‘ವೀರ ಮದಕರಿ ನಾಯಕ’ ನಾಮಕರಣ ವಿಚಾರ; ಬೆಳಗಾವಿ ಆರ್​ಡಿಪಿ ಸರ್ಕಲ್​ನಲ್ಲಿ ಹೈಡ್ರಾಮಾ

‘ವೀರ ಮದಕರಿ ನಾಯಕ’ ನಾಮಕರಣ ವಿಚಾರ; ಬೆಳಗಾವಿ ಆರ್​ಡಿಪಿ ಸರ್ಕಲ್​ನಲ್ಲಿ ಹೈಡ್ರಾಮಾ

ಬೆಳಗಾವಿ: ಇಲ್ಲಿನ ಆರ್​ಡಿಪಿ ಸರ್ಕಲ್​ಗೆ ರಾತ್ರೋರಾತ್ರಿ ‘ವೀರ ಮದಕರಿ ನಾಯಕ’ ವೃತ್ತ ಎಂದು ಬೋರ್ಡ್​​ ಅಂಟಿಸಿ ಪರಾರಿಯಾದ ಘಟನೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಘ್ನದ ವಾತಾವರಣ ನಿರ್ಮಾಣ ಆಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ವೃತ್ತದಲ್ಲಿ ಹೊಸದಾಗಿ ಹಾಕಿದ್ದ ಬೋರ್ಡ್​ ಅನ್ನ ತೆರವು ಮಾಡಿದ್ದಾರೆ. ಬೋರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಿದ್ದಾರೆ.

blank

ಕಳೆದ ಹಲವು ದಿನಗಳಿಂದ ವೀರಮದಕರಿ ನಾಯಕ ವೃತ್ತ ನಾಮಕರಣಕ್ಮೆ ಬೇಡಿಕೆ ಇತ್ತು. ಜಿಲ್ಲಾಧಿಕಾರಿ ಸೇರಿ ಎಲ್ಲರಿಗೂ ನಾಮಕರಣಕ್ಕೆ ಒಂದು ಸಮುದಾಯ ಮನವಿ ಮಾಡಿತ್ತು ಅಂತಾ ಹೇಳಲಾಗಿದೆ.

Source: newsfirstlive.com Source link