‘ಸ್ನೇಹರ್ಷಿ’ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ಸ್​ ವಿರುದ್ಧ ಬಿತ್ತು ಕೇಸ್..!

‘ಸ್ನೇಹರ್ಷಿ’ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ಸ್​ ವಿರುದ್ಧ ಬಿತ್ತು ಕೇಸ್..!

ಬೆಂಗಳೂರು: ಪ್ರೊಡಕ್ಷನ್ ಮ್ಯಾನೇಜರ್​​ಗಳಾದ ಚಂದನ್ ಕುಮಾರ್ ಹಾಗೂ ಹನುಮಂತೇಶ್ ವಿರುದ್ಧ ನಟ ನಿರ್ದೇಶಕ ಕಿರಣ್ ನಾರಾಯಣ್ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಿರಣ್ ನಾರಾಯಣ್, ‘ಸ್ನೇಹರ್ಷಿ’ ಕನ್ನಡ ಸಿನಿಮಾದ ನಾಯಕನಟ ನಿರ್ದೇಶಕ ಹಾಗೂ ಸಹನಿರ್ಮಾಪಕ ಆಗಿದ್ದಾರೆ. ಲಕ್ಷ್ಮಿಬೆಟೆರಾಯ ಕಂಬೈನ್ಸ್ ಅಡಿಯಲ್ಲಿ ಸ್ನೇಹರ್ಷಿ ಸಿನಿಮಾ ನಿರ್ಮಾಣಕ್ಕೆ ಕಿರಣ್ ನಾರಾಯಣ್ ಮುಂದಾಗಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಸ್ನೇಹರ್ಷಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

blank
ಕಿರಣ್ ನಾರಾಯಣ್

ಇದೀಗ ಪ್ರೊಡಕ್ಷನ್ ಮ್ಯಾನೇಜರ್​ಗಳಾದ ಚಂದನ್ ಕುಮಾರ್ ಹಾಗೂ ಹನುಮಂತೇಶ್ ವಿರುದ್ಧ ಕಳ್ಳತನ ಹಾಗೂ ಹಣ ದುರ್ಬಳಕೆ ಆರೋಪ ಮೇಲೆ ದೂರು ದಾಖಲಿಸಲಾಗಿದೆ. ಸಹಿ ಹಾಕಿರುವ ಚೆಕ್​ಗಳನ್ನ ದುರ್ಬಳಕೆ ಮಾಡಿಕೊಂಡು ಬ್ಯಾಂಕ್​ನಿಂದ ಹಣ ಪಡೆದಿದ್ದಾರೆ. ಜಯನಗರದ ಫೆಡರಲ್ ಬ್ಯಾಂಕ್​​ನಿಂದ ಆರ್​ಟಿಜಿಎಸ್ ಮೂಲಕ 5 ಲಕ್ಷ ಹಣವನ್ನ ಡ್ರಾ ಮಾಡಿದ್ದಾರೆ. ಸಿನಿಮಾ ದಾಖಲೆ ಪ್ರತಿಗಳು, ಲೆಟರ್ ಹೆಡ್​ಗಳು, 6 ಲಕ್ಷ ನಗದು, ಚಿತ್ರದ ಸ್ಟೋರಿ ಪ್ರತಿ ಕಳ್ಳತನ ಮಾಡಿದ್ದಾರೆಂದು ನಿರ್ದೇಶಕ ಕಿರಣ್ ನಾರಾಯಣ್ ದೂರು ನೀಡಿದ್ದಾರೆ.

ಅಲ್ಲದೇ ಸಿನಿಮಾ ಬಿಡುಗಡೆ ಮುನ್ನವೇ ಸಾರ್ವಜನಿಕರಿಗೆ ಚಿತ್ರ ಲೀಕ್ ಮಾಡಿ ನಷ್ಟವನ್ನುಂಟು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ ಅಂತಾ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

Source: newsfirstlive.com Source link