Newsfirst Impact: ಡ್ರೈವರ್ ಮೂಲಕ ಲಂಚದ ಹಣ ಪಡೆದಿದ್ದ ಎಸಿ ಸೀಮಾ ಮ್ಯಾಗಿ ತಲೆತಂಡ

Newsfirst Impact: ಡ್ರೈವರ್ ಮೂಲಕ ಲಂಚದ ಹಣ ಪಡೆದಿದ್ದ ಎಸಿ ಸೀಮಾ ಮ್ಯಾಗಿ ತಲೆತಂಡ

ಬೆಂಗಳೂರು: ಡ್ರೈವರ್ ಮೂಲಕ ಲಂಚದ ಹಣ ಪಡೆದಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಸೀಮಾ ಕೆ. ಮ್ಯಾಗಿ ಅವರನ್ನು ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ.

ಸೀಮಾ ಕೆ. ಮ್ಯಾಗಿ ಅವರು ತನ್ನ ಏಜೆಂಟ್ ಶಿವಕುಮಾರ್ ಜೊತೆ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಹಫ್ತಾ ವಸೂಲಿ ಮಾಡುತ್ತಿದ್ದ ಬಗ್ಗೆ ವಿಡಿಯೋ ದೃಶ್ಯಗಳ ಸಮೇತ ವರದಿ ಮಾಡಿದ್ದ ನ್ಯೂಸ್ ಫಸ್ಟ್, ಅಧಿಕಾರಿಯ ಅಸಲಿ ಮುಖವನ್ನು ಬೆಳಕಿಗೆ ತಂದಿತ್ತು.

blank

ಸಾಮಾಜಿಕ ಕಾರ್ಯಕರ್ತ ಪಿಳ್ಳಪ್ಪ ಅವರು ಭ್ರಷ್ಟ ಅಧಿಕಾರಿಯ ವಿರುದ್ಧ ದೂರು ಎಸಿಬಿಯಲ್ಲಿ ದೂರು ಕೂಡ ದಾಖಲಿಸಿದ್ದರು. ಏಜೆಂಟ್​​ ಅಲ್ಲದೇ ತನ್ನ ಡ್ರೈವರ್ ಮೂಲಕ ಸೀಮಾ ಅವರು ಹಣ ವಸೂಲಿ ಮಾಡಿದ್ದ ಆರೋಪ ಕೂಡ ಕೇಳಿ ಬಂದಿತ್ತು.

ಈ ಬಗ್ಗೆ ರಹತ್ಯ ಕಾರ್ಯಾಚರಣೆ ಮಾಡಿದ್ದ ನ್ಯೂಸ್​ಫಸ್ಟ್​​​, ಅಧಿಕಾರಿ ತನ್ನ ಏಜೆಂಟ್​ ಜೊತೆ ಹಫ್ತಾ ವಸೂಲಿ ಮಾಡುತ್ತಿದ್ದ ಕುರಿತು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಗರದ ಲಘುಮಮ್ಮ ಏಜೆನ್ಸಿಸ್ ಪೆಟ್ರೋಲ್ ಬಂಕ್​​ನಲ್ಲಿ ಅಧಿಕಾರಿ ಹಫ್ತಾ ವಸೂಲಿ ಮಾಡಿದ್ದರು. ಅಲ್ಲದೇ ಪೆಟ್ರೋಲ್ ಹಾಕುವುದರಲ್ಲಿ ಟ್ಯಾಂಪರಿಂಗ್​ ಮಾಡೋಕೆ ಅವಕಾಶ ನೀಡೋದಾಗಿ ಒಪ್ಪಿಗೆ ಕೊಟ್ಟಿದ್ದು ಕೂಡ ದಾಖಲಾಗಿತ್ತು.

blank

ಸೀಮಾ ತಾವು ಪಡೆದ ಲಂಚದ ವ್ಯವಹಾರವನ್ನು ಒಂದು ಡೈರಿಯಲ್ಲಿ ಮೆಂಟೇನ್ ಮಾಡುತ್ತಿದ್ದರು. ಅವರ ಚಾಳಕ ಒಂದು ಡೈರಿಯಲ್ಲಿ ಹಣ ನೀಡಿದ್ದಾಗಿ ಪೆಟ್ರೋಲ್ ಬಂಕ್ ನವರ ಸಹಿ ಮತ್ತು ಸೀಲ್ ಕೂಡ ಪಡೆದುಕೊಳ್ಳುತ್ತಿದ್ದ. ಈ ವೇಳೆ ಸೀಮಾ ಅವರಿಗೆ ಬ್ರೋಕರ್ ಶಿವಕುಮಾರ್ ಕೂಡ ಸಾಥ್ ಕೊಟ್ಟಿದ್ದ. ತನ್ನನ್ನ ತಾನು ಇಲಾಖೆಯ ಇನ್ಸ್​​ಪೆಕ್ಟರ್ ಅಂತಾ ಹೇಳಿಕೊಳ್ಳುತ್ತಿದ್ದ ಆತ.. ಹಫ್ತಾ ವಸೂಲಿ ಮಾಡಲು ಸಹಕಾರ ನೀಡುತ್ತಿದ್ದ.

ಅಂದಹಾಗೇ 2019ರಲ್ಲಿಯೇ ಬ್ರೋಕರ್​​ ಶಿವಕುಮಾರ್​​​ನನ್ನು ಎಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅಲ್ಲದೇ ಲಕ್ಷಾಂತರ ರೂಪಾಯಿ ಲಂಚದ ಹಣ ಕೂಡ ಸೀಜ್ ಮಾಡಿದ್ದರು.

blank

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸೀಮಾ ಕೆ. ಮ್ಯಾಗಿಗೆ ಇಲಾಖೆ ನೋಟಿಸ್​ ಜಾರಿ ಮಾಡಿ ಉತ್ತರಿಸಲು ಹೇಳಿತ್ತು. ಆದರೆ ನೋಟಿಸ್​ ಸರಿಯಾಗಿ ಉತ್ತರ‌ ನೀಡಲು ಸೀಮಾ ವಿಫಲರಾಗಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 1966 ರ ಸೆಕ್ಷನ್ 10(ಡಿ) ಅಡಿಯಲ್ಲಿ ಅಮಾನತು ಮಾಡಿ ಇಲಾಖೆ ಆದೇಶ ನೀಡಿದ್ದು, ಸೀಮಾ ಮ್ಯಾಗಿ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶ ನೀಡಲಾಗಿದೆ. ಆದೇಶದಲ್ಲಿ ಮೇಲಾಧಿಕಾರಿಗಳ ಅನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link