‘ನಾನು ಅವನಲ್ಲ ಅವಳಾಗ್ತೇನೆ’.. ಎಂದವನು ತಂದೆ, ತಾಯಿ, ತಂಗಿ, ಅಜ್ಜಿಯನ್ನ ಶೂಟ್ ಮಾಡಿ ಕೊಂದ

‘ನಾನು ಅವನಲ್ಲ ಅವಳಾಗ್ತೇನೆ’.. ಎಂದವನು ತಂದೆ, ತಾಯಿ, ತಂಗಿ, ಅಜ್ಜಿಯನ್ನ ಶೂಟ್ ಮಾಡಿ ಕೊಂದ

ಕಳೆದ ಆಗಸ್ಟ್​ 27 ರಂದು ಹರಿಯಾಣದ ರೋಹ್ಟಕ್ ನಗರದ ವಿಜಯನಗರ್​ ಕಲೋನಿಯ ಒಂದೇ ಕುಟುಂಬದ ನಾಲ್ವರನ್ನ ಅದೇ ಕುಟುಂಬದ ಸದಸ್ಯ ಶೂಟ್ ಮಾಡಿ ಕೊಲೆಗೈದಿದ್ದ. ತನ್ನ ತಂದೆ, ತಾಯಿ, ತಂಗಿ ಹಾಗೂ ಅಜ್ಜಿಯನ್ನು ಆರೋಪಿ ಶೂಟ್ ಮಾಡಿ ಕೊಂದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಅಭಿಷೇಕ್ ತನ್ನ ಕುಟುಂಬಸ್ಥರನ್ನೇ ಕೊಂದಿದ್ದರ ಹಿಂದಿನ ರಹಸ್ಯವನ್ನ ಬಿಚ್ಚಿಟ್ಟಿದ್ದಾನೆ.

ಇದನ್ನೂ ಓದಿ: ಪಾಕ್​ನ ನರಿಬುದ್ಧಿ ಬೆತ್ತಲು ಮಾಡಿದ ಇರಾನ್; ತಾಲಿಬಾನಿಗಳಿಗೆ ಸಹಾಯ ಮಾಡಿದ್ದಕ್ಕೆ ಇಲ್ಲಿದೆ ಸಾಕ್ಷಿ

ಅಭಿಷೇಕ್ ಸಲಿಂಗಿಯಾಗಿದ್ದು ಹೆಣ್ಣಾಗಿ ಬದಲಾಗಬೇಕೆಂದು ಆಪರೇಷನ್ ಮಾಡಿಸಿಕೊಳ್ಳಲು ಮುಂದಾಗಿದ್ದನಂತೆ. ಆದರೆ ಇದಕ್ಕೆ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಂತೆ. ಇದರಿಂದ ಬೇಸತ್ತ ಅಭಿಷೇಕ್ ತನ್ನ ತಂದೆ, ತಾಯಿ, ತಂಗಿ ಹಾಗೂ ಅಜ್ಜಿಯನ್ನ ಶೂಟ್ ಮಾಡಿ ಕೊಲೆಗೈದಿದ್ದಾಗಿ ಹೇಳಿಕೊಂಡಿದ್ದಾನೆ.

blank

ಇದನ್ನೂ ಓದಿ: ಮೋದಿ ಇರೋದಕ್ಕೆ ಪೆಟ್ರೋಲ್ ಬೆಲೆ ಇಷ್ಟಿದೆ.. ಇಲ್ಲದಿದ್ರೆ ₹200 ರೂ ಆಗ್ತಿತ್ತು..-ಮುರುಗೇಶ್ ನಿರಾಣಿ

ಅಭಿಷೇಕ್ ತನ್ನ ಮನೆಯ ಸದಸ್ಯರನ್ನೇ ಹತ್ಯೆ ಮಾಡಲು ಹಲವು ದಿನಗಳಿಂದಲೂ ಪ್ಲಾನ್​​ ಮಾಡಿದ್ದ. ತಾನು ಸಲಿಂಗಿ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸುವುದಾಗಿ ಹೇಳಿದಾಗ ಅವರ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಅಭಿಷೇಕ್ ತನ್ನ ತಂದೆಯ ಪಿಸ್ತೂಲ್​ ಕದ್ದಿಟ್ಟುಕೊಂಡಿದ್ದ. ಆಗಸ್ಟ್ 27 ರಂದು ಮೊದಲಿಗೆ ತನ್ನ ರೂಂನಲ್ಲಿ ನಿದ್ರಿಸುತ್ತಿದ್ದ ತಂಗಿಯ ಮೇಲೆ ಗುಂಡುಹಾರಿಸಿದ.. ನಂತರ ತನ್ನ ಅಜ್ಜಿಗೆ ಗಿಟಾರ್ ತೋರಿಸುವುದಾಗಿ ಕರೆದು ಅಜ್ಜಿಯನ್ನ ಶೂಟ್ ಮಾಡಿದ. ನಂತರ ತನ್ನ ತಾಯಿಯನ್ನ ಮನೆಯ ಮೇಲೆ ಕರೆದೊಯ್ದು ಶೂಟ್ ಮಾಡಿದ ಕೊನೆಗೆ ತನ್ನ ತಂದೆಯನ್ನ ಶೂಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಅಭಿಷೇಕ್ ತಂದೆ ಕುಸ್ತಿಪಟುವಾಗಿದ್ದರು.. ಅವರಿಗೆ ಅಭಿಷೇಕ್ ಶೂಟ್ ಮಾಡಿದಾಗ ಅವರ ತಂದೆ ಮೊಬೈಲ್​ನಲ್ಲಿ ವಿಡಿಯೋ ನೋಡುತ್ತಿದ್ದರು. ಮೂರು ಬಾರಿ ತನ್ನ ತಂದೆಗೆ ಶೂಟ್ ಮಾಡಿ ಅಭಿಷೇಕ್ ಕೊಲೆಗೈದಿದ್ದಾನೆ ಎನ್ನಲಾಗಿದೆ.

Source: newsfirstlive.com Source link