‘ಐದು ಅಜೆಂಡಾ’ದೊಂದಿಗೆ ಇಂದು ಕಾಂಗ್ರೆಸ್​ ಮಹತ್ವದ ಸಭೆ

‘ಐದು ಅಜೆಂಡಾ’ದೊಂದಿಗೆ ಇಂದು ಕಾಂಗ್ರೆಸ್​ ಮಹತ್ವದ ಸಭೆ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಜೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸೆಪ್ಟೆಂಬರ್ 13 ರಿಂದ ನಡೆಯುವ ಅಧಿವೇಶನ ಹಾಗೂ ಪಾಲಿಕೆ ಚುನಾವಣೆಯಲ್ಲಿ ಉಂಟಾಗಿರುವ ಸೋಲಿನ ಆತ್ಮಾವಲೋಕನ ನಡೆಯಲಿದೆ.

ಇದನ್ನೂ ಓದಿ: ಪಾಲಿಕೆ ಫಲಿತಾಂಶದಿಂದ ಒಳಗೊಳಗೇ ಖುಷಿ ಪಡ್ತಿರೋ ಬೆಳಗಾವಿ ಶಾಸಕರು -‘ಆ’ ಆತಂಕ ದೂರ

ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ದ್ರುವನಾರಾಯಣ ಹಾಗೂ ಸಲೀಂ ಅಹ್ಮದ್ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಇನ್ನು ಈ ಸಭೆಯ ಅಜೆಂಡಾ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಪಾಲಿಕೆ ಫೈಟ್​​ನಲ್ಲಿ ಗೆದ್ದಾಯ್ತು.. ಇನ್ನೇನಿದ್ರೂ ಸಿಎಂ ಬೊಮ್ಮಾಯಿಗೆ ಬೈ-ಎಲೆಕ್ಷನ್​​ ಸವಾಲು..!

ಏನ್ ಅಜೆಂಡಾ..?
ಅಜೆಂಡಾ 1: ಇದೇ 13 ರಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳು, ಮಾಡಬೇಕಾದ ಹೋರಾಟಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯಲಿದೆ.
ಅಜೆಂಡಾ 2: ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದೆ. ಇದ ಬೆನ್ನಲ್ಲೇ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಸೋಲಿಗೆ ಕಾರಣಗಳ ಹುಡುಕುವ ಜೊತೆಗೆ ಆತ್ಮಾವಲೋಕನ ನಡೆಸಲಿದ್ದಾರೆ ಕಾಂಗ್ರೆಸ್​ ನಾಯಕರು.
ಅಜೆಂಡಾ 3: ಈ ಸೋಲಿನ ಬೆನ್ನಲ್ಲೇ ಸದ್ಯದಲ್ಲೇ ಎದುರಾಗಲಿರೋ ಎರಡು ಕ್ಷೇತ್ರಗಳ ಉಪಚುನಾವಣೆ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಮತ್ತು 29 ಕ್ಷೇತ್ರಗಳ ಎಂಎಲ್ಸಿ ಚುನಾವಣೆ ಸೆಣೆಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಯಲಿದೆ.
ಅಜೆಂಡಾ 4: ನ್ಯಾಷನಲ್ ಎಜುಕೇಶನ್ ಪಾಲಿಸಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುತ್ತಿರುವ ವಿಚಾರವನ್ನು ಕಾಂಗ್ರೆಸ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಹಿನ್ನಲೆಯಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ.
ಅಜೆಂಡಾ 5: ಹೊಸ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ನೇತೃತ್ವದಲ್ಲಿ ನಡೆಯಲಿರುವ ಮೊಟ್ಟಮೊದಲ ಅಧಿವೇಶನವಾಗಿರುವ ಹಿನ್ನೆಲೆಯಲ್ಲಿ ಹೊಸ ಸಿಎಂ ಹಾಗೂ ಮಂತ್ರಿ ಮಂಡಲವನ್ನು ಕಟ್ಟಿ ಹಾಕಲು ಕಾರ್ಯತಂತ್ರ ಇಂದಿನ‌‌ ಶಾಸಕಾಂಗ ಪಕ್ಷದ ಸಭೆಯಲ್ಲಿ ರೂಪುಗೊಳ್ಳಲಿದೆ.

ವಿಶೇಷ ವರದಿ ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link