ ಜನರ ಕೊಳಕು ಪಾದಗಳನ್ನು ವಿಡಿಯೋ ಮಾಡಿಸಿ ಸಾಕಷ್ಟು ಹಣ ನೀಡುತ್ತಾರೆ ಎಂಬ ವಿಚಿತ್ರ ಸಂಗತಿಯೊಂದು ಬಯಲಿಗೆ ಬಂದಿದೆ.

ಕೊಳಕು ಸಾಕ್ಸ್​ ಬೆಲೆ ಯಾರು ನನ್ನೊಂದಿಗೆ ಎಷ್ಟು ಚೆನ್ನಾಗಿ ಮಾತಾಡುತ್ತಾರೆ ಎಂಬುದರ ಮೇಲೆ ನಿಗದಿಯಾಗುತ್ತದೆ. ನನ್ನೊಂದಿಗೆ ಚೆನ್ನಾಗಿ ಮಾತಾಡುವ ಸ್ಪೆಷಲ್​​ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಗೆ ಕಡಿಮೆ ಎಂದರೆ 70 ಪೌಂಡ್​​ ಮತ್ತು ಮ್ಯಾಕ್ಸಿಮಮ್​​​ 1000 ಪೌಂಡ್​​ ನೀಡಿ ಖರಿದೀಸಿದ್ದೇನೆ ಎಂದಿದ್ದಾರೆ ಮಿ.ಡಿ.

ಇದನ್ನೂ ಓದಿ: ಆಫ್ಘನ್ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಮುಂದಾದ ಚೀನಾ.. ಡ್ರ್ಯಾಗನ್​ನ ನರಿ ಬುದ್ಧಿ ಬಗ್ಗೆ ಇಲ್ಲಿದೆ ಡೀಟೇಲ್ಸ್

ನಾನು ಜನರ ಪಾದಗಳಿಂದ ಆಕರ್ಷಿತನಾಗುತ್ತೇನೆ. ಇವು ಬಹಳ ಸೊಗಸಾಗಿರುತ್ತವೆ ಎಂದು ಹೇಳಿದ್ದಾರೆ.

Source: newsfirstlive.com Source link