ಪಾಲಿಕೆ ಫಲಿತಾಂಶದಿಂದ ಒಳಗೊಳಗೇ ಖುಷಿ ಪಡ್ತಿರೋ ಬೆಳಗಾವಿ ಶಾಸಕರು -‘ಆ’ ಆತಂಕ ದೂರ

ಪಾಲಿಕೆ ಫಲಿತಾಂಶದಿಂದ ಒಳಗೊಳಗೇ ಖುಷಿ ಪಡ್ತಿರೋ ಬೆಳಗಾವಿ ಶಾಸಕರು -‘ಆ’ ಆತಂಕ ದೂರ

ಬೆಳಗಾವಿ: ಪಾಲಿಕೆ ಫಲಿತಾಂಶ ಎಂಇಎಸ್​​ನ ಪ್ರಾಬಲ್ಯ ಮುರಿದಿದೆ. ಲೋಕಸಭಾ ಉಪ-ಕದನದಲ್ಲಿ ಸೃಷ್ಟಿ ಆಗಿದ್ದ ಆತಂಕ ಈಗ ನಿವಾರಣೆಯಾಗಿದೆ. ಬೆಳಗಾವಿಯ ಫಲಿತಾಂಶದಿಂದ 3 ಕ್ಷೇತ್ರಗಳ ಶಾಸಕರು ಫುಲ್ ಖುಷ್ ಆಗಿದ್ದಾರೆ. ಮರಾಠರ ನಿರ್ಣಾಯಕ ಮತಗಳು ಬಿಜೆಪಿ ಕಾಂಗ್ರೆಸ್​​​ನತ್ತ ಹೊರಳಿವೆ.

ಮೂರು ಪಾಲಿಕೆ ಚುನಾವಣೆ ಮೂರು ರೀತಿ ಫಲಿತಾಂಶ ನೀಡಿದೆ. ಬೆಳಗಾವಿಯಲ್ಲಿ ಬಿಜೆಪಿ ವಿಜಯದ ಕೇಕೆ ಹಾಕಿದ್ರೆ, ಎಂಇಎಸ್​ ಧೂಳಿಪಟವಾಗಿದೆ. ಕಳೆದ ಉಪ ಚುನಾವಣೆಯಲ್ಲಿ ಎಂಇಎಸ್​​ ಮತಬ್ಯಾಂಕ್​​ ಕಂಡು ಬೆಚ್ಚಿಬಿದ್ದಿದ್ದ ಬೆಳಗಾವಿಯ ಮೂವರು ಶಾಸಕರು, ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಚಿತ್ರಣ ಭವಿಷ್ಯಕ್ಕೂ ಮುನ್ನುಡಿ ಆಗಲಿದೆ ಅಂತ ನಂಬಿದ್ದಾರೆ.

blank

ಎಂಇಎಸ್​ ಧೂಳಿಪಟದಿಂದ ಬೆಳಗಾವಿಯ ಮೂವರು ಶಾಸಕರು ಖುಷ್
ಮರಾಠ ಮತಗಳೇ ನಿರ್ಣಾಯಕವಾಗಿರುವ ಕುಂದಾನಗರಿಯಲ್ಲಿ ಎಂಇಎಸ್ ಪ್ರಾಬಲ್ಯ ಮೆರೆಯುತ್ತಿತ್ತು. ಲೋಕಸಭಾ ಉಪಚುನಾವಣೆಯಲ್ಲಿ ಎಂಇಎಸ್​​ ಮತಬ್ಯಾಂಕ್​​ ಕಂಡು ಎರಡು ರಾಷ್ಟ್ರೀಯ ಪಕ್ಷಗಳೂ ಬೆಚ್ಚಿಬಿದ್ದಿದ್ದವು. ಆದ್ರೆ ಪಾಲಿಕೆ ಫಲಿತಾಂಶ ಎಂಇಎಸ್​​ಗೆ ಉಲ್ಟಾಹೊಡೆದಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿಜಯದ ಕೇಕೆ ಹಾಕಿದ್ರೆ, ಎಂಇಎಸ್​ ಧೂಳಿಪಟವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ವಾರ್ಡ್​​​ಗಳಲ್ಲಿ ಬಿಜೆಪಿಯ 35 ಅಭ್ಯರ್ಥಿಗಳು ವಿಜಯ ಸಾಧಿಸಿದ್ರೆ, ಕಾಂಗ್ರೆಸ್ 10, ಎಐಎಂಐಎಂ 1 ಹಾಗೂ ಪಕ್ಷೇತರರು 12 ವಾರ್ಡ್​​ನಲ್ಲಿ ಗೆಲುವು ಸಾಧಿಸಿದ್ದಾರೆ. ಆದ್ರೆ ಎಂಇಎಸ್​​ ನಿರ್ಮಾಮವಾಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಮರಾಠರ ನಿರ್ಣಾಯಕ ಮತಗಳು ಬಿಜೆಪಿ ಕಾಂಗ್ರೆಸ್​​​ನತ್ತ ಹೊರಳಿವೆ. ಆ ಮೂಲಕ ಎಂಇಎಸ್​​​​ ಪ್ರಾಬಲ್ಯ ಮುರಿರೋದು ಬೆಳಗಾವಿಯ ಮೂವರು ಶಾಸಕರಿಗೆ ಫುಲ್ ಖುಷಿ ಕೊಟ್ಟಿದೆ.

blank

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್, ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್, ಎಂಇಎಸ್ ಧೂಳಿಪಟವಾಗಿರೋದನ್ನ ಒಳಗೊಳಗೇ ಸಂಭ್ರಮಿಸ್ತಿದ್ದಾರೆ.

ಯಾಕಂದ್ರೆ ಕಳೆದ ಉಪ ಚುನಾವಣೆಯಲ್ಲಿ ಎಂಇಎಸ್​​ ಮತಬ್ಯಾಂಕ್​​ ಕಂಡು ಬೆಳಗಾವಿಯ ಈ ಮೂವರು ಶಾಸಕರು ಬೆಚ್ಚಿಬಿದ್ದಿದ್ದರು. ಆದ್ರೀಗ ಸಿಕ್ಕಿರುವ ಪಾಲಿಕೆ ಚಿತ್ರಣ ಭವಿಷ್ಯಕ್ಕೂ ಮುನ್ನುಡಿ ಆಗಲಿದೆ ಅಂತ ನಂಬಿರುವ ಮೂವರು ಶಾಸಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

blank

ಮರಾಠ ಮತ.. ಬದಲಾದ ರಾಜಕಾರಣ!
ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಮರಾಠ ಮತಗಳೇ ನಿರ್ಣಾಯಕವಾಗಿವೆ. ಕಳೆದ ಉಪ ಚುನಾವಣೆಯಲ್ಲಿ 80 ಸಾವಿರ ಮತ ಪಡೆದಿದ್ದ ಎಂಇಎಸ್, ಅಭ್ಯರ್ಥಿ ಶುಭಂ ಶಿಳಕೆ ಪರ ಮರಾಠ ಮತದಾರರು ನಿಂತಿದ್ದರು. ಮರಾಠಿಗರ ಈ ಒಗ್ಗಟ್ಟು ಕಂಡು ಆತಂಕಗೊಂಡಿದ್ದ ಮೂರು ಕ್ಷೇತ್ರದ ಶಾಸಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮರಾಠ ಮತ ಕೈತಪ್ಪುವ ಭೀತಿ ಕಾಡಿತ್ತು. ಯಾಕಂದ್ರೆ ಬೆಳಗಾವಿ ನಗರದ ಮೂವರೂ ಶಾಸಕರೂ ಮರಾಠ ಮತವನ್ನೇ ನಂಬಿಕೊಂಡಿದ್ದಾರೆ. ಆದ್ರೀಗ ಮರಾಠರು ಎಂಇಎಸ್​ಗೆ ಕೈ ಕೊಟ್ಟು ಬಿಜೆಪಿ, ಕಾಂಗ್ರೆಸ್ ಪರ ನಿಂತಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿಯ ಪಾಲಿಕೆ ಫಲಿತಾಂಶ ಎಂಇಎಸ್​​ನ ಪ್ರಾಬಲ್ಯ ಮುರಿದಿರೋದು ಮೂರು ಶಾಸಕರ ಸಂತಸಕ್ಕೆ ಕಾರಣವಾಗಿದೆ. ಆ ಮೂಲಕ ಲೋಕಸಭಾ ಉಪ-ಕದನದಲ್ಲಿ ಸೃಷ್ಟಿ ಆಗಿದ್ದ ಆತಂಕ ಈಗ ನಿವಾರಣೆಯಾಗಿದೆ. ಅಲ್ಲದೆ ಇದು ಭವಿಷ್ಯಕ್ಕೂ ಮುನ್ನುಡಿ ಆಗಲಿದೆ ಅಂತ ಮೂವರೂ ನಂಬಿದ್ದಾರೆ. ಹಾಗಂತ ಪಾಲಿಕೆ ಫಲಿತಾಂಶದಿಂದಲೇ ಮೂವರೂ ಶಾಸಕರು ಹೆಚ್ಚು ಖುಷಿಪಡುವ ಹಾಗಿಲ್ಲ. ಯಾಕಂದ್ರೆ ಬೆಳಗಾವಿ ರಾಜಕಾರಣದಲ್ಲಿ ಯಾವ ಕ್ಷಣದಲ್ಲಿ ಮತದಾರ ಯಾವ ರೀತಿಯಾದ್ರೂ ಮನಸ್ಸು ಬದಲಾಯಿಸಬಹುದು.

ವಿಶೇಷ ಬರಹ: ಮಧುಸೂದನ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​​​​​

Source: newsfirstlive.com Source link