14 ದಿನ ಕ್ವಾರಂಟೀನ್​ನಲ್ಲಿ ರವಿ ಶಾಸ್ತ್ರಿ.. ಕೋಚ್ ಅಲಭ್ಯತೆಯಲ್ಲಿ ವಿರಾಟ್​ ಪಡೆಗೆ ಎದುರಾದ ಸವಾಲೇನು?

14 ದಿನ ಕ್ವಾರಂಟೀನ್​ನಲ್ಲಿ ರವಿ ಶಾಸ್ತ್ರಿ.. ಕೋಚ್ ಅಲಭ್ಯತೆಯಲ್ಲಿ ವಿರಾಟ್​ ಪಡೆಗೆ ಎದುರಾದ ಸವಾಲೇನು?

ಟೀಮ್ ಇಂಡಿಯಾದ ಯಶಸ್ವಿ ಕೋಚ್​ಗೆ ಕೆನ್ನಿಂಗ್ಟನ್ ಓವಲ್​​​ ಟೆಸ್ಟ್​ ಕೊನೆ ಟೆಸ್ಟ್ ಪಂದ್ಯವಾಗ್ತಿದೆ..? ಸರಣಿಯಲ್ಲಿ ಇನ್ನೊಂದು ಪಂದ್ಯ ಉಳಿದರೂ, ಕೋಚ್ ಸ್ಥಾನವನ್ನ ಮತ್ತೊಬ್ಬರಿಗೆ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಷ್ಟೇ ಅಲ್ಲ..! ಕೋಚ್ ಅನುಪಸ್ಥಿತಿಯಲ್ಲಿ ಬಿಗ್ ಚಾಲೆಂಜ್ ಕೂಡ ಎದುರಾಗಿದೆ.

ಒಂದೆಡೆ ಇಂಜುರಿ ಆತಂಕ ಟೀಮ್ ಇಂಡಿಯಾಕ್ಕೆ ಕಾಡ್ತಿದ್ರೆ. ಇನ್ನೊಂದೆಡೆ ಮಹಾಮಾರಿ ಕೊರೊನಾ ಬರೆ ಎಳೆದಿದೆ. ಹೀಗಾಗಿ ಶಾಸ್ತ್ರಿ ಆ್ಯಂಡ್ ಟೀಮ್​, 14 ದಿನಗಳ ಐಸೋಲೆಷನ್​​ಗೆ ಒಳಪಟ್ಟಿದೆ. ಹೀಗಾಗಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್​​ ತಂಡದ ಉಸ್ತುವಾರಿ ನೋಡಿಕೊಳ್ಳಬೇಕಿದೆ. ಅಷ್ಟೇ ಅಲ್ಲ! ಹೆಡ್​​ ಕೋಚ್ ​​ರೇಸ್​ನಲ್ಲಿರೋ ರಾಥೋರ್​ಗೆ, ಸಾಮರ್ಥ್ಯ ಪ್ರದರ್ಶಿಸುವ ವೇದಿಕೆಯಾಗಿ ಮಾರ್ಪಟ್ಟಿದೆ. ಆದ್ರೆ, ಹೆಡ್​​ ಕೋಚ್​​ ರವಿ ಶಾಸ್ತ್ರಿಗೆ, ಕೆನ್ನಿಂಗ್ಟನ್ ಓವಲ್​​ನ 4ನೇ ಟೆಸ್ಟ್​ ಪಂದ್ಯವೇ ಕೊನೆಯ ಟೆಸ್ಟ್ ಆಗಿ ಬದಲಾಗಿದೆ.

ಹೌದು..! ಟಿ20 ವಿಶ್ವಪಕ್​ ಬಳಿಕ ರವಿ ಶಾಸ್ತ್ರಿ ನಿರ್ಗಮನ ಖಾಯಂ ಆಗಿದೆ. ರವಿ ಶಾಸ್ತ್ರಿಯ ಪಾಲಿಗೆ ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಕೊನೆಯ ಸರಣಿಯೂ ಆಗಿತ್ತು. ಆದ್ರೆ ಕಿಲ್ಲರ್ ಕೊರೊನಾ ಇನ್ನೊಂದು ಪಂದ್ಯ ಉಳಿದಂತೆ ರವಿ ಶಾಸ್ತ್ರಿ, ಸೇವೆಯನ್ನ ಕಸಿದುಕೊಂಡಿದೆ.

blank

ಕೋಚ್​ ಶಾಸ್ತ್ರಿ ಅಲಭ್ಯತೆ ಟೀಮ್ ಇಂಡಿಯಾಕ್ಕೆ ಒತ್ತಡ..!
ಮುಂದಿನ ಟೆಸ್ಟ್​ ಪಂದ್ಯಕ್ಕೆ ಹೆಡ್​ ಕೋಚ್ ಶಾಸ್ತ್ರಿ ಸೇವೆ, ಟೀಮ್ ಇಂಡಿಯಾಕ್ಕೆ ಲಭಿಸಲ್ಲ.. ಇದು ಟೀಮ್ ಇಂಡಿಯಾ ಮೇಲೆ ಭಾರೀ ಪ್ರಮಾಣದ ಪರಿಣಾಮವನ್ನೇ ಬೀರಲಿದೆ. ಯಾಕಂದ್ರೆ ಈಗಾಗಲೇ ಸರಣಿಯ 4 ಪಂದ್ಯಗಳು ಮುಕ್ತಾಯಗೊಂಡಿದ್ದು, 5ನೇ ಪಂದ್ಯ ಟೀಮ್ ಇಂಡಿಯಾಕ್ಕೆ ಮಹತ್ವದ್ದಾಗಿದೆ. ಆದ್ರೆ ಈ ವೇಳೆಯೇ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಪಿಜಿಯೋ ನಿತಿನ್ ಸೇವೆಯೂ ಲಭಿಸಿಲ್ಲ. ಇದು ಆಟಗಾರರನ್ನ ಒತ್ತಡಕ್ಕೆ ಸಿಲುಕಿಸಲಿದೆ. ಅಷ್ಟೇ ಅಲ್ಲ.. ಮುಂದಿನ ಪಂದ್ಯದ ಮೇಲೂ ಪರಿಣಾಮ ಬೀರಲಿದೆ ಅಂತಾನೇ ವಿಶ್ಲೇಸಿಷಲಾಗ್ತಿದೆ.

blank

ಟೀಮ್ ಇಂಡಿಯಾಕ್ಕೆ ಕಾಡಲಿದೆಯಾ ಶಾಸ್ತ್ರಿ ಸೇವೆ..?
2017ರಿಂದ ಹೆಡ್​ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಶಾಸ್ತ್ರಿ, ಇದೇ ಮೊದಲ ಬಾರಿಗೆ ತಂಡದ ಸೇವೆಗೆ ಲಭ್ಯರಾಗ್ತಿಲ್ಲ. ಇದು ಟೀಮ್ ಇಂಡಿಯಾಕ್ಕೆ ಬಹುವಾಗಿ ಕಾಡಲಿದೆ. ಅದ್ರಲ್ಲೂ ಕ್ಯಾಪ್ಟನ್ ಕೊಹ್ಲಿಗೆ ಶಾಸ್ತ್ರಿ ಗೈರಿನಲ್ಲಿ ಆಡೋದು, ಬಿಗ್ ಚಾಲೆಂಜ್ ಆಗಿದೆ. ಸಂಕಷ್ಟದಲ್ಲಿದ್ದಾಗ ವಿರಾಟ್​ ಬೆನ್ನಿಗೆ ನಿಲ್ಲುವ ಶಾಸ್ತ್ರಿ, ಗೇಮ್​ಪ್ಲಾನ್ ಸ್ಟ್ರಾಟರ್ಜಿ ಮೂಲಕ ಎದುರಾಳಿ ಹೆಣೆಯಲು ನೆರವಾಗ್ತಿದ್ದರು. ಇದರ ಜೊತೆಗೆ ಆಟಗಾರರು ಡೌನ್​ಫಾಲ್​​ ಆದಾಗ, ಅದ್ಬುತ ವಾಕ್​ಚಾತುರ್ಯದಿಂದ ಕಾನ್ಫಿಡೆನ್ಸ್​ ಲೆವೆಲ್ ಹೆಚ್ಚಿಸುತ್ತಿದ್ದರು. ಆ ಮೂಲಕ ಸಂಕಷ್ಟದಲ್ಲಿ ಪುಟಿದೇಳುವಂತೆ ಮಾಡುತ್ತಿದ್ದರು. ಹೀಗಾಗಿ ಅಂತಿಮ ಪಂದ್ಯಕ್ಕೆ ಶಾಸ್ತ್ರಿಯ ಅನುಪಸ್ಥಿತಿ ಬಹುವಾಗೇ ಕಾಡಲಿದೆ. ಇದನ್ನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಒಪ್ಪಿಕೊಂಡಿದ್ದಾರೆ.

ನಿಜವಾಗಿಯೂ ನಾವು ಬಹಳ ಮಿಸ್ ಆಗಲಿದ್ದೇವೆ. ರವಿ ಭಾಯ್​, ಅರುಣ್​​​ ಆ್ಯಂಡ್ ಶ್ರೀಧರ್ ತಂಡದ ಪ್ರಮುಖ ಭಾಗವಾಗಿದ್ದಾರೆ. ತಂಡದ ಯಶಸ್ವಿನಲ್ಲಿ ಐದಾರು ವರ್ಷದಿಂದ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರಿಲ್ಲದ ಕಾರಣ ಬೆಳಗ್ಗೆ ಸ್ವಲ್ಪ ವಿಚಲಿತರಾಗಿದ್ದೆವು.

ವಿಕ್ರಮ್ ರಾಥೋರ್​, ಬ್ಯಾಟಿಂಗ್ ಕೋಚ್

ಶಾಸ್ತ್ರಿ ಅನುಪಸ್ಥಿತಿ ತಂಡಕ್ಕೆ ಕಾಡಿದರೂ, ಮತ್ತೊಂದೆಡೆ ಕೋಚ್​ಗಳ ಅನುಪಸ್ಥಿಯಲ್ಲೂ ಅತ್ಯುತ್ತಮ ಆಟ ಪ್ರದರ್ಶಿಸಲು, ಟೀಮ್ ಇಂಡಿಯಾಕ್ಕೆ ಸಕಾಲವೂ ಆಗಿದೆ. ಅಷ್ಟೇ ಅಲ್ಲ.. ಹೆಡ್​​ ಕೋಚ್ ರೇಸ್​ನಲ್ಲಿರುವ ವಿಕ್ರಮ್​ ರಾಥೋರ್​​ಗೂ, ತಾವೇನು ಅನ್ನೋದನ್ನ ಅಂತಿಮ ಟೆಸ್ಟ್​ನಲ್ಲಿ ಪ್ರೂವ್ ಮಾಡಲು ಇದೇ ಸರಿಯಾದ ಸಮಯವೂ ಆಗಿದೆ ಅನ್ನೋದನ್ನ ಮರೆಯುವಂತಿಲ್ಲ.

blank

Source: newsfirstlive.com Source link