ಟೀಮ್ ಇಂಡಿಯಾ ಆಟಗಾರರ ಕೋವಿಡ್ ಟೆಸ್ಟ್ ವರದಿ ಬಹಿರಂಗ..!

ಟೀಮ್ ಇಂಡಿಯಾ ಆಟಗಾರರ ಕೋವಿಡ್ ಟೆಸ್ಟ್ ವರದಿ ಬಹಿರಂಗ..!

ಕೆನ್ನಿಂಗ್ಟನ್ ಓವಲ್ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿರುವ ಟೀಮ್ ಇಂಡಿಯಾ ಆಟಗಾರರಿಗೆ ಮತ್ತೊಂದು ಗುಡ್​ನ್ಯೂಸ್ ಸಿಕ್ಕಿದೆ. ನೆನ್ನೆ ಟೀಮ್ ಇಂಡಿಯಾ ಆಟಗಾರರನ್ನ ಆರ್​ಟಿ-ಪಿಸಿಆರ್​ ಟೆಸ್ಟ್​ಗೆ ಒಳಪಡಿಸಲಾಗಿದ್ದು, ಕೋವಿಡ್ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ರಿಪೋರ್ಟ್​ ಬಂದಿದೆ. ಇದರೊಂದಿಗೆ ಆತಂಕದಲ್ಲಿದ್ದ ಟೀಮ್ ಇಂಡಿಯಾ ಆಟಗಾರರು, ಇದೀಗ ನಿಟ್ಟುಸಿರು ಬಿಡುವಂತಾಗಿದೆ. 4ನೇ ಟೆಸ್ಟ್​ನ 4ನೇ ದಿನದಾಟದ ಆರಂಭಕ್ಕೂ ಮುನ್ನ ಹೆಡ್ ಕೋಚ್ ರವಿ ಶಾಸ್ತ್ರಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದಾದ ಬಳಿಕ ಶಾಸ್ತ್ರಿ ಸಂಪರ್ಕದಲ್ಲಿದ್ದ ಬೌಲಿಂಗ್ ಕೋಚ್ ಭರತ್ ಅರುಣ್​​​​​​, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್​ರನ್ನ​ ಐಸೋಲೆಷನ್​ಗೆ ಒಳಪಡಿಸಿ ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿತ್ತು.

ಈ ವೇಳೆ ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿತ್ತು. ಇದರಿಂದಾಗಿ ಆತಂಕಗೊಂಡು ಟೀಮ್ ಇಂಡಿಯಾ ಆಟಗಾರರನ್ನ, ಆರ್​​ಟಿ-ಪಿಸಿಆರ್ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ವರದಿ ಹೊರಬಿದ್ದಿದ್ದು ತಂಡದ ಎಲ್ಲಾ ಆಟಗಾರರಿಗೂ ನೆಗೆಟಿವ್ ಬಂದಿದೆ. ಇದರಿಂದಾಗಿ ತಂಡದಲ್ಲಿ ಉಂಟಾಗಿದ್ದ ಗೊಂದಲ, ಆತಂಕ ದೂರವಾಗಿದೆ.

Source: newsfirstlive.com Source link