ಕೊಳ್ಳೇಗಾಲ ನಗರಸಭೆಯ 7 ಬಿಎಸ್​ಪಿ ಸದಸ್ಯರು ಅನರ್ಹ -ಜಿಲ್ಲಾಧಿಕಾರಿ ಆದೇಶ

ಕೊಳ್ಳೇಗಾಲ ನಗರಸಭೆಯ 7 ಬಿಎಸ್​ಪಿ ಸದಸ್ಯರು ಅನರ್ಹ -ಜಿಲ್ಲಾಧಿಕಾರಿ ಆದೇಶ

ರಾಮನಗರ: ಕೊಳ್ಳೇಗಾಲ ನಗರಸಭೆಯ 7 ಬಿಎಸ್​ಪಿ ಸದಸ್ಯರ ಸದಸ್ಯತ್ವವನ್ನ ಜಿಲ್ಲಾಧಿಕಾರಿ ನ್ಯಾಯಾಲಯವು ರದ್ದು ಮಾಡಿ ಆದೇಶ ಹೊರಿಡಿಸಿದೆ.

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಆರೋಪವನ್ನ ಬಿಎಸ್​ಪಿ ಸದಸ್ಯರು ಹೊತ್ತಿದ್ದರು. 2020ರ ಅಕ್ಟೋಬರ್ 29ರಂದು ಚುನಾವಣೆ ನಡೆದಿತ್ತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಬಿಎಸ್​ಪಿ ಬಂಡಾಯ ಅಭ್ಯರ್ಥಿಯಾಗಿ ಗಂಗಮ್ಮ ಸ್ಪರ್ಧಿಸಿದ್ದರು.

blank

ಇತ್ತ ಪಕ್ಷದ ಅಭ್ಯರ್ಥಿ ಜಯಮೇರಿಗೆ ಮತಚಲಾಯಿಸುವಂತೆ ಬಿಎಸ್​ಪಿ ಜಿಲ್ಲಾಧ್ಯಕ್ಷರು ವಿಪ್ ಜಾರಿಗೊಳಿಸಿದ್ದರು. ಆದರೆ ವಿಪ್ ಉಲ್ಲಂಘಿಸಿ ಬಂಡಾಯ ಅಭ್ಯರ್ಥಿಗೆ ಇವರೆಲ್ಲ ಮತ ಚಲಾಯಿಸಿದ್ದರು. ನಂತರ ಗಂಗಮ್ಮ ಬಿಜೆಪಿ ಸಹಾಯ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲು ಉಂಟಾಗಿತ್ತು.

ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಬಿಎಎಸ್ಪಿಯ ಜಯಮೇರಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ನಾಗಮಣಿ, ಗಂಗಮ್ಮ, ನಾಸೀರ್ ಪಾಷಾ, ಎನ್ ಪವಿತ್ರ, ಪ್ರಕಾಶ್, ರಾಮಕೃಷ್ಣ, ನಾಗಸುಂದ್ರ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ.

Source: newsfirstlive.com Source link