ಪಾಲಿಕೆ ಚುನಾವಣೆಯಲ್ಲಿ ಜಿಡಿಎಸ್​​ಗೆ ಹೀನಾಯ ಸೋಲು -ನೈತಿಕ ಹೊಣೆ ಹೊತ್ತು ಕೋನರೆಡ್ಡಿ ರಾಜೀನಾಮೆ‌

ಪಾಲಿಕೆ ಚುನಾವಣೆಯಲ್ಲಿ ಜಿಡಿಎಸ್​​ಗೆ ಹೀನಾಯ ಸೋಲು -ನೈತಿಕ ಹೊಣೆ ಹೊತ್ತು ಕೋನರೆಡ್ಡಿ ರಾಜೀನಾಮೆ‌

ಧಾರವಾಡ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​ಗೆ ಹೀನಾಯ ಸೋಲು ಎದುರಾಗಿದೆ. ಪಕ್ಷದ ಅಭ್ಯರ್ಥಿಗಳ ಸೋಲಿನ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ‌ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎನ್.ಹೆಚ್.ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಕೋನರೆಡ್ಡಿ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜೆಡಿಎಸ್​​ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿರೋದಾಗಿ ಸ್ಪಷ್ಟಪಡಿಸಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ ಕನಿಷ್ಠ ಹತ್ತು ಸ್ಥಾನ ಗೆಲ್ಲೋ ವಿಶ್ವಾಸವಿತ್ತು. ಆದರೆ ಕೇವಲ ಒಂದು ಸ್ಥಾನ ಲಭಿಸಿದೆ. ಬಿಜೆಪಿ ಆಡಳಿತಯಂತ್ರ ದುರಪಯೋಗ ಮಾಡಿ ಚುನಾವಣೆ ಗೆದ್ದಿದೆ. ನ್ಯಾಯಲಯದ ‌ಮಾನಿಟಿಂಗ್ ನಲ್ಲಿ ಚುನಾವಣೆ ನಡೆಯಬೇಕು. ಚುನಾವಣೆ ಆಯೋಗ ಕೂಡಾ ಸರ್ಕಾರದ ಅಧೀನದಲ್ಲಿ ನಡೆಯುತ್ತಿದೆ‌. ಹೀಗಾದ್ರೆ ಪ್ರಜಾಪ್ರಭುತ್ವಕ್ಕೆ ದಕ್ಕೆ ಬರುತ್ತೆ‌ ಎಂದು ಕೋನರೆಡ್ಡಿ ಆರೋಪ ಮಾಡಿದರು.

blank

Source: newsfirstlive.com Source link