ಗೆಲುವಿನ ಸಂಭ್ರಮದಲ್ಲಿರೋ ಟೀಮ್ ಇಂಡಿಯಾಕ್ಕೆ ಇಂಜುರಿ ಆಘಾತ

ಗೆಲುವಿನ ಸಂಭ್ರಮದಲ್ಲಿರೋ ಟೀಮ್ ಇಂಡಿಯಾಕ್ಕೆ ಇಂಜುರಿ ಆಘಾತ

ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನದಿಂದ, ಒಂದಿಲ್ಲೊಂದು ಸಂಕಷ್ಟ ಎದುರಿಸ್ತಿರುವ ಟೀಮ್ ಇಂಡಿಯಾಕ್ಕೆ ಇದೀಗ ಮತ್ತೊಂದು ಅಘಾತ ಎದುರಾಗಿದೆ. ಹೆಡ್​​ ಕೋಚ್ ರವಿ ಶಾಸ್ತ್ರಿ ಆ್ತಂಡ್​ ಟೀಮ್​​ ಕೊರೊನಾಗೆ ತುತ್ತಾದ ಬೆನ್ನಲ್ಲೇ, ಸೆಂಚೂರಿ ಸ್ಟಾರ್​ ರೋಹಿತ್ ಶರ್ಮಾ, ಪೂಜಾರ ಇಂಜುರಿಗೆ ತುತ್ತಾಗಿದ್ದಾರೆ. ಇದು ಟೀಮ್ ಇಂಡಿಯಾವನ್ನ ಚಿಂತೆ ಗೀಡುಮಾಡಿದೆ.

ಹೌದು..! ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್​​ನಲ್ಲಿ ಶತಕ ಸಿಡಿಸಿದ್ದ ಸ್ಟಾರ್ ಓಪನರ್ ರೋಹಿತ್ ಶರ್ಮಾ, ಮೊಣಕಾಲಿನ ಇಂಜುರಿಗೆ ತುತ್ತಾಗಿದ್ರೆ, ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರಾಗೆ ಪಾದದ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ನಾಲ್ಕನೇ ಹಾಗೂ 5ನೇ ದಿನದಾಟ ರೋಹಿತ್, ಪೂಜಾರ ಫೀಲ್ಡಿಂಗ್​ನಿಂದ ಅಂತರ ಕಾಯ್ದುಕೊಳ್ಳಬೇಕಾಯ್ತು. ಆದ್ರೆ 5ನೇ ಟೆಸ್ಟ್​ಗೂ ಮುನ್ನ ಈ ಇಬ್ಬರು ಆಟಗಾರರ ಇಂಜುರಿಗೆ ತುತ್ತಾಗಿರೋದು ಟೀಮ್ ಇಂಡಿಯಾಕ್ಕೆ ಭಾರೀ ಹಿನ್ನಡೆಯನ್ನ ಉಂಟುಮಾಡಿದೆ.

blank

ಇಂಜುರಿ ನಡುವೆ ಬ್ಯಾಟಿಂಗ್ ನಡೆಸಿದ್ದ ರೋಹಿತ್​-ಪೂಜಾರ..!
4ನೇ ಟೆಸ್ಟ್​ ಮೇಲೆ ಟೀಮ್ ಇಂಡಿಯಾ ಪ್ರಾಬಲ್ಯ ಸಾಧಿಸಲು ಪ್ರಮುಖ ಕಾರಣ, ರೋಹಿತ್ ಶರ್ಮಾ, ಪೂಜಾರರ 123 ರನ್​ಗಳ ಜೊತೆಯಾಟ.. ಆದ್ರೆ, ಈ ಜೊತೆಯಾಟದಲ್ಲಿ ಪೂಜಾರ ಇಂಜರಿ ನಡುವೆಯೂ ಇನ್ನಿಂಗ್ಸ್​ ಕಟ್ಟಿದ್ದರು. 17 ರನ್​ಗಳಿಸಿದ್ದಾಗ ಓವರ್​ಟನ್ ಓವರ್​​ನಲ್ಲಿ ಇಂಜುರಿಗೊಳಗಾಗಿದ್ದ ಪೂಜಾರ, ಅದೇ ನೋವಿನಲ್ಲೇ ಬ್ಯಾಟಿಂಗ್ ನಡೆಸಿದರು. ಅಷ್ಟೇ ಅಲ್ಲ..! ರೋಹಿತ್ ಕೂಡ ಮೊಣಕಾಲಿನ ಇಂಜುರಿ ನೋವಿನಲ್ಲೇ ಬ್ಯಾಟ್ ಬೀಸಿದ್ದರು. ಆದ್ರೆ ಸದ್ಯ ಇವರಿಬ್ಬರ ಇಂಜುರಿ ಮೇಲೆ ಬಿಸಿಸಿಐ ವೈದ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ.

blank

5ನೇ ಟೆಸ್ಟ್ ಪಂದ್ಯವಾಡುವ ಬಗ್ಗೆ ಇಲ್ಲ ಖಚಿತತೆ?
ಸದ್ಯ ಉಭಯ ಆಟಗಾರರನ್ನ ಸ್ಕ್ಯಾನಿಂಗ್​ಗೆ ಒಳಪಡಿಸಿರುವ ಬಿಸಿಸಿಐ, ಆಟಗಾರರಿಗೆ ವಿಶ್ರಾಂತಿ ಸೂಚಿಸಿದೆ. ಆದ್ರೆ ಮೂರು ದಿನಗಳ ಅಂತರದಲ್ಲೇ ಟೀಮ್ ಇಂಡಿಯಾ, ಮ್ಯಾನ್​ಚೆಸ್ಟರ್​ನಲ್ಲಿ ನಡೆಯಲಿರುವ 5ನೇ ಟೆಸ್ಟ್​ಗೆ ಸಜ್ಜಾಗುತ್ತಿದೆ. ಈ ನಡುವೆ ಇಂಜುರಿಗೆ ಒಳಗಾಗಿರುವ ಈ ಇಬ್ಬರು ಸ್ಟಾರ್ ಆಟಗಾರರು ಲಭ್ಯವಾಗುವ ಬಗ್ಗೆ, ಖಚಿತ ಮಾಹಿತಿ ಇಲ್ಲ.. ಇದು ಟೀಮ್ ಇಂಡಿಯಾವನ್ನ ಆತಂಕಕ್ಕೆ ದೂಡಿದೆ. ಆದ್ರಲ್ಲೂ ಇನ್​ಫಾರ್ಮ್​ ಬ್ಯಾಟ್ಸ್​ಮನ್​ಗಳ ಇಂಜುರಿ ಬಹುದೊಡ್ಡ ಹೊಡೆತವನ್ನೇ ನೀಡಿದ್ದು, ಇವರು ಅಲಭ್ಯರಾದರೆ ಯಾರನ್ನ ಆಡಿಸೋದು ಎಂಬ ತಲೆನೋವನ್ನ ಸೃಷ್ಟಿಸಿದೆ.

Source: newsfirstlive.com Source link