ಬೆಂಗಳೂರು: ಅಂಗವಿಕಲ ವ್ಯಕ್ತಿಯನ್ನು ಬಲಿ ಪಡೆದ ರಸ್ತೆ ಗುಂಡಿ

ಬೆಂಗಳೂರು: ಅಂಗವಿಕಲ ವ್ಯಕ್ತಿಯನ್ನು ಬಲಿ ಪಡೆದ ರಸ್ತೆ ಗುಂಡಿ

ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಂಗವಿಕಲ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಮಂಗನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಜಯನಗರ ನಿವಾಸಿ ಖುರ್ಷಿದ್ ಅಹಮ್ಮದ್ (60) ಸಾವನ್ನಪ್ಪಿದ ಬೈಕ್ ಸವಾರರಾಗಿದ್ದು, ರಸ್ತೆಯಲ್ಲಿನ ಗುಂಡಿ ತಪ್ಪಿಸಲೋಗಿ ಬೈಕ್ ನಿಂದ ನೆಲಕ್ಕೆ ಉರುಳಿ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಆ ವೇಳೆಗಾಗಲೇ ಖುರ್ಷಿದ್ ಸಾವನ್ನಪ್ಪದ್ದರು ಎಂಬ ಮಾಹಿತಿ ಮಾಹಿತಿ ಲಭ್ಯವಾಗಿದೆ.

ನಿನ್ನೆ ರಾತ್ರಿ 8:30ರ ಸುಮಾರಿಗೆ ಘಟನೆ ನಡೆದಿದ್ದು, ಅಂಗವಿಕಲರಾಗಿರುವ ಖುರ್ಷಿದ್ ಅಹಮ್ಮದ್ ತ್ರಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಸದ್ಯ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Source: newsfirstlive.com Source link