ಕೋಲಾರಕ್ಕೆ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕ; ತೋಟಗಾರಿಕಾ ಸಚಿವರ ಭೇಟಿಯಾದ ಶಶಿಕುಮಾರ್

ಕೋಲಾರಕ್ಕೆ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕ; ತೋಟಗಾರಿಕಾ ಸಚಿವರ ಭೇಟಿಯಾದ ಶಶಿಕುಮಾರ್

ಕೋಲಾರ: ಬಿಗ್​ಬಾಸ್ ಖ್ಯಾತಿಯ ಶಶಿಕುಮಾರ್ ಅವರು ನಿನ್ನೆ ತೋಟಗಾರಿಕಾ ಸಚಿವ ಮುನಿರತ್ನ ಅವರನ್ನ ಭೇಟಿಯಾಗಿದ್ದರು. ಈ ವೇಳೆ ಕೋಲಾರ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪನೆ ಮಾಡುವಂತೆ ಶಶಿಕುಮಾರ್​, ಸಚಿವರ ಬಳಿ ಒತ್ತಾಯಿಸಿದ್ದಾರೆ.

ಮುನಿರತ್ನ ಅವರನ್ನ ಭೇಟಿ ಬಳಿಕ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಶಿಶಿಕುಮಾರ್​.. ತೋಟಗಾರಿಕೆ ಸಚಿವರಾದ ಮುನಿರತ್ನ ಅವರನ್ನ ಭೇಟಿಯಾದೆ. ಜಿಲ್ಲೆಗೆ ಕೃಷಿ ಬೆಳೆಗಳಿಗೆ ಸಂಸ್ಕರಣಾ ಘಟಕ ತರುವ ಸಂಬಂಧ ಸಚಿವರಲ್ಲಿ ಚರ್ಚೆ ಮಾಡಿದೆ. ಇದರಿಂದ ರೈತರಿಗೆ ತುಂಬಾ ಅನುಕೂಲ ಆಗಲಿದೆ. ಬೆಳೆದ ಕೃಷಿ ಉತ್ಪನ್ನಗಳನ್ನ ರಸ್ತೆಯಲ್ಲಿ ಎಸೆಯುವುದನ್ನ ತಪ್ಪಿಸಲು ಸಹಾಯ ಆಗಲಿದೆ ಎಂದಿದ್ದಾರೆ.

Source: newsfirstlive.com Source link