ಚೀಸ್, ಚೆರ್ರಿ, ಡ್ರೈ ಫ್ರೂಟ್ಸ್‌ನಿಂದ ತುಂಬಿದ ದಿಲ್ ಖುಷ್ ದೋಸೆ – ವೀಡಿಯೋ ವೈರಲ್

ವಿವಿಧ ಖಾದ್ಯಗಳಲ್ಲಿ ದೋಸೆ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ದೋಸೆ ಪ್ರಿಯರಿಗೆ ಹಲವಾರು ವಿಧವಾದ ದೋಸೆ ಸವಿಯಲು ಸಿಗುತ್ತದೆ. ದೋಸೆಗಳಲ್ಲಿ ಮಸಾಲ ದೋಸೆ, ಸೆಟ್ ದೋಸೆ, ಖಾಲಿ ದೋಸೆ, ಚೀಸ್ ದೋಸೆ, ಪಿಜ್ಜಾ ದೋಸೆ ಹೀಗೆ ಹಲವಾರು ದೋಸೆಗಳನ್ನು ಕೇಳಿದ್ದೇವೆ ಸದ್ಯ ದಿಲ್ ಖುಷ್ ದೋಸೆ ಎಂಬ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ದೋಸೆಯ ವಿಶೇಷತೆ ಎಂದರೆ ಇದರಲ್ಲಿ ಚೀಸ್, ಚೆರ್ರಿ, ಡ್ರೈ ಫ್ರೂಟ್ಸ್ ಹಾಗೂ ತರಕಾರಿ ಪದಾರ್ಥಗಳನ್ನು ತುಂಬಿಸಲಾಗಿದೆ. 59 ಸೆಕೆಂಡ್ ಇರುವ ಈ ವೀಡಿಯೋವನ್ನು ದೀಪಕ್ ಪ್ರಭು ಎಂಬವರು  ಟ್ವೀಟ​ರ್‌​ನಲ್ಲಿ ಪೋಸ್ಟ್ ಮಾಡಿದ್ದು, ಬೀದಿ ಬದಿಯಲ್ಲಿ ವ್ಯಕ್ತಿಯೊಬ್ಬರು ದೋಸೆಯನ್ನು ತಯಾರಿಸುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

dil kush dose

ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ತವಾದ ಮೇಲೆ ದೋಸೆ ಹಿಟ್ಟನ್ನು ಹುಯ್ದು, ಅದರ ಮೇಲೆ ಬೆಣ್ಣೆಯನ್ನು ಸವರುತ್ತಾರೆ. ನಂತರ ಕತ್ತರಿಸಿದ್ದ ಈರುಳ್ಳಿ, ಎಲೆಕೋಸು, ದಪ್ಪ ಮೆಣಸಿನಕಾಯಿ ಮತ್ತು ಕೆಲವು ತೆಂಗಿನ ಚಟ್ನಿಯನ್ನು ದೋಸೆ ಸುತ್ತಲೂ ಹಾಕಿ. ಬಳಿಕ ಅದರ ಮೇಲೆ ತುರಿದ ಪನ್ನೀರ್ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿ ಸೇರಿದಂತೆ ಒಂದಷ್ಟು ಡೈಫ್ರೂಟ್‍ನನ್ನು ಉದುರಿಸುತ್ತಾರೆ. ಜೊತೆಗೆ ಸ್ವಲ್ಪ ಜೀರಾ ಹಾಗೂ ಗರಂ ಮಸಾಲ ಪೌಡರ್‌ನನ್ನು ಹಾಕಿ ದೋಸೆಯನ್ನು ಬೇಯಿಸಿ ಅದನ್ನು ರೋಲ್ ಮಾಡಿ ನಾಲ್ಕು ಭಾಗಗಳಾಗಿ ಕಟ್ ಮಾಡುತ್ತಾರೆ. ಇದನ್ನೂ ಓದಿ: ಚಾಕ್ಲೆಟ್, ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳ ಸ್ವಾಗತಿಸಿದ ಬಿ.ಸಿ ನಾಗೇಶ್

ಕೊನೆಗೆ ದೋಸೆಯನ್ನು ಪ್ಲೇಟ್ ಮೇಲೆ ಹಾಕಿ ಚೀಸ್, ಕೊತ್ತಂಬರಿ ಸೊಪ್ಪು ಹಾಗೂ ಚೆರ್ರಿಯನ್ನು ಸಿಂಪಡಿಸಿ ಅಲಂಕರಿಸುವುದನ್ನು ನೋಡಬಹುದಾಗಿದೆ. ಇಲ್ಲಿಯವರೆಗೂ ಈ ವೀಡಿಯೋವನ್ನು 121 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವಾರು ಕಾಮೆಂಟ್‍ಗಳು ಹರಿದು ಬಂದಿದೆ.

Source: publictv.in Source link