ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಲು ಶಾಸಕ ರೇಣುಕಾಚಾರ್ಯ ಕುಟುಂಬದಿಂದ ವಿಶೇಷ ಪೂಜೆ

ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಲು ಶಾಸಕ ರೇಣುಕಾಚಾರ್ಯ ಕುಟುಂಬದಿಂದ ವಿಶೇಷ ಪೂಜೆ

ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಕುಟುಂಬದಿಂದ ಪೂಜೆ ನೆರವೇರಿಸಲಾಗಿದೆ.

ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿಕೋವಿ ಗ್ರಾಮದ ಗುಳ್ಳಮ್ಮ ದೇವಿಗೆ ಕುಟುಂಬ ಸಮೇತರಾಗಿ ಶಾಸಕ ರೇಣುಕಾಚಾರ್ಯ ಅವರು ವಿಶೇಷ ಪೂಜೆ ನೆರವೇರಿಸಿದ್ದು, ಈ ವೇಳೆ ರಾಜಕೀಯವಾಗಿ ರೇಣುಕಾಚಾರ್ಯ ಅವರು ಉನ್ನತ ಸ್ಥಾನಕ್ಕೇರಲಿ ಅಂತ ಗೋವಿಕೋವಿಗೆ ಕುಟುಂಬಸ್ಥರು ಬೇಡಿಕೊಂಡಿದ್ದರಂತೆ.

blank

ಶ್ರಾವಣ ಮಾಸದ ಗೌರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬಂದು ವಿಶೇಷ ಪೂಜೆ ನೆರವೇರಸಲಾಗಿದೆ. ಕಳೆದ ಸಚಿವ ಸಂಪುಟದಲ್ಲಿ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನಲೆ ಹಾಗೂ ಶಾಸಕರ ಆಯುಷ್ಯ, ಆರೋಗ್ಯ, ರಾಜಕೀಯದಲ್ಲಿ ಉನ್ನತವಾಗಿ ಬೆಳೆಯಲು ವಿಶೇಷ ಪೂಜೆ ನೆರವೇರಿಸದ್ದರಂತೆ. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿ ಭೇಟಿ ನೀಡಿದ್ದು, ಉಳಿದ 4 ಸಚಿವ ಸ್ಥಾನದಲ್ಲಿ ಈಗಾಗಲೇ ಸಚಿವ ಪಡೆಯಲು ರೇಣುಕಾಚಾರ್ಯ ಅವರ ಕಸರತ್ತು ನಡೆಸಿದ್ದಾರೆ.

blank

Source: newsfirstlive.com Source link