ಪಾಲಿಕೆ ಫೈಟ್​​ನಲ್ಲಿ ಗೆದ್ದಾಯ್ತು.. ಇನ್ನೇನಿದ್ರೂ ಸಿಎಂ ಬೊಮ್ಮಾಯಿಗೆ ಬೈ-ಎಲೆಕ್ಷನ್​​ ಸವಾಲು..!

ಪಾಲಿಕೆ ಫೈಟ್​​ನಲ್ಲಿ ಗೆದ್ದಾಯ್ತು.. ಇನ್ನೇನಿದ್ರೂ ಸಿಎಂ ಬೊಮ್ಮಾಯಿಗೆ ಬೈ-ಎಲೆಕ್ಷನ್​​ ಸವಾಲು..!

ಪಾಲಿಕೆ ಮೆಗಾ ಫೈಟ್​​ನಲ್ಲಿ ಕೇಸರಿ ಕಮಾಲ್​​ ಮಾಡಿದೆ. ನಗರ ಗೆದ್ದಾಗಿದೆ ಶೀಘ್ರವೇ ಎದುರಾಗಲಿದೆ ಉಪ ಚುನಾವಣೆ ಬರ್ತಿದೆ. ಹಳ್ಳಿಗರ ಮನ ಗೆಲ್ಲುವ ಸತ್ವ ಪರೀಕ್ಷೆ ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ಎದುರಾಗಿದೆ. ಸಿಂದಗಿ-ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಗೆಲ್ಲಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೀತಿದೆ.

ನಗರ ಗೆದ್ದಾಯ್ತು, ಈಗ ಉಪ ಕದನದಲ್ಲಿ ಹಳ್ಳಿಗರ ಮನ ಗೆಲ್ಲಬೇಕು!
ರಾಜ್ಯದ ಮೂರೂ ಮಹಾನಗರ ಪಾಲಿಕೆಗಳಲ್ಲಿ ಕೇಸರಿ ಧ್ವಜ ರಾರಾಜಿಸಿದೆ. ನಗರದ ಜನರ ಮನಸ್ಸನ್ನ ಬಿಜೆಪಿ ಗೆದ್ದಾಗಿದೆ. ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ಇದು ದೊಡ್ಡ ಗೆಲುವು ಅಂತಾನೆ ಹೇಳಲಾಗ್ತಿದೆ. ಆದ್ರೆ ಇಷ್ಟಕ್ಕೇ ಬೊಮ್ಮಾಯಿ ಬೀಗುವಂತಿಲ್ಲ. ಈಗ ಹಳ್ಳಿಗರ ಮನ ಗೆಲ್ಲುವ ಸವಾಲು ಎದುರಾಗಿದೆ. ಶೀಘ್ರವೇ ಸಿಂದಗಿ – ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ಎದುರಾಗಲಿದೆ. ಅದು ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ಸತ್ವ ಪರೀಕ್ಷೆಯಾಗಿದೆ.

blank

ಪಾಲಿಕೆ ಮೆಗಾ ಫೈಟ್​​ ಬಳಿಕ ಉಪ-ಕದನಕ್ಕೆ ಕೇಸರಿ ಪಾಳಯ ಸದ್ದಿಲ್ಲದೆ ಸಿದ್ಧತೆ ನಡೆಸ್ತಿದೆ. ಉಪ-ಚುನಾವಣೆ ಮೇಲೆ ಬಿಜೆಪಿ ನಾಯಕರು ಕಣ್ಣಿಟ್ಟಿದ್ದು, ಸಿಂದಗಿ – ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ಗೆದ್ದು ಸಾಮರ್ಥ್ಯ ಸಾಬೀತುಪಡಿಸಲು ಬೊಮ್ಮಾಯಿ ತಂತ್ರ ರೂಪಿಸ್ತಿದ್ದಾರೆ.

ಬೈ-ಎಲೆಕ್ಷನ್​​ ಸವಾಲು!

  • ರಾಜ್ಯದ 2 ಕ್ಷೇತ್ರಗಳಿಗೆ ಶೀಘ್ರದಲ್ಲೇ ದಿನಾಂಕ ಘೋಷಣೆ
  • ಸಿಂದಗಿ, ಹಾನಗಲ್ ಕ್ಷೇತ್ರಕ್ಕೆ ದಿನಾಂಕ ಪ್ರಕಟವಾಗಬೇಕಿದೆ
  • ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಿಂದ ಕುತೂಹಲ
  • ಸಾಮರ್ಥ್ಯ ಸಾಬೀತು ಪಡಿಸಲು ಬೊಮ್ಮಾಯಿಗೆ ಸವಾಲು
  • ಉಪ-ಚುನಾವಣೆ ಸಮರ್ಥವಾಗಿ ಎದುರಿಸಲು ಪ್ಲಾನ್​​​​

ಪಾಲಿಕೆಯಲ್ಲಿ ಕೇಸರಿ ಕಮಾಲ್​​​​​​​​ ಮಾಡಿದ್ರೂ ಅದೇ ಚುನಾವಣೆಗೆ ದಿಕ್ಸೂಚಿ ಅಂತ ಬೀಗುವ ಹಾಗಿಲ್ಲ. ನಗರದ ಮತದಾರರಿಗೂ ಹಳ್ಳಿ ಮತದಾರರಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಷ್ಟೇ ಅಲ್ಲದೆ ಹಲವು ಫ್ಯಾಕ್ಟರ್​​ಗಳು ಇಲ್ಲಿ ಕನ್ಸಿಡರ್ ಆಗುತ್ತೆ. ಹೀಗಾಗಿ ಸಿಂದಗಿ, ಹಾನಗಲ್ ಉಪ-ಚುನಾವಣೆ ಸಿಎಂ ನಾಯಕತ್ವಕ್ಕೆ ಅಗ್ನಿ ಪರೀಕ್ಷೆಯಾಗಿದೆ.

ಸಿಎಂ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ!
ತಂತ್ರ 1 : ಸದ್ಯ ಮೂರು ಪಾಲಿಕೆಗಳ ಫಲಿತಾಂಶ ಹೊರಬಿದ್ದಿದೆ
ತಂತ್ರ 2 : ಈ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ
ತಂತ್ರ 3 : ಪಾಲಿಕೆಯ ಚುನಾವಣೆ ಗೆದ್ದು, ಗದ್ದುಗೆ ಹಿಡಿದ ಹಾಗಲ್ಲ
ತಂತ್ರ 4 : ವಿಧಾನಸಭಾ ಉಪ-ಕದನ ಗೆಲ್ಲುವುದೇ ಸತ್ವ ಪರೀಕ್ಷೆ
ತಂತ್ರ 5 : ಹಾನಗಲ್​​ ಕಣ ತಮ್ಮ ತವರು ಹಾವೇರಿ ಜಿಲ್ಲೆಯ ಕ್ಷೇತ್ರ
ತಂತ್ರ 6 : ‘ರಾಜಕೀಯ ಗುರು’ ಉದಾಸಿಗೆ ಗೌರವ ಅರ್ಪಿಸಬೇಕು
ತಂತ್ರ 7 : ಉಪ-ಕದನ ಗೆದ್ದರಷ್ಟೆ ತಮ್ಮ ಮೇಲೆ ವರಿಷ್ಠರ ವಿಶ್ವಾಸ
ತಂತ್ರ 8 : ಈ ಸ್ಥಾನಗಳು ಗಟ್ಟಿ ಮಾಡಿಕೊಂಡರೆ ಭವಿಷ್ಯ ಸಲೀಸು
ತಂತ್ರ 9 : ಪಕ್ಷದೊಳಗಿನ ಎದುರಾಳಿಗಳಿಗೂ ಸಂದೇಶ ರವಾನೆ

ಸದ್ಯ ಮೂರು ಪಾಲಿಕೆಗಳ ಫಲಿತಾಂಶ ಹೊರಬಿದ್ದಿದೆ. ಈ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ. ಪಾಲಿಕೆಯ ಚುನಾವಣೆ ಗೆದ್ದು, ಗದ್ದುಗೆ ಹಿಡಿದ ಹಾಗಲ್ಲ ಮುಂಬರುವ ಚುನಾವಣೆ. ಹೀಗಾಗಿ ವಿಧಾನಸಭಾ ಉಪ-ಕದನ ಗೆಲ್ಲುವುದೇ ದೊಡ್ಡ ಸತ್ವ ಪರೀಕ್ಷೆ. ಹಾನಗಲ್​​ ಕಣ ತಮ್ಮ ತವರು ಹಾವೇರಿ ಜಿಲ್ಲೆಯ ಕ್ಷೇತ್ರವಾಗಿದೆ. ಅಲ್ಲಿ ‘ರಾಜಕೀಯ ಗುರು’ ಉದಾಸಿಗೆ ಗೌರವ ಅರ್ಪಿಸಬೇಕು. ಉಪ-ಕದನ ಗೆದ್ದರಷ್ಟೇ ತಮ್ಮ ಮೇಲೆ ವರಿಷ್ಠರ ವಿಶ್ವಾಸ ಉಳಿಯುತ್ತದೆ. ಈ ಸ್ಥಾನಗಳು ಗಟ್ಟಿ ಮಾಡಿಕೊಂಡರೆ ಭವಿಷ್ಯ ಸಲೀಸು ಹಾಗೂ ಪಕ್ಷದೊಳಗಿನ ಎದುರಾಳಿಗಳಿಗೂ ಸಂದೇಶ ರವಾನಿಸಬಹುದು ಅನ್ನೋದು ಸಿಎಂ ಬೊಮ್ಮಾಯಿ ಲೆಕ್ಕಾಚಾರ.
ಒಟ್ಟಿನಲ್ಲಿ ಪಾಲಿಕೆ ಮೆಗಾ ಫೈಟ್​​​ನಲ್ಲಿ ಗೆದ್ದಿರುವ ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ಉಪ-ಕದನ ಸವಾಲಿನ ಸತ್ವ ಪರೀಕ್ಷೆಯಾಗಿದೆ. ಹೀಗಾಗಿ ಉಪ-ಚುನಾವಣೆ ಮೇಲೆ ಕಣ್ಣಿಟ್ಟಿರುವ ಬೊಮ್ಮಾಯಿ ಸಾಮರ್ಥ್ಯ ಸಾಬೀತುಪಡಿಸಲು ತಂತ್ರ ಹೆಣೆಯುತ್ತಿದ್ದಾರೆ.

Source: newsfirstlive.com Source link