ಜನಪ್ರಿಯತೆಗಾಗಿ ಡೆಡ್ಲಿ ಸ್ಟಂಟ್.. ಕಾರ್​ಗೆ ಟೇಪ್​ನಿಂದ ಅಂಟಿಸಿಕೊಂಡು ಈತ ಮಾಡಿದ್ದೇನು ಗೊತ್ತಾ..?

ಜನಪ್ರಿಯತೆಗಾಗಿ ಡೆಡ್ಲಿ ಸ್ಟಂಟ್.. ಕಾರ್​ಗೆ ಟೇಪ್​ನಿಂದ ಅಂಟಿಸಿಕೊಂಡು ಈತ ಮಾಡಿದ್ದೇನು ಗೊತ್ತಾ..?

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರೋ ವ್ಯಕ್ತಿಯೋರ್ವ ತನ್ನ ಖ್ಯಾತಿಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಲು ಮಾರಣಾಂತಿಕ ಸ್ಟಂಟ್ ನಡೆಸಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ಡ್ಯಾನಿಲ್ ಮ್ಯಾಸ್ನಿಕೊವ್ ಎಂಬಾತ ಕಾರ್​​ಗೆ ತನ್ನನ್ನ ಟೇಪ್ ಮೂಲಕ ಅಂಟಿಸಿಕೊಂಡು ಗಂಟೆಗೆ 180 ಕಿ. ಮೀ ವೇಗದಲ್ಲಿ ಪ್ರಯಾಣಿಸಿದ್ದಾನೆ. ಅಲ್ಲದೇ ಈ ದೃಶ್ಯವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಸದ್ಯ ಈ ಡೆಡ್ಲಿ ಸ್ಟಂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಆಗಸ್ಟ್ 1 ರಂದು ಡ್ಯಾನಿಲ್ ಈ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ 2.56 ಲಕ್ಷ ವೀಕ್ಷಣೆಗಳನ್ನು ಕಂಡಿದೆ. ಇನ್​ಸ್ಟಾಗ್ರಾಂನಲ್ಲಿ ಡ್ಯಾನಿಲ್ ಬರೋಬ್ಬರಿ 8 ಲಕ್ಷ ಫಾಲೋವರ್​​ಗಳನ್ನ ಹೊಂದಿದ್ದಾನೆ.

Source: newsfirstlive.com Source link