ಕೇರಳಲ್ಲಿ ‘ನಿಫಾ’ ಅಟ್ಟಹಾಸ.. -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಕೇರಳಲ್ಲಿ ‘ನಿಫಾ’ ಅಟ್ಟಹಾಸ.. -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

01. 10 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ

blank

ಆಗಸ್ಟ್ 15 ರಂದು ಧ್ವಜಸ್ತಂಭ ನೆಡುವ ವೇಳೆ ಸಾವನ್ನಪ್ಪಿದ್ದ ವಿದ್ಯಾರ್ಥಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ತುಮಕೂರಿನ ಗ್ರಾಮವೊಂದರಲ್ಲಿ ವಿದ್ಯುತ್ ತಂತಿ ತಗಲು ವಿದ್ಯಾರ್ಥಿ ಸಾವನ್ನಪ್ಪಿದ್ದ. ಆಗ ಸರ್ಕಾರ ಒಂದು ಲಕ್ಷ ಪರಿಹಾರ ನೀಡಿತ್ತು. 2019ರಲ್ಲಿ ನಡೆದಿದ್ದ ಘಟನೆಯಲ್ಲಿ ನೀಡಿದ ಪರಿಹಾರವನ್ನ ಈ ಪ್ರಕರಣದಲ್ಲೂ ನೀಡಬೇಕು ಅಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಇನ್ನು ಶಾಲೆ ಆವರಣದ ಮೂಲಕ ಹಾದು ಹೋಗುವ ವೈರ್​ಗಳನ್ನ ತೆರವುಗೊಳಿಸಿ ಅಂತ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

02. ಕೇರಳಲ್ಲಿ ‘ನಿಫಾ’ ಅಟ್ಟಹಾಸ, ಹೊಸ ಮಾರ್ಗಸೂಚಿ ರಿಲೀಸ್

blank

ಕೊರೊನಾ ಸೋಂಕಿನ ಜೊತೆ ಕೇರಳದಲ್ಲಿ ನಿಫಾ ಆತಂಕ ಸೃಷ್ಟಿಸಿದೆ. ನಿಫಾ ಸೋಂಕಿಗೆ ತುತ್ತಾಗಿದ್ದ ಬಾಲಕನ 11 ಮಂದಿ ಕುಟುಂಬಸ್ಥರಿಗೂ ನಿಫಾ ದಾಳಿ ಇಟ್ಟಿದೆ. ಈ ಬಗ್ಗೆ ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್​ ಮಾಹಿತಿ ನೀಡಿದ್ದಾರೆ. ಮತ್ತೊಂದ್ಕೆಡೆ ನಿಫಾ ವೈರಸ್​ ಬಗ್ಗೆ ಎಚ್ಚರಿಕೆಯಿಂದರಲು ಕೇರಳ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಇಲಾಖೆ ಖಡಕ್ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ನಿಫಾ ನಿಯಂತ್ರಣಕ್ಕಾಗಿ ಕೇರಳದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ.

03. ಕೋವಿಶೀಲ್ಡ್ ಅಂತರದ ಬಗ್ಗೆ ಹೈಕೋರ್ಟ್​ ನಿರ್ದೇಶನ

blank

ಕೋವಿಶೀಲ್ಡ್ 2ನೇ ಡೋಸ್‌ ಅನ್ನು 3 ವಾರಗಳ ಬಳಿಕ ಪಡೆಯಲು ಅನುಕೂಲವಾಗುವಂತೆ ಕೋವಿನ್ ಪೋರ್ಟಲ್‌ನಲ್ಲಿ ಬದಲಾವಣೆ ಮಾಡಲು ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಸದ್ಯ ಮೊದಲ ಡೋಸ್‌ ಪಡೆದ 84 ದಿನಗಳ ಬಳಿಕ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ ಪಡೆಯಬಹುದಾಗಿದೆ. ಆದರೆ, 4 ವಾರಗಳು ಕಳೆದ ಕೂಡಲೇ ಎರಡನೇ ಡೋಸ್ ಪಡೆಯಲು ಬಯಸುವವರಿಗೆ ಲಸಿಕೆ ಒದಗಿಸಬೇಕು ಅಂತ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.

04. ಪಂಜಾಬ್ ಆಪ್​ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮನ್?

ಮುಂದಿನ ವರ್ಷ ನಡೆಯಲಿರೋ ಪಂಜಾಬ್​ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ತಯಾರಿ ನಡೆಸಿಕೊಳ್ತಿದೆ. ಈ ನಡುವೆ ಪಂಜಾಬ್​​ ಎಎಪಿ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮನ್​ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಪಕ್ಷದ ನಾಯಕರು ಅಧಿಕೃತ ಮಾಹಿತಿ ನೀಡಬೇಕಿದೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್​ 77 ಸ್ಥಾನ ಗಳಿಸಿತ್ತು, ಆಪ್​​ 20 ಕ್ಷೇತ್ರ ಗೆದ್ದು 2ನೇ ಸ್ಥಾನ ಪಡೆದಿತ್ತು. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿರೋ ಭಗವಂತ್​ ಕೆಲಸಕ್ಕೆ ನಾಯಕರು ಫಿದಾ ಆಗಿದ್ದು, ಇವರನ್ನೇ ಸಿಎಂ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗ್ತಿದೆ.

05. ವಿಮಾನದಲ್ಲಿ ಇರುವೆಗಳು ಪತ್ತೆ, 3 ಗಂಟೆ ತಡವಾಯ್ತು ಫ್ಲೈಟ್​!

blank

ದೆಹಲಿಯಿಂದ ಲಂಡನ್​ಗೆ ಹೋಗಬೇಕಿದ್ದ ಏರ್​ ಇಂಡಿಯಾ ವಿಮಾನ 3 ಗಂಟೆ ತಡವಾಗಿ ಪ್ರಯಾಣಿಸಿದೆ. ಇನ್ನೇನು ಫ್ಲೈಟ್​ ಟೇಕಾಫ್​ ಆಗಬೇಕು ಎನ್ನುವಷ್ಟರಲ್ಲಿ ವಿಮಾನದಲ್ಲಿ ಇರುವೆಗಳು ಕಾಣಿಸಿಕೊಂಡಿವೆ. ಎ1-111 ವಿಮಾನದ ಬ್ಯುಸಿನೆಸ್ ಕ್ಲಾಸ್​ನಲ್ಲಿ ಇರುವೆ ಕಾಣಿಸಿಕೊಳ್ತಿದ್ದಂತೆ ಪ್ರಯಾಣಿಗರು ಕಿರುಚಾಡಿದ್ದಾರೆ. ಕೊನೆಗೆ ಸಿಬ್ಬಂದಿ ಇರುವೆಗಳನ್ನ ತೆರವುಗೊಳಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಹೋಗಬೇಕಿದ್ದ ವಿಮಾನ ಸಂಜೆ 5.20ಕ್ಕೆ ಟೇಕಾಪ್​ ಆಗಿದೆ. ಇದರಿಂದ ವಿಮಾನ ಪ್ರಯಾಣಕ್ಕೆ ಸುಮಾರು 3 ಗಂಟೆ ತಡವಾಗಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.

06. ಹರಿಯಾಣದ ಕರ್​ನಾಲ್​ನಲ್ಲಿ ಇಂಟರ್ನೆಟ್ ಸ್ಥಗಿತ

ರೈತರ ಮಹಾ ಪಂಚಾಯತ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹರಿಯಾಣದ ಕರ್‌ನಾಲ್‌ನಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ತಪ್ಪು ಮಾಹಿತಿ ಮತ್ತು ಊಹಾಪೋಹಗಳು ಹರಡುವುದನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಅಂತ ಹರಿಯಾಣ ಸರ್ಕಾರ ಹೇಳಿದೆ. ಕರ್‌ನಾಲ್‌ನಲ್ಲಿ ರೈತರು ಮಹಾಪಂಚಾಯತ್ ಆಯೋಜಿಸಲಾಗಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು. ಇದನ್ನ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತರು ವಾರ್ನಿಂಗ್ ನೀಡಿದ್ರು,..

07. ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಬಿಡಲ್ಲ

ಅಫ್ಘಾನಿಸ್ತಾನ ಆಂತರಿಕ ವಿಚಾರದಲ್ಲಿ ಯಾರಿಗೂ ಮೂಗು ತೂರಿಸಲು ಬಿಡಲ್ಲ ಎಂದು ತಾಲಿಬಾನ್ ಮುಖ್ಯಸ್ಥ ಮುಲ್ಲಾ ಅಬ್ದುಲ್ಲಾ ಬರಾದರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪಾಕಿಸ್ತಾನ, ಚೀನಾ ಸೇರಿ ಹಲವು ದೇಶಗಳಿಗೆ ತಾಲಿಬಾನಿಗಳು ಪರೋಕ್ಷ ವಾರ್ನಿಂಗ್ ನೀಡಿದೆ. ಇದರ ನಡುವೆ ಸರ್ಕಾರ ರಚನೆ ಕಾರ್ಯಕ್ರಮದಲ್ಲಿ ಪಾಕಿಸ್ತಾನ​, ಚೀನಾ, ಟರ್ಕಿ, ಕತಾರ್​, ಇರಾನ್ ಮತ್ತು ರಷ್ಯಾ ಸೇರಿ ಹಲವು ದೇಶಗಳಿಗೆ ತಾಲಿಬಾನ್​​ ಆಹ್ವಾನ ನೀಡಿದೆ. ಮತ್ತೊಂದ್ಕೆಡೆ ಕಳೆದ ರಾತ್ರಿ ಅಫ್ಗಾನ್​​​ ರಾಜಧಾನಿ ಕಾಬೂಲ್​ಗೆ ಐಎಸ್​ಐ ಮುಖ್ಯಸ್ಥ ಫೈಜ್​ ಹಮೀದ್​ ಆಗಮಿಸಿದ್ದು, ತಾಲಿಬಾನಿಗಳ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.

08. ಡೆಪ್ಸಾಂಗ್​​​​​​ನಲ್ಲಿ ಮತ್ತೊಂದು ಸೇನಾ ಶಿಬಿರ ನಿರ್ಮಿಸಿದ ಚೀನಾ

blank

ಗಡಿಯಲ್ಲಿ ಚೀನಾ ಮತ್ತೆ ಕ್ಯಾತೆ ಆರಂಭಿಸಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಡೆಪ್‌ಸಾಂಗ್​​ನ ವಿವಾದಿತ ಪ್ರದೇಶದಲ್ಲಿ ಮತ್ತೆ ಕಾಮಗಾರಿಯನ್ನ ಮುಂದುವರಿಸಿದ್ದು, ಹೆಚ್ಚುವರಿ ಸೇನಾ ಶಿಬಿರಗಳನ್ನು ನಿರ್ಮಿಸುತ್ತಿದೆ. ಚೀನಾ ಒಂಡೆದೆ ಶಾಂತಿ ಮಂತ್ರ ಜಪಿಸುತ್ತಾ ಮತ್ತೊಂದಡೆ ಗಡಿಯಲ್ಲಿ ಹೆಚ್ಚುವರಿ ಸೇನಾ ಶಿಬಿರ ನಿರ್ಮಿಸುತ್ತಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಡೆಪ್ಸಾಂಗ್ ಪ್ರದೇಶದಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಎಲ್ಲಾ ಬೆಳವಣಿಗೆಗಳಿಂದ ಎಲ್​​ಎಸಿ ಉದ್ದಕ್ಕೂ ಭಾರತ ಸೇನೆಯನ್ನು ಅಲರ್ಟ್​ನಲ್ಲಿರಿಸಿದೆ.

09. ಟೆಸ್ಟ್​​ನಲ್ಲಿ ಬೂಮ್ರಾ ಮ್ಯಾಜಿಕ್, ಜಡೇಜಾ ದಾಖಲೆ!

blank

ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 100 ವಿಕೆಟ್​ ತೆಗೆದ ಆಟಗಾರರ ಪಟ್ಟಿಗೆ ಜಸ್ಪ್ರೀತ್ ಬೂಬ್ರಾ ಸೇರ್ಪಡೆಯಾಗಿದ್ದಾರೆ. 24 ಟೆಸ್ಟ್​ ಪಂದ್ಯದಲ್ಲಿ ಬೂಮ್ರಾ 100 ವಿಕೆಟ್ ಕಿತ್ತ 8ನೇ ಆಟಗಾರ ಎಂಬ ಖ್ಯಾತಿ ಪಡೆದಿದ್ದು, ಕಪಿಲ್ ದೇವ್ ರಿಕಾರ್ಡ್​ ಮುರಿದಿದ್ದಾರೆ, ಮತ್ತೊಂದ್ಕಡೆ 4ನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಲ್​​ರೌಂಡರ್​ ಜಡೇಜಾ ಹೊಸ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ 50 ವಿಕೆಟ್​ ತೆಗೆದ ಪಟ್ಟಿಗೆ ಜಡೇಜಾ ಸೇರ್ಪಡೆಯಾಗಿದ್ದಾರೆ.

10. ಷಣ್ಮೂಕಾ ಪ್ರಿಯಾಗೆ ಆಫರ್​ ಕೊಟ್ಟ ದೇವರಕೊಂಡ

ವಿಜಯ್ ದೇವರಕೊಂಡ ಅಭಿನಯದ ಲೀಗರ್​ ಸಿನಿಮಾದಲ್ಲಿ ಇಂಡಿಯನ್​ ಐಡಿಯಲ್ ಖ್ಯಾತಿಗೆ ಯುವತಿ ಹಾಡಲಿದ್ದಾರೆ. ಇಂಡಿಯನ್​ ಐಡಿಯಲ್ ಮೂಲಕ ಪ್ರಸಿದ್ಧ ಪಡೆದಿದ್ದ ಷಣ್ಮೂಕಾ ಪ್ರಿಯಾ ಧ್ವನಿಗೆ ವಿಜಯ್​ ಫಿದಾ ಆಗಿದ್ದರು. ನಂತ್ರ ಬಿಡುವಿನ ಸಮಯದಲ್ಲಿ ಷಣ್ಮೂಕಾ ಪ್ರಿಯಾಗೆ ಭೇಟಿಯಾಗಿ ಗಿಫ್ಟ್​ ನೀಡಿದ್ರು. ಈ ವೇಳೆ ತಮ್ಮ ಲೀಗರ್ ಚಿತ್ರದಲ್ಲಿ ಹಾಡಲು ಷಣ್ಮೂಕಾ ಪ್ರಿಯಾಗೆ ಆಫರ್ ಕೊಟ್ಟಿದ್ದಾರೆ. ಲೀಗರ್ ಚಿತ್ರಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್​​ ಹೇಳಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆ.

Source: newsfirstlive.com Source link