ಉತ್ತರಾಖಂಡ್​ನಲ್ಲಿ ಭಾರೀ ಮಳೆ; ಭೂ ಕುಸಿತಕ್ಕೆ ಕೊಚ್ಚಿ ಹೋದ ರಿಷಿಕೇಶ್ ಪರ್ಯಾಯ ರಾಷ್ಟ್ರೀಯ ಹೆದ್ದಾರಿ

ಉತ್ತರಾಖಂಡ್​ನಲ್ಲಿ ಭಾರೀ ಮಳೆ; ಭೂ ಕುಸಿತಕ್ಕೆ ಕೊಚ್ಚಿ ಹೋದ ರಿಷಿಕೇಶ್ ಪರ್ಯಾಯ ರಾಷ್ಟ್ರೀಯ ಹೆದ್ದಾರಿ

ನವದೆಹಲಿ: ಉತ್ತರಾಖಂಡ್​​ನ ಡೆಹ್ರಾಡೂನ್-ರಾಣಿ ಪೋಖರಿ- ರಿಷಿಕೇಶ್ ಹೆದ್ದಾರಿಗೆ ಪರ್ಯಾಯವಾಗಿ ನಿರ್ಮಿಸಲಾಗಿದ್ದ ರಸ್ತೆ ಕೊಚ್ಚಿ ಹೋಗಿದೆ. ಕಳೆದ ರಾತ್ರಿ ಉತ್ತರಾಖಂಡ್​ನಲ್ಲಿ ಭಾರೀ ಮಳೆಯಾಗಿದ ಪರಿಣಾಮ ರಸ್ತೆ ಕೊಚ್ಚಿಕೊಂಡು ಹೋಗಿದೆ.

ಡೆಹ್ರಡೂನ್​​ ನಿಂದ ರಿಶಿಕೇಶ್​​ಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದ ಬಳಿಕ ವಾಹನಗಳ ಓಡಾಟಕ್ಕೆ ಅಂತಾ ಪರ್ಯಾಯವಾಗಿ ಈ ರಸ್ತೆಯನ್ನ ನಿರ್ಮಿಸಲಾಗಿತ್ತು. ರಸ್ತೆ ಕೊಚ್ಚಿಕೊಂಡು ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Image

ಆಗಸ್ಟ್​ 27 ರಂದು ಡೆಹ್ರಾಡೂನ್-ರಿಶಿಕೇಶ್ ರಸ್ತೆಯ ರಾಣಿ ಪೊಖರಿ ಗ್ರಾಮದಲ್ಲಿದ್ದ ಸೇತುವೆ ಮುರಿದು ಬಿದ್ದಿತ್ತು. ಈ ಅವಘಡದಲ್ಲಿ ಸೇತುವೆ ಮೇಲೆಯೇ ಕೆಲವು ವಾಹನಗಳು ಸ್ಟ್ರಕ್​ ಆಗಿದ್ದವು. ಇದೀಗ ಪರ್ಯಾಯವಾಗಿ ನಿರ್ಮಿಸಿದ್ದ ರಸ್ತೆಯೂ ಮಳೆಯಿಂದ ಕೊಚ್ಚಿಕೊಂಡು ಹೋಗಿದೆ.

ಇದನ್ನೂ ಓದಿ: ಕುಸಿದ ಡೆಹ್ರಾಡೂನ್-ರಿಶಿಕೇಶ್ ಬ್ರಿಡ್ಜ್​​ – ಸಂಚರಿಸುತ್ತಿದ್ದ ವಾಹನಗಳು ಪಲ್ಟಿ

Source: newsfirstlive.com Source link