ಪಂಜ್​ಶೀರ್​ನಲ್ಲಿ ನಿಲ್ಲದ ಕದನ; ತಾಲಿಬಾನಿಗಳ ಟಾರ್ಗೆಟ್ ಮಾಡಿದ ಅಪರಿಚಿತ ಸೇನಾ ವಿಮಾನ..!

ಪಂಜ್​ಶೀರ್​ನಲ್ಲಿ ನಿಲ್ಲದ ಕದನ; ತಾಲಿಬಾನಿಗಳ ಟಾರ್ಗೆಟ್ ಮಾಡಿದ ಅಪರಿಚಿತ ಸೇನಾ ವಿಮಾನ..!

ಅಫ್ಘಾನಿಸ್ತಾನದ ಪಂಜ್​ಶೀರ ಪ್ರಾಂತ್ಯದಲ್ಲಿ ಮತ್ತೆ ಯುದ್ಧದ ಲಕ್ಷಣಗಳು ಗೋಚರವಾಗಿದ್ದು, ಇದೀಗ ಅನ್ಐಡೆಂಟಿಫೈಡ್ ಮಿಲಿಟರಿ ವಿಮಾನಗಳು ಹಾರಾಟ ನಡೆಸಿವೆ ಅಂತಾ ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

ಪಂಜ್​ಶೀರ್​ ವ್ಯಾಲಿ ನಮ್ಮದಾಗಿದೆ ಎಂದು ತಾಲಿಬಾನಿಗಳು ನಿನ್ನೆ ಘೋಷಣೆ ಮಾಡಿದ್ದಾರೆ. ಆದರೆ ಇದನ್ನ ಅಲ್ಲಿನ ಸ್ಥಳೀಯ ಸೇನೆ ಅದನ್ನ ಒಪ್ಪಲು ಇನ್ನೂ ಸಿದ್ಧವಿಲ್ಲ. ಇದರ ಮಧ್ಯೆ ಪಂಜ್​​ಶೀರ್​​ನಲ್ಲಿರುವ ತಾಲಿಬಾನಿಗಳನ್ನ ಗುರಿಯಾಗಿಸಿಕೊಂಡು ಅಪರಿಚಿತ ಸೇನಾ ವಿಮಾನಗಳು ಹಾರಾಟ ನಡೆಸಿವೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಪಾಕ್​ನ ನರಿಬುದ್ಧಿ ಬೆತ್ತಲು ಮಾಡಿದ ಇರಾನ್; ತಾಲಿಬಾನಿಗಳಿಗೆ ಸಹಾಯ ಮಾಡಿದ್ದಕ್ಕೆ ಇಲ್ಲಿದೆ ಸಾಕ್ಷಿ

ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಯಾರಿಗೂ ಬಿಡಲ್ಲ
ಮತ್ತೊಂದು ಕಡೆ ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಪಾಕ್​, ಚೀನಾ ಸೇರಿ ಹಲವು ದೇಶಗಳಿಗೆ ತಾಲಿಬಾನಿಗಳು ಆಹ್ವಾನ ನೀಡಿದ್ದಾರೆ. ಇದ್ರ ನಡುವೆ ಆತಂರಿಕ ವಿಚಾರದಲ್ಲಿ ಮೂಗು ತೂರಿಸಲು ಯಾರಿಗೂ ಬಿಡಲ್ಲ ಎಂದು ತಾಲಿಬಾನಿಗಳು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಉಗ್ರರ ರೂಪದಲ್ಲಿರೋ ತಾಲಿಬಾನಿಗಳು ನೆತ್ತರು ಹರಿಸಲಿದ್ದಾರೆ. ಹೆಣ್ಣು ಮಕ್ಕಳು ಮುಖ ತೋರಿಸುವಂತಿಲ್ಲ, ಪುರುಷರ ಜೊತೆ ಮಾತನಾಡುವಂತಿಲ್ಲ. ಹೆಜ್ಜೆ ಹೆಜ್ಜೆಗೂ ಹೊಸ ಹೊಸ ರೂಲ್ಸ್.. ಇಷ್ಟೇ ಯಾಕೆ, ಉಗ್ರರ ಜೊತೆ ನಿಕಟ ಸಂಬಂಧ ಹೊಂದಿರೋ ತಾಲಿಬಾನಿಗಳ ಅಸಲಿ ಮುಖ ಒಂದೊಂದಾಗಿ ಅನಾವರಣಗೊಳ್ಳುತ್ತಿದೆ.

ಪಾಕ್​ ಸೇರಿ ವಿವಿಧ ದೇಶಗಳಿಗೆ ತಾಲಿಬಾನಿಗಳ ಸ್ಪಷ್ಟ ಸಂದೇಶ
ಸರ್ಕಾರ ರಚನೆಗೆ ತಯಾರಿ ನಡೆಸ್ತಿರೋ ತಾಲಿಬಾನಿಗಳು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ತಮ್ಮ ಆಡಳಿತದ ಆಂತರಿಕ ವಿಚಾರದಲ್ಲಿ ಯಾರಿಗೂ ಮೂಗು ತೂರಿಸಲು ಬಿಡಲ್ಲ ಎಂದು ತಾಲಿಬಾನ್ ಮುಖ್ಯಸ್ಥ ಮುಲ್ಲಾ ಅಬ್ದುಲ್ಲಾ ಬರಾದರ್​ ವಾರ್ನಿಂಗ್​ ನೀಡಿದ್ದಾರೆ. ಪಾಕಿಸ್ತಾನ, ಚೀನಾ ಸೇರಿ ಹಲವು ದೇಶಗಳಿಗೆ ತಾಲಿಬಾನಿಗಳು ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ನನ್ನ ರಕ್ತದ ಕೊನೆಯ ಹನಿ ಇರೋವರೆಗೂ ತಾಲಿಬಾನಿಗಳ ವಿರುದ್ಧ ಹೋರಾಟ ನಿಲ್ಲಲ್ಲ- ಮಸೂದ್ ಪ್ರತಿಜ್ಞೆ

ಅಂದಹಾಗೇ ತಮ್ಮ ಲಾಭಕ್ಕಾಗಿ ಪಾಕಿಸ್ತಾನ, ಚೀನಾ ತಾಲಿಬಾನಿಗಳಿಗೆ ಸಹಾಯ ಮಾಡ್ತಿದೆ. ಸರ್ಕಾರ ರಚನೆ, ಆಡಳಿತ ನಡೆಸಲು ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿಕೊಂಡಿದೆ. ಜೊತೆಗೆ ಉಗ್ರ ಸಂಘಟನೆಗಳಾದ ಅಲ್​ಖೈದಾ, ಜೈಷ್​ ಎ ಮೊಹ್ಮದ್​ ಕೂಡ ಸಪೋರ್ಟ್​ ಮಾಡ್ತಿದೆ. ಹೀಗಾಗಿ ತಾಲಿಬಾನಿಗಳು ಈ ಸಂದೇಶ ನೀಡಿದ್ದಾರೆ ಎನ್ನಲಾಗ್ತಿದೆ.

ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಹಲವು ದೇಶಗಳಿಗೆ ಅಹ್ವಾನ
ಪಾಕಿಸ್ತಾನ​, ಚೀನಾ, ಟರ್ಕಿ, ರಷ್ಯಾಗೆ ತಾಲಿಬಾನಿಗಳ ಇನ್ವೈಟ್ ​

ಎಲ್ಲವೂ ಅಂದುಕೊಂಡಂತೆಯಾದ್ರೆ ಮುಂದಿನ ವಾರವೇ ಅಫ್ಘಾನ್​​ನಲ್ಲಿ ತಾಲಿಬಾನಿಗಳು ಸರ್ಕಾರ ರಚನೆ ಮಾಡಲಿದ್ದಾರೆ. ತಾಲಿಬಾನ್ ಮುಖ್ಯಸ್ಥ ಮುಲ್ಲಾ ಅಬ್ದುಲ್ಲಾ ಬರಾದರ್​ ನೇತೃತ್ವದ ಸರ್ಕಾರ ರಚನೆ ಕಾರ್ಯಕ್ರಮದಲ್ಲಿ ಹಲವು ದೇಶಗಳಿಗೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನ​, ಚೀನಾ, ಟರ್ಕಿ, ಕತಾರ್​, ಇರಾನ್​​, ರಷ್ಯಾ ಸೇರಿ ಹಲವು ದೇಶಗಳಿಗೆ ತಾಲಿಬಾನಿಗಳು ಆಹ್ವಾನ ನೀಡಿದ್ದಾರೆ..

ಕಾಬೂಲ್​ಗೆ ಆಗಮಿಸಿದ ಐಎಸ್​​ಐ ಮುಖ್ಯಸ್ಥ ಫೈಜ್​ ಹಮೀದ್​
ಈ ನಡುವೆ ಅಫ್ಗಾನ್​​​ ರಾಜಧಾನಿ ಕಾಬೂಲ್​ಗೆ ಐಎಸ್​ಐ ಮುಖ್ಯಸ್ಥ ಫೈಜ್​ ಹಮೀದ್​ ಆಗಮಿಸಿದ್ದಾರೆ. ಸರ್ಕಾರ ರಚನೆಗೆ ತಯಾರಿ ನಡೆಸ್ತಿರೋ ತಾಲಿಬಾನಿಗಳಿಗೆ ಪಾಕ್​ ಅಧಿಕೃತವಾಗಿ ಸಹಾಯ ಮಾಡ್ತೇವೆ ಎಂದಿತ್ತು, ಇದರ ಬೆನ್ನಲ್ಲೇ ಕಳೆದ ರಾತ್ರಿ ಐಎಸ್​​ಐ ಮುಖ್ಯಸ್ಥ ಫೈಜ್​ ಹಮೀದ್​, ತಾಲಿಬಾನಿಗಳ ಮುಖಂಡರಿಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪಾಕ್​​ನಿಂದ ಪಂಜ್​ಶೀರ್​ ಮೇಲಿನ ದಾಳಿ ಖಂಡಿಸಿದ ಇರಾನ್​
ಇನ್ನು ಅಫ್ಘಾನಿಸ್ತಾನದಲ್ಲಿ ಪಂಜ್​ಶೀರ್ ಪ್ರಾಂತ್ಯದ​ ಮೇಲೆ ತಾಲಿಬಾನ್​ ನಡೆಸಿದ ದಾಳಿಯನ್ನ ಇರಾನ್​ ತೀವ್ರವಾಗಿ ಖಂಡಿಸಿದೆ. ಪಂಜ್​ಶೀರ್​ ಪ್ರತಿರೋಧ ಪಡೆ ಮೇಲಾದ ಹಲ್ಲೆಯನ್ನ ನಾವು ತೀವ್ರವಾಗಿ ಕಂಡಿಸುತ್ತೇವೆ ಅಂತಾ ಇರಾನ್​ನ ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್​ ಹೇಳಿದ್ದಾರೆ. ಅಲ್ಲದೆ ಅಫ್ಘಾನ್​ ಜನರ ನೋವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಹೊಸ ಸರ್ಕಾರ ರಚನೆಯಲ್ಲಿ ಇರಾನ್​ ಕೆಲಸ ಮಾಡಲಿದೆ ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ವಿಧಿವಶರಾಗೋ ಮೊದಲೇ ರೆಡಿಯಾಗಿದೆ ಬ್ರಿಟನ್ ರಾಣಿಯ ಅಂತ್ಯಸಂಸ್ಕಾರದ ಪ್ಲಾನ್

ಈ ನಡುವೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಎಲ್ಲಾ ಹಕ್ಕುಗಳನ್ನು ನೀಡಲಾಗುತ್ತೆ ಅಂತಾ ತಾಲಿಬಾನ್​ ಭರವಸೆ ನೀಡಿದ್ದರು, ಆದ್ರೆ ಯಾವುದೇ ಬದಲಾವಣೆ ಕಾಣುತ್ತಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಬರುವ ವಿದ್ಯಾರ್ಥಿನಿಯರು ಖಡ್ಡಾಯವಾಗಿ ಬುರ್ಕಾ ಧರಿಸುವಂತೆ ಆದೇಶಿಸಲಾಗಿದೆ. ಅಲ್ಲದೆ ಸ್ಥಳೀಯ ಕಾಲೇಜುವೊಂದರಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸಿ ತರಗತಿ ನಡೆಸಲಾಗ್ತಿದೆ. ಈ ಮೂಲಕ ತಾಲಿಬಾನಿಗಳ ಆಡಳಿತ ಶುರುವಾಗ್ತಿದ್ದಂತೆ ಜನರ ಹಕ್ಕನ್ನ ಕಸಿದುಕೊಳ್ತಿರೋದು ಸ್ಪಷ್ಟವಾಗಿ ಗೋಚರವಾಗ್ತಿದೆ.

ಇದನ್ನೂ ಓದಿ: ಆಫ್ಘನ್ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಮುಂದಾದ ಚೀನಾ.. ಡ್ರ್ಯಾಗನ್​ನ ನರಿ ಬುದ್ಧಿ ಬಗ್ಗೆ ಇಲ್ಲಿದೆ ಡೀಟೇಲ್ಸ್

ಸ್ಥಳೀಯ ಸುದ್ದಿ ವರದಿಗಳ ಪ್ರಕಾರ, ಅಫ್ಘಾನಿಸ್ತಾನದ ಪಂಜ್‌ಶಿರ್ ಪ್ರಾಂತ್ಯದ ಮೇಲೆ ತಾಲಿಬಾನ್ ಸಂಪೂರ್ಣ ವಿಜಯ ಸಾಧಿಸಿದ ನಂತರ, ಗುರುತಿಸಲಾಗದ ಸೇನಾ ವಿಮಾನಗಳು ಉಗ್ರಗಾಮಿ ಗುಂಪಿನ ಸ್ಥಾನಗಳನ್ನು ಗುರಿಯಾಗಿಸಿಕೊಂಡವು.

ಇದನ್ನೂ ಓದಿ: ಮಕ್ಕಳ ಮುಂದೆಯೇ ಗರ್ಭಿಣಿ ಪೊಲೀಸ್​ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನಿಗಳು

Source: newsfirstlive.com Source link