ನಿತ್ಯಾ ರಾಮ್ ತವರಿಗೆ ವಾಪಸ್​.. ಥ್ರಿಲ್​ ಆದ ರಚ್ಚು..!

ನಿತ್ಯಾ ರಾಮ್ ತವರಿಗೆ ವಾಪಸ್​.. ಥ್ರಿಲ್​ ಆದ ರಚ್ಚು..!

ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವಿನ್​ ರಚಿತಾ ರಾಮ್ ಅವರಿಗೆ ಅವರ ಪ್ರೀತಿಯ ಅಕ್ಕ ನಿತ್ಯಾ ರಾಮ್​ ಅಂದ್ರೆ ಅಚ್ಚುಮೆಚ್ಚು. ಇನ್ನು ರಚ್ಚು ಅಕ್ಕ ನಿತ್ಯಾ ಕಿರುತೆರೆ ಲೋಕದಲ್ಲಿ ಟಾಪ್​ ನಟಿಯಾಗಿದ್ದರು. ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿದ ನಂದಿನಿ ಧಾರಾವಾಹಿ ಮೂಲಕ ನಿತ್ಯಾ ಎಲ್ಲರ ಮನೆ ಮಾತ್ತಾಗಿದ್ದರು. ಆದ್ರೆ 2019 ಡಿಸೆಂಬರ್​ನಲ್ಲಿ ನಿತ್ಯಾ ರಾಮ್, ಗೌತಮ್ ಎಂಬುವರನ್ನು ಮದುವೆ ಆಗಿ ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳಿ ಪತಿಯೊಂದಿಗೆ ಆಸ್ಟ್ರೇಲಿಯಾಗೆ ಹೋಗುತ್ತಾರೆ.

ಇದೀಗ ಸುಮಾರು ಒಂದೂವರೆ ವರ್ಷದ ಬಳಿಕ ನಿತ್ಯಾ ಮತ್ತೆ ತಮ್ಮ ತವರಿಗೆ ಆಗಮಿಸಿದ್ದಾರೆ. ಇನ್ನು ಈ ಖುಷಿಯಲ್ಲಿರುವ ರಚ್ಚು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಕ್ಕನ ಜೊತೆ ಡ್ಯಾನ್ಸ್​ ಮಾಡಿರುವ ವಿಡಿಯೋವೊಂದನ್ನು ಹಂಚಿಕೊಂಡು.. “ನಾನು ಎಷ್ಟೋಂದು ಥ್ರಿಲ್​ ಆಗಿದ್ದೇನೆ ಅಂತಾ ನಾನೇ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ .. ವೆಲಕಮ್​ ಬ್ಯಾಕ್”​ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link